Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಸಾಲ ಮಾಡಿಯಾದ್ರೂ ಮದುವೆ ಮಾಡು ಅನ್ನೋ ರೂಲ್ಸ್ ನ ಭಾರತೀಯರು ಕಟ್ಟುನಿಟ್ಟಾಗಿ ಪಾಲಿಸ್ತಿದ್ದಾರೆ. ನಾನೇನು ಕಮ್ಮಿ ಎನ್ನುವಂತೆ ಹೊಸ ಹೊಸ ಕಾನ್ಸೆಪ್ಟ್, ಭಿನ್ನ ಪದ್ಧತಿಗಳನ್ನು ಮದುವೆಯಲ್ಲಿ ನೋಡ್ಬಹುದು.
ಹಿಂದೆ ಚಿಕ್ಕ ಮಂಟಪದಲ್ಲಿ ನಡೆಯುತ್ತಿದ್ದ ಮದುವೆಗಳು ಈಗಿಲ್ಲ. ಸಂಪ್ರದಾಯ ಏನೇ ಆಗ್ಲಿ ಅದ್ಧೂರಿತನಕ್ಕೆ ಇಲ್ಲಿ ಡಿಮ್ಯಾಂಡ್ ಹೆಚ್ಚು. ಲೈಟಿಂಗ್, ಬಣ್ಣದ ಹೂ, ಅಲಂಕಾರಿಕ ವಸ್ತುಗಳಿಂದ ಹೊಳೆಯುವ ವೇದಿಕೆ, ಡಿಜೆ ಸೌಂಡ್, ತಿಂದು ತೇಗಲಾರದಷ್ಟು ವೆರೈಟಿ ಅಡುಗೆ ಹೀಗೆ ಆಡಂಬರಕ್ಕೆ ಜನ ಆಕರ್ಷಿತರಾಗ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿದೆ ಈ ವಿಡಿಯೋ. ಬೆಂಗಳೂರಿನಲ್ಲಿ ನಡೆದ ಮದ್ವೆಯಲ್ಲಿ ನವಜೋಡಿಗೆ ಆಶೀರ್ವಾದ ಮಾಡಲು ದೇವರು ಪ್ರತ್ಯಕ್ಷವಾಗಿದ್ದಾನೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನಮ್ಮ ಬೆಂಗಳೂರು ಹೆಸರಿನ ಖಾತೆಯಲ್ಲಿ ಹಂಚಿಕೊಂಡ ಈ ವಿಡಿಯೋದಲ್ಲಿ ಶೀರ್ಷಿಕೆಯಲ್ಲಿ ಡೈಲಾಗ್ ಇರುವುದನ್ನು ಕಾಣಬಹುದು. ನಾವು : ನಾವು ಸರಳ ಮದುವೆ ಬಯಸುತ್ತೇವೆ. ಪೋಷಕರು: ದೇವರ ಆಶೀರ್ವಾದದ ಜೊತೆ ಸರಳ ವಿವಾಹ. ಈ ಮಧ್ಯೆ ದೇವರ ಆಶೀರ್ವಾದ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.
ಈ ವಿಡಿಯೋದಲ್ಲಿ ವಧು – ವರರು ವೇದಿಕೆ ಮೇಲಿದ್ದಾರೆ. ಅವರ ಹಿಂದೆ ಸಂಬಂಧಿಕರು ನಿಂತಿದ್ದಾರೆ. ಸುಂದರವಾಗಿ ಅಲಂಕಾರಗೊಂಡ ವೇದಿಕೆ ಮೇಲೆ ಹೊಗೆ ಬರೋದನ್ನು ಕಾಣ್ಬಹುದು. ಆ ನಂತ್ರ ನಿಧಾನವಾಗಿ ವೆಂಕಟೇಶ್ವರ ಸ್ವಾಮಿ ನಡೆದು ಬರ್ತಾನೆ. ಇದನ್ನು ನೋಡಿದ ವಧು – ವರರು ಮಂಡಿಯೂರಿ ಕುಳಿತು ನಮಸ್ಕಾರ ಮಾಡ್ತಾರೆ. ಅವರ ಬಳಿ ಬರುವ ವೆಂಕಟೇಶ್ವರ ಸ್ವಾಮಿ, ಹೂವನ್ನು ವಧು ವರರ ತಲೆಯ ಮೇಲೆ ಹಾಕಿ ಆಶೀರ್ವಾದ ನೀಡುತ್ತಾರೆ.
ತಲೆಯ ಮೇಲೆ ಕಿರೀಟ, ಬಂಗಾರದ ಆಭರಣ, ಉಡುಪನ್ನು ನೋಡಿದ್ರೆ ನಿಜವಾಗಿಯೂ ವೆಂಕಟೇಶ್ವರ ಸ್ವಾಮಿಯೇ ಇಳಿದು ಬಂದಂತಿದೆ. ಹೂವಿನ ಆಶೀರ್ವಾದ ಆಗ್ತಿದ್ದಂತೆ ಪಟಾಕಿ ಸದ್ದನ್ನು ನೀವು ಕೇಳ್ಬಹುದು. ಒಟ್ಟಿನಲ್ಲಿ ಮದುವೆ ಮನೆಗೆ ಸ್ವತಃ ದೇವರೇ ಬಂದು ಆಶೀರ್ವಾದ ನೀಡಿದ್ದಾನೆ ಎನ್ನವು ಕಲ್ಪನೆಯನ್ನು ಅಲ್ಲಿ ಮೂಡಿಸಲಾಗಿದೆ.
https://www.instagram.com/reel/DQ3f68ykkDp/?igsh=Nml1MGhwZmUyNjc2