Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಐಟಿ ಕಂಪನಿಗಳ ಉದ್ಯೋಗಿಗಳು (ಟೆಕ್ಕಿಗಳು) ಹೊಸತೊಂದು ಹವ್ಯಾಸ ಶುರು ಮಾಡಿಕೊಂಡಿದ್ದಾರೆ. ಅದೇನೆಂದರೆ, ಡಬಲ್ ಆ್ಯಕ್ಟಿಂಗ್!
ಹಗಲು ಹೊತ್ತಿನಲ್ಲಿ ಟೆಕ್ಕಿಗಳಾಗಿ ದುಡಿಯೋದು. ರಾತ್ರಿ ಹೊತ್ತಿನಲ್ಲಿ ಟ್ಯಾಕ್ಸಿ ಡ್ರೈವರ್‌ಗಳಾಗಿ ಬದಲಾಗುತ್ತಿದ್ದಾರೆ. ಐಟಿ ರಂಗದಲ್ಲಿ ಇದನ್ನು ಮೂನ್ ಲೈಟಿಂಗ್ ಎಂದು ಕರೆಯುತ್ತಾರೆ. ಅಂದರೆ ಬೇರೆ ಬೇರೆ ಕಡೆಯಿಂದ ಸಂಪಾದನೆ ಮಾಡುವುದು. ಆದರೂ, ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಬಳ ಪಡೆಯುವ ಬೆಂಗಳೂರಿನ ಟೆಕ್ಕಿಗಳಿಗೇಕೆ ಈ ಚಟ ಅಂದ್ರಾ?
ಅವರು ದುಡಿಯುತ್ತಿರುವ ಹಣ ಸಾಲುತ್ತಿಲ್ಲವೇ? ಅಥವಾ ಸುಮ್ಮನೇ ಟೈಂ ಪಾಸ್‌ಗಾಗಿ ಹೀಗೆ ಮಾಡುತ್ತಿದ್ದಾರೆಯೇ?
ಬೆಂಗಳೂರು ಟೆಕ್ಕಿಗಳಿಗೆ ಜೀವನವೇ ಒಂದು ಯಾಂತ್ರಿಕವಾಗಿ ಬಿಟ್ಟಿದೆ. ಇದರಿಂದಾಗಿ ಏಕತಾನತೆ ಉಂಟಾಗಿದ್ದು ಅದರಿಂದ ಮಾನಸಿಕ ಕಿರಿಕಿರಿಗಳು, ಕೋಪ, ಉದ್ವೇಗ ಇತ್ಯಾದಿ ಸಮಸ್ಯೆಗಳು ಕಾಡುತ್ತಿವೆಯಂತೆ. ಇದರಿಂದ ಹೊರಬರಲು ಟೆಕ್ಕಿಗಳು ಟ್ರೆಕ್ಕಿಂಗ್, ನೈಟ್ ಪಾರ್ಟಿಗಳ ಕಡೆಗೆ ಹೋಗುತ್ತಿದ್ದರೂ ಅದರಿಂದ ಅವರ ಆಂತರಿಕ ಸಮಸ್ಯೆಗಳು ಬಗೆಹರಿಯುತ್ತಿಲ್ಲ. ಹಾಗಾಗಿ, ಫಾರ್ ಎ ಚೇಂಜ್ ಎಂಬ ರೀತಿಯಲ್ಲಿ ರಾತ್ರಿ ಹೊತ್ತು ಕ್ಯಾಬ್ ಗಳನ್ನು ಓಡಿಸಲಾರಂಭಿಸಿದ್ದಾರೆ.
ಈಗಾಗಲೇ ಕೆಲ ಟೆಕ್ಕಿಗಳು ರಾತ್ರಿ ಹೊತ್ತು ಕ್ಯಾಬ್ ಓಡಿಸುತ್ತಿದ್ದು, ಓಲಾ, ಉಬರ್, ರ‌್ಯಾಪಿಡೊ, ನಮ್ಮ ಯಾತ್ರಿ ಇತ್ಯಾದಿ ಕ್ಯಾಬ್ ಅಗ್ರಿಗೇಟರ್ ಸಂಸ್ಥೆಗಳಲ್ಲಿ ನೋಂದಾಯಿಸಿಕೊಂಡು ಕ್ಯಾಬ್ ಚಲಾಯಿಸುತ್ತಿದ್ದಾರೆ.
ಆದರೆ, ಅವರು ಕ್ಯಾಬ್ ಮತ್ತು ಆಟೋ ಚಾಲಕರ ಸಂಘಕ್ಕೆ ನೋಂದಣಿಯಾಗುತ್ತಿಲ್ಲ. ಚಾಲಕರ ಸಂಘಕ್ಕೆ ನೋಂದಾಯಿಸಬೇಕು ಎಂಬುದು ಕಡ್ಡಾಯವೇನಲ್ಲ. ಅವರಿಗೆ ಡ್ರೈವಿಂಗ್ ಲೈಸನ್ಸ್ ಇದ್ದರೆ ಸಾಕು. ಹೀಗಾಗಿ, ಅವರು ಕ್ಯಾಬ್ ಅಗ್ರಿಗೇಟರ್ ಸಂಸ್ಥೆಗಳಲ್ಲಿ ಮಾತ್ರ ನೋಂದಾಯಿಸಿಕೊಂಡು ರಾತ್ರಿ ಹೊತ್ತು ಕ್ಯಾಬ್ ಚಾಲನೆ ಮಾಡುತ್ತಿದ್ದಾರೆ.
