Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ರಶ್ಮಿಕಾ ಮಂದಣ್ಣ ಅವರ ‘ಥಮ’, ಸೂಪರ್ ಹಿಟ್ ಸಿನಿಮಾ ‘ಸ್ತ್ರೀ 2’ ಸೇರಿದಂತೆ ಇನ್ನೂ ಹಲವು ಸಿನಿಮಾಗಳಿಗೆ ಸಂಗೀತ ನೀಡಿರುವ ಸಂಗೀತ ನಿರ್ದೇಶಕ ಸಚಿನ್ ಸಂಘ್ವಿ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದ್ದು, ಸಚಿನ್ ಅವರನ್ನು ಪೊಲೀಸರು ಬಂಧಿಸಿ, ಠಾಣೆ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
ಸಚಿನ್ ಸಂಘ್ವಿ ವಿರುದ್ಧ ಯುವತಿಯೊಬ್ಬರು ಲೈಂಗಿಕ ದೌರ್ಜನ್ಯ ಆರೋಪ ಹೊರಿಸಿ ದೂರು ನೀಡಿದ್ದರು. ಸಚಿನ್ ಸಂಘ್ವಿ, ತಮಗೆ ಸಂಗೀತ ಕ್ಷೇತ್ರದಲ್ಲಿ ಅವಕಾಶ ನೀಡುವುದಾಗಿ, ಪ್ರತ್ಯೇಕ ಮ್ಯೂಸಿಕ್ ಆಲ್ಬಮ್ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು ಹಾಗೂ ಮದುವೆ ಆಗುವುದಾಗಿ ನಂಬಿಸಿ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಯುವತಿ ದೂರು ನೀಡಿದ್ದರು.
ಯುವತಿಯ ದೂರಿನಂತೆ, 2024 ರಲ್ಲಿ ಸಚಿನ್, ಯುವತಿಯನ್ನು ಇನ್ಸ್ಟಾಗ್ರಾಂ ಮೂಲಕ ಸಂಪರ್ಕ ಮಾಡಿದ್ದರಂತೆ. ಹೊಸ ಮ್ಯೂಸಿಕ್ ಆಲ್ಬಮ್ನಲ್ಲಿ ಅವಕಾಶ ನೀಡುವುದಾಗಿ ಸಚಿನ್ ಹೇಳಿದ್ದರಂತೆ. ಇಬ್ಬರೂ ಸಹ ಆಗಿನಿಂದ ಪರಿಚಯದಲ್ಲಿದ್ದರಂತೆ. ಸಚಿನ್, ಒಮ್ಮೆ ಯುವತಿಯನ್ನು ತನ್ನ ಸ್ಟುಡಿಯೋಗೆ ಕರೆಸಿಕೊಂಡು, ಅಲ್ಲಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಯುವತಿ ಹೇಳಿದ್ದಾರೆ.
ಅಲ್ಲದೆ, ಸಚಿನ್, ತಮ್ಮನ್ನು ಮದುವೆ ಆಗುವುದಾಗಿ ಹೇಳಿ, ಹಲವು ಬಾರಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಯುವತಿ ದೂರಿದ್ದಾರೆ.
ಇನ್‌ಸ್ಟಾನಲ್ಲಿ ಪರಿಚಯವಾದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ಅಪ್ರಾಪ್ತೆ ಈಗ ಗರ್ಭಿಣಿ