Newsics_Kannada
Subscribe and watch video
ನ್ಯೂಸಿಕ್ಸ್ ಕನ್ನಡ
ಬನ್ನಿ ನಮ್ ಸಂಗಡ
newsics.com
ಕಾಮಿಡಿ ಕಲಾವಿದ ಮಂಡ್ಯ ಜಿಲ್ಲೆ ಮಳವಳ್ಳಿ ಮಠದಪುರದ ಗಿಲ್ಲಿ ನಟ (ನಟರಾಜ್) ಅವರು ಬಿಗ್ ಬಾಸ್ ಮನೆಯಲ್ಲಿ ಬಹಳ ಆ್ಯಕ್ಟೀವ್ ಆಗಿದ್ದಾರೆ. ಗಿಲ್ಲಿ ನಟ ಅಶ್ವಿನಿ ಮತ್ತು ಜಾನ್ವಿ ವಿರುದ್ಧ ಸಮರ ಸಾರಿದ್ದಾರೆ. ರಕ್ಷಿತಾಗೆ ಕಿರುಕುಳ ನೀಡಿದ ವಿಚಾರಕ್ಕೆ, ಗಿಲ್ಲಿ ನಟ ಹಾಡಿನ ಮೂಲಕ ಹಾಗೂ ಖಡಕ್ ಮಾತುಗಳಿಂದ ಇಬ್ಬರಿಗೂ ತಕ್ಕ ಪಾಠ ಕಲಿಸಿದ್ದಾರೆ. ಸುದ್ದಿಗೋಷ್ಠಿಯ ವೇಳೆ ಅಶ್ವಿನಿ ಪ್ರಶ್ನೆಗಳಿಗೆ ದಿಟ್ಟ ಉತ್ತರ ನೀಡಿದ್ದಾರೆ. ಜಾನ್ವಿ ಅವರಿಗೂ ತಮ್ಮದೇ ಶೈಲಿಯಲ್ಲಿ ಗಪ್ ಚುಪ್ ಆಗಿಸಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಸುದ್ದಿಗೋಷ್ಠಿ ಆಯೋಜನೆ ಮಾಡಲಾಗಿತ್ತು. ನಾಮಿನೇಟ್ ಆದ ಸ್ಪರ್ಧಿಗಳು ತಮ್ಮನ್ನು ತಾವು ಸಮರ್ಥಿಸಿಕೊಳ್ಳಬೇಕಿತ್ತು. ಫಿನಾಲೆ ಸ್ಪರ್ಧಿಗಳು ಪತ್ರಕರ್ತರ ಸ್ಥಾನದಲ್ಲಿ ಕುಳಿತು ಪ್ರಶ್ನೆ ಕೇಳಬೇಕಿತ್ತು. ಈ ವೇಳೆ ಅಶ್ವಿನಿ ಅವರು ಗಿಲ್ಲಿ ನಟನ ಮೇಲೆ ಹರಿಹಾಯಲು ಪ್ರಯತ್ನಿಸಿದ್ದಾರೆ. ಇದಕ್ಕೆ ಅವರು ಖಡಕ್ ತಿರುಗೇಟು ಕೊಟ್ಟಿದ್ದಾರೆ.
ಜಾನ್ವಿ ಅವರು ರಕ್ಷಿತಾ ಅವರನ್ನು ಟೀಕಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಹಾಡಿನ ಮೂಲಕವೇ ಜಾನ್ವಿಗೆ ತಿರುಗೇಟು ಕೊಟ್ಟಿದ್ದಾರೆ. ‘ಗೆಜ್ಜೆ ಚೈನು ಕೈಯಾಗ, 12 ಗಂಟೆ ರಾತ್ರಿಯಾಗ..’ ಎಂದು ತಮ್ಮದೇ ಸಾಲುಗಳನ್ನು ಬರೆದು ಹಾಡಿದ್ದಾರೆ. ಈ ಹಾಡನ್ನು ಕೇಳಿ ಜಾನ್ವಿಗೆ ಮಾತೇ ಬರದಂತೆ ಆಯಿತು.
https://www.instagram.com/reel/DP62PWgk5qJ/?igsh=ಒಗ್ಜ್ಟ್ಗ್ಜ್ಸ್ಯ್ಜ್ಜೇಜಿಮೃ
https://www.instagram.com/reel/DP64mvTk2JM/?igsh=MWdhNXl5cWZ1bnEzOQ==