Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರು: ಶೀಲ ಶಂಕಿಸಿ ಪತಿಯೇ ಪತ್ನಿಯನ್ನ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಅಮೃತಹಳ್ಳಿಯ ಗಂಗಮ್ಮ ಲೇಔಟ್ನಲ್ಲಿ ನಡೆದಿದೆ.
ತರಕಾರಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಅಂಜಲಿ (20) ಮೃತ ಮಹಿಳೆಯಾಗಿದ್ದು, ಟ್ರಾವೆಲ್ಸ್ ಕಚೇರಿಯಲ್ಲಿ ಡ್ರೈವರ್ ಆಗಿದ್ದ ಆರೋಪಿ ರವಿಚಂದ್ರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪಾವಗಡ ಮೂಲದ ಅಂಜಲಿ, ಸುರಪುರ ಮೂಲದವನಾದ ರವಿಚಂದ್ರನನ್ನ ಮದುವೆಯಾಗಿದ್ದರು. ಮದುವೆ ನಂತರ ದಂಪತಿ ಅಮೃತಹಳ್ಳಿಯಲ್ಲಿ ವಾಸವಿದ್ದರು. ಪತ್ನಿಯ ಶೀಲದ ಬಗ್ಗೆ ಶಂಕಿಸಿದ್ದ ರವಿಚಂದ್ರ ಮೊಣಕಾಲಿನಿಂದ ಒದ್ದು ಹಲ್ಲೆ ನಡೆಸಿದ್ದಲ್ಲದೆ, ಚಾಕುವಿನಿಂದ ಕುತ್ತಿಗೆ ಇರಿದು ಬರ್ಬರ ಹತ್ಯೆ ಮಾಡಿದ್ದಾನೆ. ರಕ್ತದ ಮಡುವಿನಿನಲ್ಲಿ ಒದ್ದಾಡಿರುವ ಅಂಜಲಿ ಕೊನೆಯುಸಿರೆಳೆದಿದ್ದಾಳೆ. ಘಟನಾ ಸ್ಥಳಕ್ಕೆ ಸೋಕೋ ಟೀಂ ಭೇಟಿ ನೀಡಿದ್ದು, ತನಿಖೆ ನಡೆಸಿದೆ.