Newsics_Kannada
Subscribe and watch video
ನ್ಯೂಸಿಕ್ಸ್ ಕನ್ನಡ
ಬನ್ನಿ ನಮ್ ಸಂಗಡ
newsics.com
ರಾತ್ರಿ ಮಲಗುವ ಮುನ್ನ ಹಾಲು ಕುಡಿದು ಮಲಗಿದರೆ ಚೆನ್ನಾಗಿ ನಿದ್ರೆ ಬರುತ್ತದೆ ಎಂಬ ನಂಬಿಕೆ ಹಿಂದಿನಿಂದಲೂ ಇದೆ. ಬಿಸಿಯಾದ ಹಾಲು ನಿದ್ರಾಹೀನತೆಯನ್ನು ತಡೆಯುತ್ತದೆ ಎಂಬ ಭಾವನೆ ಇದೆ. ಆದರೆ, ಬಿಸಿ ಹಾಲು ಕುಡಿಯುವುದರಿಂದ ನಿಜವಾಗಿಯೂ ನಿದ್ರಾಹೀನತೆಗೆ ಪರಿಹಾರ ಸಿಗುತ್ತದಾ?
ನೀವು ನಿದ್ರೆಯನ್ನು ಮಾಡಲಾಗದೆ ಒದ್ದಾಡುತ್ತಿದ್ದರೆ ಹಾಲು ಕುಡಿದು ನೋಡಿ. 65 ವರ್ಷಕ್ಕಿಂತ ಮೇಲ್ಪಟ್ಟ ಜನರ ಅಧ್ಯಯನದಲ್ಲಿ ಹೆಚ್ಚು ಹಾಲು ಕುಡಿಯುವವರು ಮತ್ತು ದೈಹಿಕ ಚಟುವಟಿಕೆಯಲ್ಲಿ ತೊಡಗಿರುವವರು ಬೇಗ ಮತ್ತು ಸುಲಭವಾಗಿ ನಿದ್ರಿಸುತ್ತಾರೆ ಎಂದು ತಿಳಿದುಬಂದಿದೆ. ಹಾಲು ಟ್ರಿಪ್ಟೊಫಾನ್ ಎಂಬ ಅಮೈನೋ ಆಮ್ಲವನ್ನು ಒಳಗೊಂಡಿದೆ. ಇದು ನಿದ್ರೆಯನ್ನು ಉತ್ತೇಜಿಸುವ ಗುಣಲಕ್ಷಣಗಳನ್ನು ಹೊಂದಿದೆ. ನಿದ್ರೆಗೆ ಅಗತ್ಯವಾದ ಸಿರೊಟೋನಿನ್ ಮತ್ತು ಮೆಲಟೋನಿನ್ ಉತ್ಪಾದನೆಯಲ್ಲಿ ಟ್ರಿಪ್ಟೊಫಾನ್ ಪ್ರಮುಖ ಪಾತ್ರ ವಹಿಸುತ್ತದೆ.
