Subscribe NewsicsKannada/YouTube
newsics.com
ಕೋಲಾರ: ದೀಪಾವಳಿ ಹಬ್ಬ ಆಚಿರಿಸೋಕೆ, ಒಂದಷ್ಟು ಹಣ ಕೂಡಿಟ್ಟುಕೊಳ್ಳೊಕೆ. ಪಟಾಕಿ ಚೀಟಿಯನ್ನು ಹಾಕೋದು ಮಾಮೂಲಿ, ಆದರೆ ಕೋಲಾರದಲ್ಲಿ ಬರೋಬ್ಬರಿ 20 ಸಾವಿರ ಜನರು ಪಟಾಕಿ ಚೀಟಿ ಹಾಕಿ ಮೋಸ ಹೋಗಿದ್ದು, 12 ಕೋಟಿ ರೂಪಾಯಿ ಮೊತ್ತದ ಹಣ ಕಟ್ಟಿಸಿಕೊಂಡವನು ನಾಪತ್ತೆಯಾಗಿದ್ದಾನೆ.
ಮಾಲೀಕನಿಗಾಗಿ ಕಚೇರಿ ಎದುರು ಮೋಸ ಹೋದ ಜನ ಕಾಯ್ತಿದ್ದು,
ಬೀದಿ ಬದಿಯ ಎಲ್ಲೆಂದರಲ್ಲಿ ಮಲಗಿ ಮೋಸ ಮಾಡಿ ನಾಪತ್ತೆಯಾಗಿರುವ ವ್ಯಕ್ರಿಗಾಗಿ ಕಾಯುತ್ತಿದ್ದಾರೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ನಗರದ ಮಹಿಳಾ ಕಾಲೇಜು ಎದುರೇ ಇರುವ ರಸ್ತೆಯಲ್ಲಿ ಭರತ್ ಎಂಬುವರು ತಾಯಿ ಚೌಡೇಶ್ವರಿ ದೀಪಾವಳಿ ಸಾಮಗ್ರಿಗಳು ಎಂಬ ಹೆಸರಲ್ಲಿ ಚೀಟಿ ವ್ಯವಹಾರ ನಡೆಸಿದ್ದರು.
ಸಾರ್ವಜನಿಕರಿಗೆ ಕೊಟ್ಟಿರೊ ಕಾರ್ಟ್‌ನಲ್ಲಿ ಬಂಗಾರಪೇಟೆಯ ಅಮರಾವತಿ ನಗರದಲ್ಲಿ ಕಚೇರಿ ಇರುವುದಾಗಿ ಹೇಳಿದ್ದರು. ಆದರೆ ಎಲ್ಲಾ ಕಾರ್ಯ ಚಟುವಟಿಕೆ ನಡೀತಿರೊದು ಹೊಂಬೆಳಕು ಕಟ್ಟಡ ಕಾರ್ಮಿಕರ ಸಂಘದ ಕಚೇರಿಯಲ್ಲಿ.
ಒಂದೋ, ಎರಡೂ, ಹತ್ತು ಲಕ್ಷ ಇಲ್ಲಿ ವಂಚನೆ ಮಾಡಿಲ್ಲ. ಬರೋಬ್ಬರಿ 20 ಸಾವಿರಕ್ಕೂ ಹೆಚ್ಚು ಜನರು ಇದೇ ಚೀಟಿ ವ್ಯವಹಾರದಲ್ಲಿ ಹಣ ಹೂಡಿದ್ದು, 12 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ವಂಚನೆ ಆಗಿದೆಯೆಂದು ಹೇಳಲಾಗಿದೆ.
ಭರತ್ ಎಂಬುವರು ನಡೆಸ್ತಿದ್ದ ಪಟಾಕಿ ಚೀಟಿಯಲ್ಲಿ ಪ್ರತಿ ತಿಂಗಳು 500 ರೂ ಕಟ್ಟಬೇಕು, ಹೀಗೆ 11 ತಿಂಗಳು ಕಟ್ಟಿದರೆ, ಪೂರ್ತಿ ಹಣಕ್ಕೆ 25 ಕೆಜಿ ತೂಕದ ಒಂದು ಅಕ್ಕಿ ಮೂಟೆ, 15 ಲೀಟರ್ ಎಣ್ಣೆ, ಒಂದು ಪಟಾಕಿ ಬಾಕ್ಸ್, ಆಕರ್ಷಕ ಗಿಫ್ಟ್, ಹಬ್ಬದ ಸಾಮಗ್ರಿಯ ರೇಷನ್ ಕಿಟ್ ನೀಡುವುದಾಗಿ ಕಾರ್ಡ್‌ನಲ್ಲಿ ಮಾಹಿತಿ ನೀಡಲಾಗಿದೆ. ಆದರೆ ದೀಪಾವಳಿ ಹಬ್ಬಕ್ಕೆ ಒಂದು ತಿಂಗಳ ಹಿಂದೆಯೇ ಕೊಡಬೇಕಿದ್ದ ಸಾಮಗ್ರಿಗಳಲ್ಲಿ ಒಂದನ್ನೂ ನೀಡದೇ, ಮಾಲೀಕ ಭರತ್ ನಾಪತ್ತೆಯಾಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ 20 ಸಾವಿರಕ್ಕೂ ಹೆಚ್ಚು ಜನರು ಚೀಟಿ ವ್ಯವಹಾರದಲ್ಲಿ ತೊಡಗಿಸಿಕೊಂಡವರು ಇದೀಗ ಮೋಸ ಹೋಗಿದ್ದಾರೆ.
