Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಭಾರತದಲ್ಲಿ, ಗಡ್ಡ ಬಿಟ್ಟ ಮತ್ತು ಮೀಸೆ ಬಿಟ್ಟ ಪುರುಷರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಾರೆ. ಬಹುತೇಕ ಎಲ್ಲಾ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಗಡ್ಡ ಮತ್ತು ಮೀಸೆ ಬಿಟ್ಟಿರುತ್ತಾರೆ. ಅಷ್ಟೇ ಅಲ್ಲ, ಯುವತಿಯರು ಗಡ್ಡ ಬಿಟ್ಟ ಯುವಕರನ್ನು ಬಯಸುತ್ತಾರೆ. ಜಗತ್ತಿನಲ್ಲಿ ಕೆಲವು ದೇಶಗಳಲ್ಲಿ ಯುವಕರು ಗಡ್ಡ ಬಿಟ್ಟ ಮತ್ತು ಮೀಸೆ ಬಿಡುವುದಿಲ್ಲ. ಆದರೆ ಕೊರಿಯನ್ ಯುವಕರು ಗಡ್ಡ ಬಿಡುವುದಿಲ್ಲ ಏಕೆ ಎಂದು ನಿಮಗೆ ತಿಳಿದಿದೆಯೇ?
ಕೊರಿಯನ್ ಪುರುಷರು ಗಡ್ಡ ಬೆಳೆಸುವುದೇ ಇಲ್ಲ ಎಂಬುದು ತಪ್ಪು ಕಲ್ಪನೆ. ಅವರು ಗಡ್ಡ ಬೆಳೆಸುತ್ತಾರೆ, ಆದರೆ ಅವರ ಕೂದಲಿನ ಬೆಳವಣಿಗೆ ನಿಧಾನಗತಿಯಲ್ಲಿರುತ್ತದೆ. ಪೂರ್ವ ಏಷ್ಯಾದ ಪುರುಷರಲ್ಲಿ ಟೆಸ್ಟೋಸ್ಟೆರಾನ್ ಹಾರ್ಮೋನ್ ಮಟ್ಟವು ಪಾಶ್ಚಾತ್ಯ ಅಥವಾ ದಕ್ಷಿಣ ಏಷ್ಯಾದ ಪುರುಷರಿಗಿಂತ ಕಡಿಮೆ ಮಟ್ಟದಲ್ಲಿರುತ್ತದೆ. ಟೆಸ್ಟೋಸ್ಟೆರಾನ್ ಮಟ್ಟವು ಗಡ್ಡ ಮತ್ತು ಮೀಸೆಯ ಬೆಳವಣಿಗೆಯಲ್ಲಿ ಮಹತ್ತರ ಪಾತ್ರವಹಿಸುತ್ತದೆ. ಹೀಗಾಗಿ ಕೊರಿಯನ್ ಪುರುಷರಲ್ಲಿ ಕೂದಲು ಕಡಿಮೆ ದಟ್ಟವಾಗುತ್ತದೆ ಮತ್ತು ನಿಧಾನವಾಗಿ ಬೆಳೆಯುತ್ತದೆ.
ಕೊರಿಯನ್ ಸಂಸ್ಕೃತಿಯಲ್ಲಿ ಸ್ವಚ್ಛ, ಅಚ್ಚುಕಟ್ಟಾದ ಮತ್ತು ಕ್ಲೀನ್-ಶೇವನ್ ಮುಖವನ್ನು ಹೆಚ್ಚು ಮೆಚ್ಚಲಾಗುತ್ತದೆ. ಗಡ್ಡವನ್ನು ಕೆಲವೊಮ್ಮೆ ಕೊಳಕು, ಅಶುದ್ಧ ಅಥವಾ ಸೋಮಾರಿತನದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಸಮಾಜದಲ್ಲಿ ಒಳ್ಳೆಯ ಪ್ರಥಮಾಭಿಪ್ರಾಯ ಪಡೆಯಲು ಸ್ವಚ್ಛ ಮುಖ ಮುಖ್ಯವೆಂದು ನಂಬಿಕೆ ಇದೆ. ಆದ್ದರಿಂದ ಅಲ್ಲಿ ಹೆಚ್ಚಿನ ಪುರುಷರು ಗಡ್ಡ ಮತ್ತು ಮೀಸೆ ಬಿಡುವುದಿಲ್ಲ.ಕೊರಿಯಾದಲ್ಲಿ ಉದ್ಯೋಗ ಕ್ಷೇತ್ರದಲ್ಲಿಯೂ ಸಹ ಸ್ವಚ್ಛ ಮುಖವನ್ನೇ ಪ್ರಾಧಾನ್ಯ ನೀಡಲಾಗುತ್ತದೆ. ಕಾರ್ಪೊರೇಟ್ ಜಗತ್ತಿನಲ್ಲಿ ಅಥವಾ ಸಾರ್ವಜನಿಕ ಸೇವೆಯಲ್ಲಿ ಕೆಲಸ ಮಾಡುವ ಪುರುಷರಿಗೆ ಗಡ್ಡವನ್ನು ಇಟ್ಟುಕೊಳ್ಳುವುದಕ್ಕಿಂತ ಶೇವ್ ಮಾಡುವುದು ಹೆಚ್ಚು ವೃತ್ತಿಪರತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದರಿಂದ ಅನೇಕ ಪುರುಷರು ತಮ್ಮ ಗಡ್ಡವನ್ನು ಬಿಡುವುದಿಲ್ಲ.
ಕೊರಿಯನ್ ಸಮಾಜದಲ್ಲಿ ಸೌಂದರ್ಯದ ಪ್ರಮುಖ ಭಾಗವೆಂದರೆ ಕಣ್ಣುಗಳು ಮತ್ತು ಚರ್ಮ. ಮೃದು ಚರ್ಮ, ಗಡ್ಡವಿಲ್ಲದ ಮುಖ ಮತ್ತು ಅಚ್ಚುಕಟ್ಟಾದ ತೋರ್ಪಡಿಕೆ ಅಲ್ಲಿ ಸೌಂದರ್ಯದ ಪ್ರತೀಕ. ಕೊರಿಯನ್ ಡ್ರಾಮಾಗಳಲ್ಲಿ ಹಾಗೂ ಕೆ-ಪಾಪ್ ತಾರೆಗಳಲ್ಲಿ ಈ ಶೈಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಇದರ ಪರಿಣಾಮವಾಗಿ ಅಲ್ಲಿ ಗಡ್ಡವಿಲ್ಲದ ಮುಖವೇ ಆಕರ್ಷಕವೆಂಬ ಕಲ್ಪನೆ ಸಾಮಾನ್ಯವಾಗಿದೆ.