Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Mithun and Arathi dating ಸೆಹ್ವಾಗ್ ಪತ್ನಿ ಜತೆ ಬಿಸಿಸಿಐ ಅಧ್ಯಕ್ಷ ಮಿಥುನ್ ರಹಸ್ಯ ಡೇಟಿಂಗ್!
ದೇಶಪ್ರಮುಖ

Mithun and Arathi dating ಸೆಹ್ವಾಗ್ ಪತ್ನಿ ಜತೆ ಬಿಸಿಸಿಐ ಅಧ್ಯಕ್ಷ ಮಿಥುನ್ ರಹಸ್ಯ ಡೇಟಿಂಗ್!

Share
2 Min Read
SHARE

Subscribe NewsicsKannada/ YouTube

newsics.com

ಮುಂಬೈ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹಾಗೂ ಪತ್ನಿ ಆರತಿ ಬೇರೆ ಬೇರೆಯಾಗಿ ಹಲವು ದಿನಗಳಾಗಿವೆ.

ಎರಡು ದಶಕಗಳಿಂದ ಸಂಸಾರ ನಡೆಸಿದ್ದ ಈ ಜೋಡಿ ಇತ್ತೀಚೆಗೆ ಬೇರೆ ಬೇರೆಯಾಗಿದ್ದಾರೆ ಎನ್ನುವ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಭಾರೀ ಕೋಲಾಹಲ ಸೃಷ್ಟಿಯಾಗಿತ್ತು.

ಚೆನ್ನಾಗಿದ್ದ ಈ ಜೋಡಿ ಬೇರೆಯಾಗಿದ್ದೇಕೆ ಎನ್ನುವ ಪ್ರಶ್ನೆಗೆ ಉತ್ತರವೇ ಸಿಕ್ಕಿರಲಿಲ್ಲ. ಇದೀಗ ಈ ಕುತೂಹಲಕ್ಕೆ ಉತ್ತರಗಳು ಹರಿದಾಡುತ್ತಿವೆ.

ಬಿಸಿಸಿಐ ನೂತನ ಅಧ್ಯಕ್ಷ ಮಿಥುನ್ ಮನ್ಹಾಸ್, ರಹಸ್ಯವಾಗಿ ಸೆಹ್ವಾಗ್‌ನಿಂದ ದೂರವಾಗಿರುವ ಪತ್ನಿ ಆರತಿ ಜತೆ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಮಾಹಿತಿಗಳು ಹರಿದಾಡುತ್ತಿವೆ.

ಮಿಥುನ್ ಮನ್ಹಾಸ್ ಜತೆ ಡೇಟಿಂಗ್‌ನಲ್ಲಿ ಬಿದ್ದ ಕಾರಣ ವೀರೇಂದ್ರ ಸೆಹ್ವಾಗ್ ತಮ್ಮ ಪತ್ನಿ ಆರತಿಯಿಂದ ದೂರವಾಗಿದ್ದಾರೆ ಎನ್ನುವ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿವೆ.

ಈ ಕುರಿತು ಹಲವು ಕ್ರೀಡಾ ಪತ್ರಕರ್ತರು ಸೂಚ್ಯವಾಗಿ ಟ್ವೀಟ್ ಮಾಡಿದ್ದರು. ಭಾರತೀಯ ಕ್ರಿಕೆಟ್‌ನಲ್ಲಿ ಮತ್ತೊಂದು ಮುರಳಿ ವಿಜಯ್ ಹಾಗೂ ಕಾರ್ತಿಕ್ ಘಟನೆ ನಡೆದಿದೆ. ಮಾಜಿ ಕ್ರಿಕೆಟಿಗ ಪತ್ನಿಯಿಂದ ದೂರವಾಗಿದ್ದಾರೆ ಎಂದು ಸೂಚ್ಯವಾಗಿ ಪ್ರಮುಖ ಪತ್ರಕರ್ತರು ಟ್ವೀಟ್ ಮಾಡಿದ್ದಾರೆ.

ಇದರ ಬೆನ್ನಲ್ಲೇ ಸೆಹ್ವಾಗ್ ತನ್ನ ಇಬ್ಬರು ಮಕ್ಕಳು ಹಾಗೂ ತಾಯಿ ಜತೆ 2024ರಲ್ಲಿ ದೀಪಾವಳಿ ಆಚರಿಸಿರುವ ಫೋಟೋ ಭಾರೀ ಚರ್ಚೆಗೆ ಕಾರಣವಾಗಿತ್ತು. ಸೆಹ್ವಾಗ್ ಹಾಗೂ ಪತ್ನಿ ಜತೆಯಾಗಿರುವ ಫೋಟೋ 2023ರಿಂದ ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತ ಖಾತೆಗಳಲ್ಲಿ ಪೋಸ್ಟ್ ಆಗಿಲ್ಲ.

ಏಪ್ರಿಲ್ 28, 2023ರಲ್ಲಿ ಸೆಹ್ವಾಗ್ ತನ್ನ ಪತ್ನಿ ಜೊತೆಗಿರುವ ಫೋಟೋ ಪೋಸ್ಟ್ ಮಾಡಿದ್ದರು. ಇದಾದ ಬಳಿಕ ಇವರಿಬ್ಬರು ಜತೆಯಾಗಿರುವ ಒಂದೇ ಒಂದು ಫೋಟೋ ಇಲ್ಲ. ಇಬ್ಬರು 2024ರಿಂದ ಬೇರೆ ಬೇರೆಯಾಗಿದ್ದಾರೆ ಎನ್ನುವ ಮಾತುಗಳು ಹಬ್ಬಿತ್ತು.

