Subscribe NewsicsKannada/YouTube
newsics.com
ಅಂಕೋಲಾ(ಉತ್ತರ ಕನ್ನಡ): ಮೀನು ಹಿಡಿದು ಬೆಲೇಕೇರಿ ಮೀನುಗಾರಿಕೆ ಬಂದರಿಗೆ
ಮರಳುತ್ತಿದ್ದ ಪರ್ಶಿಯನ್ ಬೋಟ್
ಮೀನುಗಾರಿಕೆ ಬಂದರು ಸಮೀಪದ ಅಳಿವೆ ಪ್ರದೇಶದಲ್ಲಿ ಮುಳುಗಡೆಯಾಗಿದೆ.
ಇದರಿಂದ ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದೆ. ಶನಿವಾರ ಸಂಜೆ ಸಮಯದಲ್ಲಿ ದುರ್ಘಟನೆ ಸಂಭವಿಸಿದ್ದು ಬೋಟಿನಲ್ಲಿದ್ದ ಮೀನುಗಾರರು ಮತ್ತು ಕಾರ್ಮಿಕರನ್ನು ಸ್ಥಳೀಯ ಮೀನುಗಾರರು ನಾಲ್ಕು ಬೋಟುಗಳಲ್ಲಿ ತೆರಳಿ ರಕ್ಷಣೆ
ಮಾಡಿದ್ದಾರೆ.
ಬೆಲೇಕೇರಿಯ ಶ್ರೀಕಾಂತ ಗಣಪತಿ ತಾಂಡೇಲ್ ಎನ್ನುವವರಿಗೆ ಸೇರಿದ ದುರ್ಗಾಪ್ರಸಾದ ಹೆಸರಿನ ಬೋಟು
ಅಳಿವೆ ಪ್ರದೇಶದಲ್ಲಿ ಸಂಪೂರ್ಣ ಮುಳುಗಡೆಯಾಗಿದ್ದು ಬೋಟಿನಲ್ಲಿದ್ದ ಮೀನು ಸಮುದ್ರ ಪಾಲಾಗಿದೆ.
ಮುಳುಗಡೆಯಾದ ಬೋಟನ್ನು ಬೇರೆ ಬೋಟುಗಳ ಮೂಲಕ ಧಕ್ಕೆಗೆ
ಎಳೆದು ತರಲಾಗಿದ್ದು ಕ್ರೇನ್ ಸಹಾಯದಿಂದ ಎತ್ತಿ ಮೂರು ಪಂಪುಗಳನ್ನು ಬಳಸಿ ಬೋಟಿನೊಳಗಡೆ ತುಂಬಿದ್ದ ಅಪಾರ ಪ್ರಮಾಣದ ನೀರನ್ನು ಖಾಲಿ ಮಾಡಲಾಗಿದೆ.
ಎರಡು ದಿನಗಳ ಹಿಂದೆ ಬೆಲೇಕೇರಿ ಮೀನುಗಾರಿಕೆ ಬಂದರು ಪ್ರದೇಶದಲ್ಲಿ ಲಂಗರು ಹಾಕಿದ ಬೋಟೊಂದು ಗಾಳಿ ಅಲೆಗಳ ಹೊಡೆತದಿಂದಾಗಿ ಮುಳುಗಡೆಯಾಗಿ ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿತ್ತು.
ಎರಡೇ ದಿನಗಳ ಅವಧಿಯಲ್ಲಿ ಬೆಲೇಕೇರಿ ಮೀನುಗಾರಿಕೆ ಬಂದರು ವ್ಯಾಪ್ತಿಯಲ್ಲಿ ಎರಡು ಬೋಟು
ಮುಳುಗಡೆಯಾದಂತಾಗಿದೆ.
ಮಹಿಳೆಯ ಶವವನ್ನೂ ಬಿಡದ ವಿಕೃತಕಾಮಿ! ಮಹಿಳೆಯ ಮೃತದೇಹದ ಮೇಲೆ ಲೈಂಗಿಕ ದೌರ್ಜನ್ಯ