ಸಮೃದ್ಧವಾಗಿದ್ದು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಜೊತೆಗೆ ಇತರ ಜೀವಸತ್ವಗಳು ಮತ್ತು ಖನಿಜಗಳಿಂದ ಕೂಡಿದೆ. ಹಾಲು ಕುಡಿಯುವುದರಿಂದ ಮೂಳೆಗಳು ಬಲಗೊಳ್ಳುತ್ತದೆ ಜೊತೆಗೆ ಸ್ನಾಯುಗಳು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಜೊತೆಗೆ ರಾತ್ರಿ ನಿದ್ರೆ ಚೆನ್ನಾಗಿ ಮಾಡುವುದಕ್ಕೆ ಸಹಾಯ ಮಾಡುವ ಮೂಲಕ ಒಟ್ಟಾರೆ ಆರೋಗ್ಯ ಸುಧಾರಿಸುತ್ತದೆ. ಆದರೆ ಕೆಲವರಿಗೆ ಈ ಹಾಲಿಗೂ ನಿದ್ರೆಗೂ ಯಾವ ರೀತಿಯ ಸಂಬಂಧವಿದೆ? ಯಾಕಾಗಿ ಹಾಲನ್ನು ಸೇವನೆ ಮಾಡಬೇಕು ಎಂಬ ಪ್ರಶ್ನೆ ಹುಟ್ಟಿಕೊಳ್ಳಬಹುದು. ಇದಕ್ಕೆ ಕಾರಣ ತುಂಬಾ ಸರಳವಾಗಿದೆ. ಅದೇನೆಂದರೆ, ಹಾಲು ಮತ್ತು ಡೈರಿ ಉತ್ಪನ್ನಗಳು ಟ್ರಿಪ್ಟೊಫಾನ್ ಎಂಬ ನೈಸರ್ಗಿಕ ಅಮೈನೋ ಆಮ್ಲವನ್ನು ಹೊಂದಿರುತ್ತವೆ. ಇದು ಸಿರೊಟೋನಿನ್ ಮತ್ತು ಮೆಲಟೋನಿನ್ ನಂತಹ ಮೆದುಳಿನ ರಾಸಾಯನಿಕಗಳ ಉತ್ಪಾದನೆಗೆ ಅಗತ್ಯವಾದ ಅತ್ಯಗತ್ಯ ಅಂಶವಾಗಿ ಕಾರ್ಯನಿರ್ವಹಿಸುತ್ತದೆ. ಇದು ನಮ್ಮ ಮನಸ್ಸು ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ ಜೊತೆಗೆ ಇದು ಒಳ್ಳೆ ನಿದ್ರೆ ಬರುವುದಕ್ಕೆ ಉತ್ತೇಜನ ನೀಡುತ್ತದೆ.
ಹಾಲು ಸೇವಿಸುವ ವಿಚಾರದಲ್ಲಿ ಆಯುರ್ವೇದ ಶಾಸ್ತ್ರ ಎರಡು ರೀತಿ ಹೇಳುತ್ತದೆ. ದೊಡ್ಡವರಿಗೆ ಒಂದು ಸಮಯ ಮತ್ತು ಮಕ್ಕಳಿಗೆ ಇನ್ನೊಂದು ಸಮಯ.
ಒಂದು ವೇಳೆ ನೀವು ದೊಡ್ಡವರಾಗಿದ್ದರೆ, ರಾತ್ರಿ ಮಲ ಗುವ ಮುಂಚೆ ಹಾಲು ಕುಡಿದು ಮಲಗಿ. ಅದೇ ಒಂದು ವೇಳೆ ಚಿಕ್ಕ ಮಕ್ಕಳಿಗೆ ಹಾಲು ಕೊಡುವುದಾದರೆ ಆಯು ರ್ವೇದ ಶಾಸ್ತ್ರ ಹೇಳುವ ಪ್ರಕಾರ ಬೆಳಗಿನ ಸಮಯದಲ್ಲಿ ಉತ್ತಮ.
ರಾತ್ರಿ ಸಮಯದಲ್ಲಿ ದೊಡ್ಡವರು ಹಾಲು ಕುಡಿದು ಮಲಗುವು ದರಿಂದ ಅವರ ಜೀರ್ಣ ಶಕ್ತಿ ಹೆಚ್ಚಾಗುತ್ತದೆ. ಸೇವಿಸಿದ ಆಹಾರ ಉತ್ತಮವಾಗಿ ಜೀರ್ಣವಾಗುತ್ತದೆ.
ಯಾರು ರಾತ್ರಿ ಹೊತ್ತು ಹಾಲು ಕುಡಿಯುವ ಅಭ್ಯಾಸ ಇಟ್ಟು ಕೊಂಡಿರುತ್ತಾರೆ ಅಂತಹವರಿಗೆ ಒಳ್ಳೆಯ ನಿದ್ರೆ ಬರುತ್ತದೆ ಮತ್ತು ಹಾಲಿನಲ್ಲಿರುವ ಕ್ಯಾಲ್ಸಿಯಂ ಪ್ರಮಾ ಣವನ್ನು ದೇಹ ಸಂಪೂರ್ಣವಾಗಿ ಹೀರಿಕೊಳ್ಳಲು ಸಾಧ್ಯವಾಗುತ್ತದೆ.