ಬೆಂಗಳೂರಿನ ಮಾಲ್ ಒಂದರ ಸಿನಿಮಾ ಹಾಲ್‌ನಲ್ಲಿ ಟೆಕ್ಕಿಯೊಬ್ಬರು ಸಿನಿಮಾ ನೋಡುತ್ತಿದ್ದರೂ ತಮ್ಮ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನು ಗಮನಿಸಿದ ವ್ಯಕ್ತಿಯೊಬ್ಬರು ಆ ಟೆಕ್ಕಿಯ ಪರಿಸ್ಥಿತಿಯನ್ನು ಚಿತ್ರೀಕರಿಸಿ ‘ರೆಡ್ಡಿಟ್’ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇಂದಿನ ಯುವ ವೃತ್ತಿಪರರ ಮೇಲೆ ಇರುವ ಕೆಲಸದ ಅತಿಯಾದ ಒತ್ತಡವನ್ನು ಎತ್ತಿ ತೋರಿಸಿದ್ದಾರೆ. ಈ ಫೋಟೋ ‘ವರ್ಕ್-ಲೈಫ್ ಬ್ಯಾಲೆನ್ಸ್’ (ಕೆಲಸ ಮತ್ತು ವೈಯಕ್ತಿಕ ಜೀವನದ ಸಮತೋಲನ) ಕುರಿತು ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ.
ಈ ಮಧ್ಯೆ, ಬೆಂಗಳೂರಿನ ಕಳಪೆ ಮೂಲಸೌಕರ್ಯದ ಬಗ್ಗೆ ಉದ್ಯಮಿಗಳು ಮತ್ತು ಸಚಿವರ ನಡುವೆ ನಡೆಯುತ್ತಿದ್ದ ವಾಗ್ವಾದಗಳ ನಡುವೆಯೇ, ಟೋಕಿಯೊಗೆ ಭೇಟಿ ನೀಡಿದ ಟೆಕ್ಕಿಯೊಬ್ಬರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಬರೆದ ಪೋಸ್ಟ್ ವೈರಲ್ ಆಗಿದೆ.
ಜಪಾನ್‌ನ ಶಿಸ್ತು, ಸ್ವಚ್ಛತೆ ಮತ್ತು ವ್ಯವಸ್ಥೆಯನ್ನು ಕಂಡ ಆ ಟೆಕ್ಕಿ, ಭಾರತವು ಇಂತಹ ಮಟ್ಟವನ್ನು ಮುಂದಿನ 100 ವರ್ಷಗಳಲ್ಲಿಯೂ ತಲುಪಲು ಸಾಧ್ಯವಿಲ್ಲ ಎಂದು ‘ರೆಡ್ಡಿಟ್’ನಲ್ಲಿ ಬೇಸರದಿಂದ ಹೇಳಿಕೊಂಡಿದ್ದು, ಈ ಪೋಸ್ಟ್ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಜಿಎಸ್‌ಟಿ ನೋಟಿಸ್‌ಗಳಿಂದ ಬೇಸತ್ತ ಬೆಂಗಳೂರಿನ ಡೇಟಾ ಸೈನ್ಸ್ ಟೆಕ್ಕಿಯೊಬ್ಬರು, ತೆರಿಗೆ ಹೊರೆ ಹೆಚ್ಚಾಗುತ್ತದೆ ಎಂಬ ಕಾರಣಕ್ಕೆ ₹48 ಲಕ್ಷದ ಪ್ರಸ್ತುತ ವೇತನ ಪ್ಯಾಕೇಜ್‌ನಿಂದ ₹75 ಲಕ್ಷದ ಆಫರ್ ಅನ್ನು ತಿರಸ್ಕರಿಸಿದ್ದಾರೆ. ತನಗೆ ಲಭಿಸಿದ ದೊಡ್ಡ ಸಂಬಳದ ಆಫರ್ ಅನ್ನು ತೆರಿಗೆಯ ಕಾರಣಕ್ಕಾಗಿ ನಿರಾಕರಿಸಿರುವ ಕುರಿತು ಅವರು ರೆಡ್ಡಿಟ್‌ನಲ್ಲಿ ಬರೆದ ಪೋಸ್ಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಚರ್ಚೆಗೊಳಗಾಗಿದೆ. ಇದೆಲ್ಲ ಟೆಕ್ಕಿ ಲೋಕದ ಸದ್ಯದ ಚರ್ಚೆಯ ವಿಷಯಗಳು.
ಮಾಂಸಕ್ಕಿಂತ 12 ಪಟ್ಟು ಹೆಚ್ಚು ಶಕ್ತಿ ನೀಡತ್ತೆ ಈ ಆಯುರ್ವೇದ ಕ್ಯಾಪ್ಸುಲ್!
ಮುತ್ತಿಕ್ಕಿ ಅಂಗಿಯ ಮೇಲೆ ಕೈ ಹಾಕಿದ- ಕಾಸ್ಟಿಂಗ್ ಕೌಚ್ ಕರಾಳತೆ ಬಿಚ್ಚಿಟ್ಟ ನಟಿ