Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
ಬೆಂಗಳೂರು: ಉಸಿರುಗಟ್ಟಿಸಿ 7 ವರ್ಷದ ಮಗಳು ಮಲತಂದೆ ಕೊಲೆ ಮಾಡಿದ ಘಟನೆ ಬೆಂಗಳೂರಿನ ಕುಂಬಳಗೋಡು ಠಾಣಾ ವ್ಯಾಪ್ತಿಯ ಕನ್ನಿಕಾ ಬಡಾವಣೆಯಲ್ಲಿ ನಡೆದಿದೆ.
ಕೊಲೆಯಾದ ಸಿರಿಯ ತಾಯಿ ಎರಡನೇ ಮದುವೆಯಾಗಿದ್ದರು. ಮೊದಲ ಪತಿ ದೂರವಾದ ಮೇಲೆ ದರ್ಶನ್ ಜೊತೆಗೆ ಮದುವೆಯಾಗಿದ್ದರು.
ಪತ್ನಿಯ ಜೊತೆ ಗಲಾಟೆ ಮಾಡಿದ್ದ ಆರೋಪಿ ದರ್ಶನ್ ಮಗಳನ್ನು ಕೊಲೆ ಮಾಡಿದ್ದಾನೆ. ಮಗಳು ಸಿರಿಯನ್ನು ಕೊಲೆ ಮಾಡಿ ಆರೋಪಿ ದರ್ಶನ್ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಕುಂಬಳಗೋಡು ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.