Subscribe ನ್ಯೂಸಿಕ್ಸ್ ಕನ್ನಡ
NewsicsKannada/ YouTube
newsics.com
34 ರಿಂದ 38 ವರ್ಷದೊಳಗಿನ ಮಹಿಳೆಯರು ಏಕೆ ಚೀಟ್ ಮಾಡ್ತಾರೆ ಎಂಬುದನ್ನು ಸಂಬಂಧ ತರಬೇತುದಾರ ಕೋಮಲ್ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ವಿವರಿಸಿದ್ದಾರೆ.
ಮಹಿಳೆ ತನ್ನ ಸಂಗಾತಿಗೆ ಮೋಸ ಮಾಡಲು ಅಥವಾ ದ್ರೋಹ ಮಾಡಲು ಕಾಮವು ಅಪರೂಪ ಎಂದು ಸಂಬಂಧ ತರಬೇತುದಾರರು ಹೇಳುತ್ತಾರೆ. ಒಂಟಿತನ, ಭಾವನಾತ್ಮಕತೆ ಮತ್ತು ಸೆಲ್ಫ್ ರಿಯಲೈಸೇಶನ್ ವಂಚನೆಗೆ ಪ್ರಮುಖ ಕಾರಣಗಳಾಗಿರಬಹುದು. ಈ ವಯಸ್ಸಿಗೆ ಬರುವ ಹೊತ್ತಿಗೆ ಮಹಿಳೆಯರು ಭಾವನಾತ್ಮಕವಾಗಿ ಕಳೆದುಹೋಗಿರುತ್ತಾರೆ. ತಾಯಿಯಾಗಿ, ಹೆಂಡತಿಯಾಗಿ ಮತ್ತು ಮನೆಯ ಪಾಲಕರಾಗಿ ಹೆಚ್ಚು ಸಮಯವನ್ನು ಕಳೆಯುತ್ತಾರೆ. ಆಗ ಅವರಿಗೆ ತಮ್ಮ ಕನಸುಗಳು ಮತ್ತು ಆಸೆಗಳಿಗೆ ಇನ್ನು ಮುಂದೆ ಬೆಲೆಯಿಲ್ಲ ಅನಿಸಬಹುದು.
ಸಂಗಾತಿಗೆ ತನ್ನ ಬಗ್ಗೆ ಒಂಚೂರು ಭಾವನೆ ಇಲ್ಲದಿರುವುದು, ಸಾಮೀಪ್ಯ ಇಲ್ಲದಿರುವುದರಿಂದ ಸಹ ಒಂಟಿತನವನ್ನು ಅನುಭವಿಸಬಹುದು. ಮಹಿಳೆಯರಿಗೆ ವಿಶೇಷವಾಗಿ ಪ್ರೀತಿ, ತಿಳುವಳಿಕೆ ಮತ್ತು ತಮ್ಮ ಸಂಗಾತಿಯೊಂದಿಗೆ ಸುರಕ್ಷಿತ ಭಾವನಾತ್ಮಕ ಬಂಧದ ಅಗತ್ಯವಿದೆ
ಮಹಿಳೆಯರು ಸಾಮಾನ್ಯವಾಗಿ 30 ವರ್ಷಗಳ ನಂತರ ತಮಗೆ ಅಸ್ತಿತ್ವವೇ ಇಲ್ಲವೇನೋ ಎಂಬಂತಹ ಸಮಸ್ಯೆ ಅನುಭವಿಸುತ್ತಾರೆ. ಆಗಾಗ್ಗೆ ತಮ್ಮನ್ನು ತಾವು “ನನ್ನ ಕುಟುಂಬದಿಂದ ಹೊರಗೆ ನಾನು ಯಾರು?”, “ನಾನು ನನ್ನ ಆಸೆಗಳನ್ನು ತ್ಯಜಿಸಿದ್ದೇನೆಯೇ?”, ಮತ್ತು “ನಿಜವಾಗಿಯೂ ಪ್ರೀತಿ ಎಂದರೆ ಇದೇನಾ?” ಎಂದು ಕೇಳಿಕೊಳ್ಳುತ್ತಾರೆ.
ಮಹಿಳೆಯರು ತಮ್ಮ ಸಂಗಾತಿಯಿಂದ ಪ್ರೀತಿಯನ್ನು ಪಡೆಯದಿದ್ದಾಗ ಅಥವಾ ಸಂಗಾತಿ ಅವರನ್ನು ಗಮನಿಸುವುದನ್ನು ನಿಲ್ಲಿಸಿದಾಗ ಅವರ ಜೀವನದಲ್ಲಿ ಹೊಸಬರು ಬರುತ್ತಾರೆ. ಕೊನೆಗೆ ಅವರು ಅವರನ್ನು ಗಮನಿಸಲು, ಮೆಚ್ಚಿಸಲು ಪ್ರಾರಂಭಿಸುತ್ತಾರೆ. ಮಹಿಳೆಗೆ ಮೊದಲಿದ್ದ ಉಸಿರುಗಟ್ಟಿದ ವಾತವರಣ ಹೋಗಿ ಈಗ ಮತ್ತೆ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ತೋರುತ್ತದೆ.
ಮಹಿಳೆಯರು ವಯಸ್ಸಾದಂತೆ ಕಾಮಕ್ಕಿಂತ ಹೆಚ್ಚಾಗಿ ಪೂರೈಸದ ಅಗತ್ಯತೆಗಳು ಮತ್ತು ಕಳೆದುಹೋದ ಭಾವನೆ ಬರತೊಡಗುತ್ತದೆ. ಹಾಗಾಗಿ ಸಂಬಂಧ ತರಬೇತುದಾರರು ಈ ಪೋಸ್ಟ್ ಮೂಲಕ ಮಹಿಳೆಯರು ಏಕೆ ಮೋಸ ಮಾಡುತ್ತಾರೆ ಎಂಬುದನ್ನು ವಿವರಿಸಲು ಪ್ರಯತ್ನಿಸಿದ್ದಾರೆ.
Consensual se*x is not a crime ಪರಸ್ಪರ ಸಮ್ಮತಿಯ ಲೈಂ*ಗಿಕ ಕ್ರಿಯೆ ಅಪರಾಧವಲ್ಲ: ಕರ್ನಾಟಕ ಹೈಕೋರ್ಟ್ ತೀರ್ಪು