Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಅಮೆರಿಕದ ಉದ್ಯಮಿ ಟೋನಿ ಕ್ಲೋರ್ ಎಂಬವರು ಬೆಂಗಳೂರಿನ ಬೀದಿಗಳನ್ನು ಸ್ವಚ್ಛಗೊಳಿಸಿ “ಸ್ವಚ್ಛ ಭಾರತ” ಸಂದೇಶವನ್ನು ಹೊಸ ರೀತಿಯಲ್ಲಿ ಸಾರಿದ್ದಾರೆ.
ಐದು ವರ್ಷಗಳ ಭಾರತೀಯ ವೀಸಾ ಪಡೆದು ಬೆಂಗಳೂರಿನಲ್ಲಿ ನೆಲೆಸಿರುವ ಈ ಅಮೆರಿಕನ್ ವ್ಯಕ್ತಿ, ಪೌರಕಾರ್ಮಿಕರ ಜೊತೆ ಸೇರಿ ಪಾದಚಾರಿ ಮಾರ್ಗಗಳನ್ನು ಸ್ವಚ್ಛಗೊಳಿಸಿದರು. ಅವರು ಲುಂಗಿ ತೊಟ್ಟು, ಕೈಯಲ್ಲಿ ಪೊರಕೆ ಹಿಡಿದು ಬಿಬಿಎಂಪಿ ಕಾರ್ಮಿಕರ ಜೊತೆ ಕೆಲಸ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಟೋನಿ ಅವರು ತಮ್ಮ X (ಹಿಂದಿನ ಟ್ವಿಟ್ಟರ್) ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದು, ” ಬೆಂಗಳೂರಿನ ಪಾದಚಾರಿ ಮಾರ್ಗಗಳು ಕೊಳಕಾಗಿವೆ… ನಾನು ಬಿಬಿಎಂಪಿಯ ಹೀರೋಗಳ ಜೊತೆ ‘ಶ್ವೇತ ಪೌರಕಾರ್ಮಿಕ’ ಆಗಿ ಸೇರಿದ್ದೇನೆ” ಎಂದು ಹಾಸ್ಯಮಯ ಶೀರ್ಷಿಕೆ ಬರೆದಿದ್ದಾರೆ. ಅವರ ಈ ವಿಡಿಯೋ ಈಗ ಮೂರು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ನೂರಾರು ಮಂದಿ ಪ್ರಶಂಸೆಯ ಕಾಮೆಂಟ್‌ಗಳೊಂದಿಗೆ ಪ್ರತಿಕ್ರಿಯಿಸಿದ್ದಾರೆ.
ಒಬ್ಬ ಬಳಕೆದಾರ “ವಿದೇಶಿಗರು ನಮ್ಮ ನಗರವನ್ನು ಸ್ವಚ್ಛಗೊಳಿಸುತ್ತಿರುವುದು ನಮಗೆ ನಾಚಿಕೆಗೇಡಿನ ಸಂಗತಿ” ಎಂದರೆ, ಮತ್ತೊಬ್ಬರು “ಸ್ವಚ್ಛ ಭಾರತ ಅಭಿಯಾನದ ನಿಜವಾದ ಮುಖ ನೀವು!” ಎಂದು ಶ್ಲಾಘಿಸಿದ್ದಾರೆ. ಇನ್ನೊಬ್ಬರು “ಟೋನಿ ಕ್ಲೋರ್ ಅವರ ಈ ಕೆಲಸ ಎಲ್ಲರಿಗೂ ಪ್ರೇರಣೆ” ಎಂದು ಕಾಮೆಂಟ್ ಮಾಡಿದ್ದಾರೆ.
https://x.com/TonyCatoff/status/1984209420805685683?ref_src=twsrc%5Etfw%7Ctwcamp%5Etweetembed%7Ctwterm%5E1984209420805685683%7Ctwgr%5E0f400ee7c0999ba56e1e0f61c35d79f8f1d874a5%7Ctwcon%5Es1_c10&ref_url=https%3A%2F%2Fapi-news.dailyhunt.in%2F
ಗೆಳೆಯನೊಂದಿಗೆ ಕಾರಿನಲ್ಲಿ ಕುಳಿತಿದ್ದ ಕಾಲೇಜು ವಿದ್ಯಾರ್ಥಿನಿ ಅಪಹರಿಸಿ, ಲೈಂಗಿಕ ದೌರ್ಜನ್ಯ