Newsics_Kannada
Subscribe and watch video
ನ್ಯೂಸಿಕ್ಸ್ ಕನ್ನಡ
ಬನ್ನಿ ನಮ್ ಸಂಗಡ
newsics.com
ವ್ಯಾಟ್ಸಾಪ್‌ನಲ್ಲಿ ಬಂದ ಮದುವೆ ಆಮಂತ್ರಣ ಪತ್ರಿಕೆ ಕ್ಲಿಕ್ ಮಾಡಿ,ಡೌನ್ಲೋಡ್ ಮಾಡಲು ಹೋಗಿ ಗುರುಗ್ರಾಂನ ವಿಷ್ಣುಗಾರ್ಡನ್ ನಿವಾಸಿ ವಿನೋದ್ ಕುಮಾರ್ ಬರೋಬ್ಬರಿ 97,000 ರೂಪಾಯಿ ಕಳೆದುಕೊಂಡು ಘಟನೆ ನಡೆದಿದೆ.
ವಿನೋದ್ ಕುಮಾರ್ ಅಕ್ಟೋಬರ್ 4ರಂದು ಇದೇ ರೀತಿ ಅಪರಿಚಿತ ನಂಬರ್‌ನಿಂದ ಮದುವೆ ಆಮಂತ್ರಣ ಬಂದಿದೆ. ತನ್ನ ಗೊತ್ತಿರುವ ಆಪ್ತರು, ಶಾಲಾ ಗೆಳೆಯರು ಅಥವಾ ಹಿಂದಿನ ಕಚೇರಿಗಳ ಸಹೋದ್ಯೋಗಿಗಳು ಆಗಿರಬಹುದು ಎಂದು ವಿನೋದ್ ಕುಮಾರ್ ಕುತೂಹಲದಿಂದ ಆಮಂತ್ರಣ ಪತ್ರಿಕೆ ಡೌನ್ಲೋಡ್ ಮಾಡಿಕೊಂಡಿದ್ದಾರೆ.
ಆದರೆ ಈ ಡೌನ್ಲೋಡ್ ಆಮಂತ್ರಣ ಪತ್ರಿಕೆ ಓಪನ್ ಆಗಲೇ ಇಲ್ಲ. ಹಲವು ಬಾರಿ ಪ್ರಯತ್ನಿಸಿದರೂ ಫೈಲ್ ಓಪನ್ ಆಗಲಿಲ್ಲ. ಕೆಲ ಹೊತ್ತು ಪ್ರಯತ್ನಿಸಿದ ವಿನೋದ್ ಕುಮಾರ್ ಬಳಿಕ ಪ್ರಯತ್ನ ನಲ್ಲಿಸಿದ್ದ. ಅಪರಿಚಿತ ವ್ಯಕ್ತಿಗೆ ಸಂದೇಶ ಕಳುಹಿಸಲು ಮುಂದಾಗಿದ್ದ, ಆಮಂತ್ರಣ ಪತ್ರಿಕೆ ಓಪನ್ ಆಗುತ್ತಿಲ್ಲ. ಇಮೇಜ್ ಕಳುಹಿಸುವಂತೆ ಮೆಸೇಜ್ ಕಳುಹಿಸಲು ಮುಂದಾಗಿದ್ದ. ಕೆಲವೇ ಹೊತ್ತಲ್ಲಿ ವಿನೋದ್ ಕುಮಾರ್‌ಗೆ ಟೆಕ್ಸ್ಟ್ ಸಂದೇಶ ಬಂದಿದೆ. ಖಾತೆಯಿಂದ 97,000 ರೂಪಾಯಿ ಕಡಿತಗೊಂಡಿರುವ ಸಂದೇಶ ಬಂದಿದೆ.
ಖಾತೆಯಿಂದ ಹಣ ಕಡಿತಗೊಂಡ ಬೆನ್ನಲ್ಲೇ ತಾನು ಮೋಸಹೋಗಿರುವುದು ಅರಿವಾಗಿದೆ. ಹೀಗಾಗಿ ವಿನೋದ್ ಕುಮಾರ್, ಗುರುಗ್ರಾಂ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಇತ್ತ ಪೊಲೀಸರು ಸಂಪೂರ್ಣ ಮಾಹಿತಿ ಪಡೆದುಕೊಂಡು ತನಿಖೆ ಆರಂಭಿಸಿದ್ದಾರೆ.