Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬಿಗ್ಬಾಸ್ ಮನೆಯಲ್ಲಿ ಅಶ್ವಿನಿ ಗೌಡಗೆ ಕಿಚ್ಚನಿಂದ ಬಿಸಿಬಿಸಿ ಕಜ್ಜಾಯ ಸಿಕ್ಕಿದೆ. ಅಶ್ವಿನಿ ಗೌಡ ಅವರ ‘ಏಕವಚನ ಹೈಡ್ರಾಮಾ’ಕ್ಕೆ ಸುದೀಪ್ ಸಖತ್ ಆಗಿಯೇ ಕ್ಲಾಸ್ ತೆಗೆದುಕೊಂಡಿದ್ದು, ಇವತ್ತಿನ ಎಪಿಸೋಡ್ನ ಮೇಲೆ ವೀಕ್ಷಕರ ಎಕ್ಸೈಟ್ಮೆಂಟ್ ಮತ್ತಷ್ಟು ಹೆಚ್ಚುವಂತೆ ಮಾಡಿದೆ.
ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿಲ್ಲ ಎಂಬ ಆರೋಪಗಳನ್ನು ಅಶ್ವಿನಿ ಮಾಡುತ್ತಿದ್ದಾರೆ. ಬೇರೆಯವರಿಗೆ ಏಕವಚನದಲ್ಲಿ ಮಾತನಾಡುವ ಅವರು, ತಮಗೆ ಮಾತ್ರ ಗೌರವ ಬೇಕು ಎಂದು ನಿರೀಕ್ಷೆ ಮಾಡುತ್ತಾರೆ. ಈ ಬಗ್ಗೆ ಸುದೀಪ್ ಅವರು ವೀಕೆಂಡ್ನಲ್ಲಿ ಮಾತನಾಡಿದ್ದಾರೆ. ‘ಗೌರವ ನಿರೀಕ್ಷೆ ಮಾಡುವ ನೀವು ಪ್ರತಿಯೊಬ್ಬರಿಗೂ ಗೌರವ ಕೊಡೋದು ಕಲಿಯಿರಿ. ಈ ಮನೆಯಲ್ಲಿ ವುಮನ್ ಕಾರ್ಡ್ ಪ್ಲೇ ಮಾಡಬೇಡಿ’ ಎಂದು ಸುದೀಪ್ ಎಚ್ಚರಿಸಿದ್ದಾರೆ.
ಈ ವಾರ ಅಶ್ವಿನಿ ಗೌಡ ಸ್ಪರ್ಧಿಗಳು ತಮಗೆ ಮರ್ಯಾದೆ ಕೊಡ್ತಿಲ್ಲ ಎಂದು ದೊಡ್ಡ ಹೈಡ್ರಾಮಾ ಸೃಷ್ಟಿಸಿದ್ದರು. ಆರಂಭದಲ್ಲಿ ಗಿಲ್ಲಿ ನಟನ ಜೊತೆ ಜಗಳಕ್ಕೆ ಇಳಿದು ಕಣ್ಣೀರು ಇಟ್ಟಿದ್ದರು. ನಂತರ ರಘು ಜೊತೆ ಕಿತ್ತಾಡಿಕೊಂಡು ಕಣ್ಣೀರಿಟ್ಟು, ಬಿಗ್ಬಾಸ್ ಬಳಿ ಡೋರ್ ಓಪನ್ ಮಾಡುವಂತೆ ತಿಳಿಸಿದ್ದಾರೆ.
https://www.newsics.com/2025/11/22/8th-grade-student-dies-after-jumping-from-school-building/