Subscribe ನ್ಯೂಸಿಕ್ಸ್ ಕನ್ನಡ
NewsicsKannada/ YouTube
newsics.com
ನಾವು ಬಳಸಿದ ಬಟ್ಟೆಗಳು ಹಳೆಯದಾದ ಮೇಲೆ ಅಥವಾ ಅದು ಹರಿದು ಹೋದ ಮೇಲೆ ಅಥವಾ ಅದು ಕೊಳೆಯಾದ ಮೇಲೆ ಅದನ್ನು ಮನೆಯಲ್ಲಿ ನೆಲ ಒರೆಸಲು ಬಳಸಿಕೊಳ್ಳುತ್ತೇವೆ. ಇಂತಹ ಹಳೆ ಬಟ್ಟೆಯನ್ನು ಅಥವಾ ಅಗತ್ಯವಿಲ್ಲದ ಬಟ್ಟೆಯನ್ನು ನಾವು ಮನೆಯನ್ನು ಒರೆಸಲು ಬಳಸಿಕೊಳ್ಳಬಹುದೇ.? ಎಂತಹ ಬಟ್ಟೆಯಿಂದ ನಾವು ಮನೆ ಒರೆಸಬಾರದು.?
ಹಳೆ ಬಟ್ಟೆಯನ್ನು ಮನೆಯನ್ನು ಒರೆಸಬಾರದು ಎಂಬುದರ ಹಿಂದಿನ ಕಾರಣವೇನೆಂದರೆ ಅಂತಹ ಬಟ್ಟೆಯಲ್ಲಿ ಅದನ್ನು ಬಳಸಿದ ವ್ಯಕ್ತಿಯ ಶಕ್ತಿಯು ಹಾಗೇ ಉಳಿದುಕೊಂಡಿರುತ್ತದೆ. ಆ ಬಟ್ಟೆಯಿಂದ ನಾವು ಮನೆಯನ್ನು ಒರೆಸಿದಾಗ ಅಥವಾ ಮನೆಯನ್ನು ಸ್ವಚ್ಛಗೊಳಿಸಿದಾಗ ಆ ಬಟ್ಟೆಯನ್ನು ಧರಿಸಿದ ವ್ಯಕ್ತಿಯ ಜೀವನವೂ ನೆಲ ಒರೆಸುವ ಬಟ್ಟೆಯಂತಾಗುತ್ತದೆ. ಅವನ ಅದೃಷ್ಟವೂ ದುರಾದೃಷ್ಟವಾಗಿ ಬದಲಾಗುತ್ತದೆ. ಅವನ ಜೀವನದಲ್ಲಿ ನಕಾರಾತ್ಮಕ ಶಕ್ತಿಯು ತನ್ನ ಪ್ರಭಾವವನ್ನು ಹೆಚ್ಚಾಗಿಸುತ್ತದೆ.
ನಿಮ್ಮ ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ, ಅವರ ಬಟ್ಟೆಗಳು ಬೇಗನೆ ಹಳೆಯದಾಗುತ್ತವೆ ಮತ್ತು ಮಕ್ಕಳು ಬೇಗನೆ ಬೆಳೆಯುವುದರಿಂದ ಹೊಸ ಬಟ್ಟೆಗಳನ್ನು ಖರೀದಿಸುವುದು ಅನಿವಾರ್ಯವಾಗಿರುತ್ತದೆ. ಅದರಂತೆ ಹಳೆಯ ಬಟ್ಟೆಗಳನ್ನು ಅನೇಕ ಮನೆಗಳಲ್ಲಿ ಸ್ವಚ್ಛಗೊಳಿಸಲು ಬಳಸಲಾಗುತ್ತದೆ. ಆದಾಗ್ಯೂ, ವಾಸ್ತು ಶಾಸ್ತ್ರದಲ್ಲಿ ಇದನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ. ಇದು ನಿಮ್ಮ ಮಗುವಿನ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರಬಹುದು.
ಅನೇಕ ಕುಟುಂಬಗಳಲ್ಲಿ, ವೃದ್ಧರ ಅಥವಾ ವಯಸ್ಕರ ಹಳೆಯ ಬಟ್ಟೆಗಳನ್ನು ಸ್ವಚ್ಛಗೊಳಿಸಲು ಬಳಸಲಾಗುತ್ತದೆ. ಆದಾಗ್ಯೂ, ವಾಸ್ತು ಶಾಸ್ತ್ರವು ವೃದ್ಧರ ಅಥವಾ ಸತ್ತ ವ್ಯಕ್ತಿಯ ಬಟ್ಟೆಗಳನ್ನು ನೆಲ ಒರೆಸಲು ಬಳಸುವುದನ್ನು ನಿಷೇಧಿಸುತ್ತದೆ.
ಹಳೆಯ ಬಟ್ಟೆಗಳಿಂದ ಮನೆಯನ್ನು ಸ್ವಚ್ಛಗೊಳಿಸುವುದರಿಂದ ಅಥವಾ ಅಂತಹ ಬಟ್ಟೆಯಿಂದ ನೆಲವನ್ನು ಒರೆಸುವುದರಿಂದ ಕುಟುಂಬವು ಹಣಕಾಸಿನ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದು ಅವರ ಜೀವನದ ಹಣಕಾಸಿನ ಸ್ಥಿತಿಯ ಮೇಲೆ ಕೆಟ್ಟ ಅಥವಾ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ. ಶ್ರೀಮಂತರಾಗಿದ್ದರೂ ಇದು ಅವರನ್ನು ಬಡವರನ್ನಾಗಿ ಮಾಡುತ್ತದೆ.