Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಗುರುಗ್ರಾಮ್: ಮೈಸೂರು ನಗರ ಸಾರಿಗೆಯಲ್ಲಿ ಅಳವಡಿಸಲಾದ ಧ್ವನಿ ಸ್ಪಂದನ ಕಾರ್ಯಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಕೇಂದ್ರ ಸರ್ಕಾರದ ಪ್ರಶಸ್ತಿಗೆ ಭಾಜನವಾಗಿದೆ.
ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಮನೋಹರ್ ಲಾಲ್, ಕೇಂದ್ರ ನಗರಾಭಿವೃದ್ಧಿ ರಾಜ್ಯ ಸಚಿವ ತೋಕನ್ ಸಾಹು ಈ ಪ್ರಶಸ್ತಿ ಪ್ರದಾನ ಮಾಡಿದರು. ಕೆಎಸ್ಆರ್‌ಟಿಸಿ ಎಂಡಿ ಅಕ್ರಂ ಪಾಷ ಪ್ರಶಸ್ತಿ ಸ್ವೀಕರಿಸಿದರು.
ಕೆಎಸ್ಆರ್‌ಟಿಸಿಯ ಮೈಸೂರು ನಗರ ಸಾರಿಗೆಯ 200 ಬಸ್‌ಗಳಲ್ಲಿ ಧ್ವನಿ ಸ್ಪಂದನ- ಆನ್‌ಬೋರ್ಡ್ ಬಸ್ ಐಡೆಂಟಿಫಿಕೇಷನ್ ಮತ್ತು ನ್ಯಾವಿಗೇಷನ್ ಸಿಸ್ಟಂನ್ನು ದೇಶದಲ್ಲೇ ಮೊದಲು ಜಾರಿಗೊಳಿಸಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಕೆಎಸ್ಆರ್‌ಟಿಸಿಗೆ ಈ ಪ್ರಶಸ್ತಿ ಲಭಿಸಿದೆ.
ಧ್ವನಿ ಸ್ಪಂದನ ವ್ಯವಸ್ಥೆಯಿಂದ ದೃಷ್ಟಿಹೀನ ಪ್ರಯಾಣಿಕರು ಆಡಿಯೊ ಸಿಗ್ನಲ್‌ಗಳನ್ನು ಬಳಸಿಕೊಂಡು ಬಸ್‌ಗಳನ್ನು ಗುರುತಿಸಲು ಮತ್ತು ಹತ್ತಲು ಅನುವು ಮಾಡಿಕೊಟ್ಟಿದೆ.
ಈ ಕಾರ್ಯಕ್ರಮದ ಭಾಗವಾಗಿ 400ಕ್ಕೂ ಹೆಚ್ಚು ದೃಷ್ಟಿ ವಿಕಲಚೇತನ ಬಳಕೆದಾರರಿಗೆ ಆನ್-ಬೋರ್ಡ್ ಬಸ್ ಗುರುತಿಸುವಿಕೆ ಮತ್ತು ಸಂಚರಣೆ ವ್ಯವಸ್ಥೆಯನ್ನು ನಿರ್ವಹಿಸಲು ಕೆಎಸ್ಆರ್‌ಟಿಸಿ ತರಬೇತಿ ನೀಡಿದೆ.