Newsics_Kannada
Subscribe and watch video
ನ್ಯೂಸಿಕ್ಸ್ ಕನ್ನಡ
ಬನ್ನಿ ನಮ್ ಸಂಗಡ
newsics.com
ಸರಿಗಮಪ ರಿಯಾಲಿಟಿ ಶೋ ಮೂಲಕ ಮನೆಮಾತಾಗಿದ್ದ ಗಾಯಕಿ ಸುಹಾನ ಸೈಯದ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.ಸರಿಗಮಪ ಸೀಸನ್ 13 ರ ಸ್ಪರ್ಧೆಯಾಗಿದ್ದ ಸುಹಾನಾ ಗಾಯಕಿಯಾಗಿ ವೃತ್ತಿಜೀವನ ಆರಂಭಿಸಿದ್ರು.
ಸದ್ಯ ಮದುವೆಗೆ ಸಜ್ಜಗಿರೋ ಸುಹಾನಾ ತಮ್ಮ ಪ್ರೀತಿಯ ಗುಟ್ಟು ಬಿಚ್ಚಿಟ್ಟಿದ್ದಾರೆ. ಬಹುಕಾಲದ ಗೆಳೆಯ ನಿತಿನ್ ಎಂಬುವವರನ್ನ ವರಿಸಲಿದ್ದಾರೆ ಸುಹಾನಾ. ಸುಹಾನಾ ಮದುವೆ ಆಗ್ತಿರೋ ಹುಡುಗ ನಿತಿನ್ ಶಿವಾಂಶ್. ರಂಗಭೂಮಿ ಕಲಾವಿದರು. ಪ್ರಸಿದ್ಧ ರಂಗ ತರಬೇತಿ ಕೇಂದ್ರ ನೀನಾಸಂನಲ್ಲಿ ತರಬೇತಿ ಪಡೆದಿದ್ದಾರೆ. ಇವರದ್ದು ಪ್ರೇಮ ವಿವಾಹ. 16 ವರ್ಷಗಳ ಸುದೀರ್ಘ ಸ್ನೇಹ ಪ್ರೀತಿ ಕಾರಣ ವಾಗಿದೆ. ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ತಮ್ಮ ಪ್ರೀತಿಯ ವಿಷಯವನ್ನು ಸುಹಾನ ಮುಕ್ತವಾಗಿ ಹಂಚಿಕೊಂಡಿದ್ದಾರೆ.
ಮದುವೆಗೆ ಸಂಬಂಧಿಸಿದ ಆಮಂತ್ರಣ ಕರೆಯೋಲೆಯಲ್ಲಿ ಹೀಗೆ ಬರೆಯಲಾಗಿದೆ..
ನಿತಿನ್ ಎಂಬ ರಂಗಭೂಮಿ ಕಲಾವಿದನ ಸುಹಾನ ಪ್ರೀತಿಸುತ್ತಿದ್ದು, ಈಗ ಅಂತರ್ ಧರ್ಮೀಯ ವಿವಾಹವಾಗುತ್ತಿದ್ದಾರೆ. ವಿಶೇಷವೆಂದರೆ ಕುವೆಂಪು ಮಂತ್ರ ಮಾಂಗಲ್ಯದ ಆಶಯದಂತೆ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ನಾಳೆ ಕನಕಪುರದ ಖಾಸಗೀ ರೆಸಾರ್ಟ್ನಲ್ಲಿ ಮದುವೆ ಆಗುತ್ತಿದ್ದಾರೆ..
ಮದುವೆಗೆ ಸಂಬಂಧಿಸಿದ ಆಮಂತ್ರಣ ಕರೆಯೋಲೆಯಲ್ಲಿ ಹೀಗೆ ಬರೆಯಲಾಗಿದೆ..
ಪ್ರೀತಿ ವಿಶ್ವದ ಭಾಷೆ
ಹೃದಯದಿಂದ ಹೊರಹೊಮ್ಮಿದ ಈ ಪ್ರೇಮ ಕಾವ್ಯ ದೇವರ ವಿರಚಿತ ಶ್ರೀ ಕುವೆಂಪುರವರ ಮಂತ್ರ ಮಾಂಗಲ್ಯದ ಆಶಯದಂತೆ ಜೊತೆಯಾಗಲಿರುವ ಸುಹಾನ ಮತ್ತು ನಿತಿನ್ ನಮ್ಮ ನಡೆ ವಿಶ್ವಮಾನವತ್ವದೆಡೆ
ಸಹೃದಯಿಗಳೇ,
ಬನ್ನಿ, ಹರಸಿ, ಆಶೀರ್ವದಿಸಿ..