ತಿಂಗಳು ಪೂರ್ತಿ ಕೂಲಿ ಮಾಡಿ, ಹಣ ಹೊಂದಿಸಿಕೊಂಡು ಪಟಾಕಿ ಚೀಟಿ ಕಟ್ಟಿದವರು ಈಗ ಬಾಯಿ ಬಾಯಿ ಬಡಿದುಕೊಳ್ತಿದ್ದಾರೆ, 20 ಸಾವಿರ ಜನರಲ್ಲಿ ಶೇಕಡಾ 90 ರಷ್ಟು ಮಹಿಳೆಯರೇ ಇದ್ದಾರೆ ಎಂದು ತಿಳಿದುಬಂದಿದೆ.
ಚೀಟಿ ಕಟ್ಟಿ ಮೋಸ ಹೋದವರು ಇದೀಗ, ಮಾಲೀಕ ಕಚೇರಿಗೆ ಪ್ರತಿದಿನ ಅಲೆಯುತ್ತಿದ್ದಾರೆ. ಕೆಲವರಂತೂ ಮಾಲೀಕ ಬರ್ತಾರೆ ಎಂಬ ಭರವಸೆಯಿಂದ ಹಗಲೂ ರಾತ್ರಿ ಮನೆಗೂ ಹೋಗದೆ ಕಚೇರಿಯಲ್ಲೇ ಕುಳಿತು ಬಾಗಿಲು ಕಾಯ್ತಿದ್ದಾರೆ.
ಮನೆಗೆ ಹೋದರೆ ಗಂಡಂದಿರು ಹೊಡಿತಾರೆ ಎಂಬ ಭಯದಿಂದ ಕೆಲ ಮಹಿಳೆಯರು ಮನೆಗೇ ಹೋಗಿಲ್ಲ.
ಚೀಟಿ ವ್ಯವಹಾರದಲ್ಲಿ ಗ್ರಾಮಗಳಲ್ಲಿ ಏಜೆಂಟ್ ನೇಮಿಸಿದ್ದ ಭರತ್, ಅವರಿಗೆಲ್ಲಾ ಒಂದೊಂದು ಚೀಟಿ ಫ್ರೀ ಆಫರ್ ಕೊಟ್ಟಿದ್ದ. ಅದಕ್ಕಾಗಿ ಏಜೆಂಟರು ಜನರ ಬಳಿ ಹಣ ಸಂಗ್ರಹಿಸಿ, ಮಾಲೀಕನಿಗೆ ನೀಡ್ತಿದ್ದವರೂ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪೊಲೀಸರಿಗೆ ದೂರು ಕೊಡೋದು, ಮಾಧ್ಯಮಕ್ಕೆ ಹೇಳಿಕೆ ಕೊಡೋದು ಮಾಡಿದ್ರೆ, ಅವರ ಹತ್ರಾನೆ ಹಣ ತಗೊಳ್ಳಿ ಎಂದು ಆರೋಪಿ ಭರತ್ ಧಮ್ಕಿ ಹಾಕಿದ್ದಾನೆ. ಹಾಗಾಗಿ ಯಾರೋಬ್ಬರು ಬಂಗಾರಪೇಟೆ ಪೊಲೀಸ್ ಠಾಣೆಗೂ ದೂರು ನೀಡದೆ ಮಾಲೀಕರ ಆಗಮನಕ್ಕೆ ಎಂದು ಕಾಯ್ತಿದ್ದಾರೆ.
ದೀಪಾವಳಿ ಹಬ್ಬಕ್ಕೆ ದುಬಾರಿ ಕಾರು ಉಡುಗೊರೆ ನೀಡಿದ ಫಾರ್ಮಾ ಕಂಪನಿ ಮಾಲೀಕ ಭಾಟಿಯಾ