Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಉತ್ತರ ಪ್ರದೇಶ: ಶುಲ್ಕ ಕಟ್ಟದ ಕಾರಣ, ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಿದ್ದರಿಂದ ಬೇಸತ್ತ ವಿದ್ಯಾರ್ಥಿ ಕ್ಲಾಸ್‌ರೂಮ್‌ನೊಳಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಉತ್ತರ ಪ್ರದೇಶದ ಬುಧನದ ಡಿಎವಿಪಿಜಿ ಡಿಗ್ರಿ ಕಾಲೇಜಿನಲ್ಲಿ ನಡೆದಿದೆ.
ಇಲ್ಲಿನ ಡಿಎವಿ ಕಾಲೇಜಿನಲ್ಲಿ ಕಲಿಯುತ್ತಿದ್ದ ಬಿ.ಎ ಎರಡನೇ ವರ್ಷದ ವಿದ್ಯಾರ್ಥಿ ಉಜ್ವಲ್ ರಾಣಾ (24) ₹7,000 ರ ಶುಲ್ಕ ಪಾವತಿಸದ ಕಾರಣ, ಆಡಳಿತ ಮಂಡಳಿಯು ಪರೀಕ್ಷೆ ಬರೆಯಲು ಅವಕಾಶ ನೀಡಿರಲಿಲ್ಲ.
ಘಟನೆಗೂ ಮುಂಚೆ ಅವರು ವೀಡಿಯೋ ರೆಕಾರ್ಡ್ ಮಾಡಿ, ಬರೆದ ಡೆತ್‌ನೋಟ್‌ನಲ್ಲಿ ಪ್ರಾಂಶುಪಾಲ ಮತ್ತು ಮೂರು ಪೊಲೀಸ್ ಅಧಿಕಾರಿಗಳನ್ನು ತಮ್ಮ ಸಾವಿಗೆ ಜವಾಬ್ದಾರಿಯಾಗಿ ಗುರುತಿಸಿದ್ದಾರೆ. ನಾನು ಸಹಾಯ ಕೇಳಿದಾಗ ಪೊಲೀಸರು ಕಾಲೇಜು ಆಡಳಿತದ ಜೊತೆಗೆ ನಿಂತರು, ನನ್ನ ನಂಬಿಕೆ ಮತ್ತು ನ್ಯಾಯವನ್ನು ನಾಶಪಡಿಸಿದರುಎಂದು ಅವರು ಬರೆದಿದ್ದಾರೆ.
ರಾಣಾ ಅವರು ಕ್ಲಾಸ್‌ರೂಮ್‌ನಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದಾಗ ಶಿಕ್ಷಕರು ಯಾರೂ ಹಸ್ತಕ್ಷೇಪ ಮಾಡಲಿಲ್ಲ. ಸಹವಿದ್ಯಾರ್ಥಿಗಳೇ ಓಡಿ ಬಂದು ಬೆಂಕಿಯನ್ನು ಆರಿಸಿ ಅವರನ್ನು ರಕ್ಷಿಸಿದರು.ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಪರಿಸ್ಥಿತಿ ಗಂಭೀರವಾಗಿದೆ. ಹೆಚ್ಚಿನ ಚಿಕಿತ್ಸೆಗೆ ಆತ್ಯಾಧುನಿಕ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ
ಈಗ ಅವರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಪ್ರಾಂಶುಪಾಲ ಪ್ರದೀಪ್ ಕುಮಾರ್ ಸಿಂಗ್ ಅವರು ಘಟನೆಯ ಬಗ್ಗೆ ಮಾತನಾಡಿ, “ಕಾಲೇಜು ಒಂದು ಸೆಮಿಸ್ಟರ್‌ಗೆ ಅರ್ಧ ಶುಲ್ಕವನ್ನು ಸಂಗ್ರಹಿಸುತ್ತದೆ. ರಾಣಾ ಅವರ ಬಡತನದ ಹೇಳಿಕೆಯನ್ನು ನಾನು ನಂಬುತ್ತೇನೆಯೇ? ಅವರ ಬಳಿ ₹25,000 ಮೌಲ್ಯದ ಮೊಬೈಲ್ ಫೋನ್ ಇದೆ, ಪ್ರತಿದಿನ ಮೋಟಾರ್‌ಸೈಕಲ್‌ನಲ್ಲಿ ಬರುತ್ತಾರೆ, ಇಂಧನ ವೆಚ್ಚಕ್ಕೆ ₹1 ಲಕ್ಷ ಖರ್ಚು ಮಾಡುತ್ತಾರೆ. ಸರ್ಕಾರಿ ಸ್ಕಾಲರ್‌ಶಿಪ್‌ಗಳಿವೆ, ಶುಲ್ಕ ಪಾವತಿಸಲು ದುಡ್ಡಿಲ್ವಾ? ಎಂದು ಪ್ರಶ್ನಿಸಿದ್ದಾರೆ.
ಈ ಘಟನೆಯ ನಂತರ ವಿದ್ಯಾರ್ಥಿಗಳು ದೊಡ್ಡ ಆಂದೋಲನ ನಡೆಸಿದ್ದಾರೆ. ಪೊಲೀಸ್‌ಗಳು ಪ್ರಾಂಶುಪಾಲರ ವಿರುದ್ಧ ಬಿಎನ್‌ಎಸ್ ಸೆಕ್ಷನ್ 351(3) ಮತ್ತು 352 ಅಡಿಯಲ್ಲಿ ದೂರು ದಾಖಲಿಸಿದ್ದಾರೆ.