ಮಿಥುನ್ ಮನ್ಹಾಲ್ ಆಕ್ಸಿಡೆಂಟಲ್ ಬಿಸಿಸಿಐ ಅಧ್ಯಕ್ಷ ಎಂದೇ ಗುರುತಿಸಿಕೊಂಡಿದ್ದಾರೆ. ನೀತಿ, ನಿಯಮ, ಕಾನೂನು, ಕೋರ್ಟ್ ಇದರ ನಡುವೆ ಮಿಥುನ್ ಮನ್ಹಾಸ್ ದಿಡೀರ್ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡಿದ್ದರೆ. ಆದರೆ ಅಧ್ಯಕ್ಷನಾಗುತ್ತಿದ್ದಂತೆ ಮಿಥುನ್ ಮನ್ಹಾಸ್‌ಗೆ ಸೀಕ್ರೆಟ್ ಡೇಟಿಂಗ್ ಸಂಕಷ್ಟ ಎದುರಾಗಿದೆ.

ಸೆಹ್ವಾಗ್ ಪತ್ನಿ ಜತೆ ಸೀಕ್ರೆಟ್ ಡೇಟಿಂಗ್ ಮಾಡಿ, ಸಂಸಾರಕ್ಕೆ ಹುಳಿ ಹಿಂಡಿದ್ದಾರೆ ಎನ್ನುವ ಗಂಬೀರ ಆರೋಪಗಳು ಮಿಥುನ್ ಮನ್ಹಾಸ್ ವಿರುದ್ಧ ಕೇಳಿಬಂದಿದೆ.

ಸೆಹ್ವಾಗ್ ಹಾಗೂ ಮಿಥುನ್ ಇಬ್ಬರೂ ದೆಹಲಿ ಮೂಲದವರು. ವಿದಾಯದ ಬಳಿಕವೂ ಮಿಥುನ್ ಮನ್ಹಾಸ್ ಹಾಗೂ ವೀರೇಂದ್ರ ಸೆಹ್ವಾಗ್ ಉತ್ತಮ ಸಂಬಂಧ ಹೊಂದಿದ್ದರು.

ಸೆಹ್ವಾಗ್ ಶಾಲೆಯಲ್ಲೂ ಮಿಥುನ್ ಮನ್ಹಾಸ್ ಕೋಚ್ ಆಗಿ ವಿದ್ಯಾರ್ಥಿಗಳಿಗೆ ಕ್ರಿಕೆಟ್ ಪಾಠ ಕಲಿಸುತ್ತಿದ್ದರು. ಹೀಗಾಗಿ ಸೆಹ್ವಾಗ್ ಹಾಗೂ ಮಿಥುನ್ ಸಂಬಂಧ ಉತ್ತಮವಾಗಿತ್ತು.

ಶಾಲೆಯ ಆಡಳಿತ ನೋಡಿಕೊಳ್ಳುತ್ತಿದ್ದ ಸೆಹ್ವಾಗ್ ಪತ್ನಿ ಜತೆಗೆ ಇದೇ ವೇಳೆ ಸಂಬಂಧ ಬೆಳೆದಿದೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಇದೀಗ ಮಿಥುನ್ ಮನ್ಹಾಸ್ ಬಿಸಿಸಿಐ ಅಧ್ಯಕ್ಷನಾದ ಬಳಿಕ ಸೀಕ್ರೆಟ್ ಡೇಟಿಂಗ್ ವಿಚಾರಗಳು ಹೊರಬಂದಿವೆ.

https://twitter.com/i/status/1975529851961680296

TAGGED:BCCI President Mithun secretly dating Sehwag's wife
Share This Article
Facebook Twitter Copy Link Print
Previous Article Bangalore Anti Plastic Drive ಬೆಂಗಳೂರಲ್ಲಿ 18 ದಿನಗಳಲ್ಲಿ 52 ಟನ್ ನಿಷೇಧಿತ ಪ್ಲಾಸ್ಟಿಕ್ ವಶ
Next Article ದೇವರ ವಿಗ್ರಹದ ಮೇಲೆ ಕಾಲಿಟ್ಟು ಸ್ನಾನ ಮಾಡಿದ ಮುಸ್ಲಿಂ ಮಹಿಳೆಯರು! ವೀಡಿಯೊ ವೈರಲ್

Popular Posts

Modi -Trump face off 16 ತಿಂಗಳ ಬಳಿಕ ಮೋದಿ- ಟ್ರಂಪ್‌ ಮುಖಾಮುಖಿ: ಮಾತಾಡಿದ್ದೇನು? ಹೇಳಿದ್ದೇನು?

3 Min Read

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 17-6-2026, ಬುಧವಾರ, ಇಂದು‌ ಹೇಗಿದೆ ನಿಮ್ಮ ಅದೃಷ್ಟ?

4 Min Read

Elephant in garbage dump ಎಂಎಂ ಹಿಲ್ಸ್‌ನ ಕಸದ ರಾಶಿಯಲ್ಲಿ ಆಹಾರ ಅರಸುತ್ತಿದೆ ಈ ಆನೆ! ವೈರಲ್ ವಿಡಿಯೋ ನೋಡಿ

1 Min Read

ಕಲಿಯುಗದ ಅಂತಿಮ ಹಂತ ಪ್ರಾರಂಭವಾಗಿದೆಯೇ?; ನಿಜವಾಗ್ತಿದೆ 500 ವರ್ಷಗಳ ಹಿಂದಿನ ಭವಿಷ್ಯವಾಣಿ.

2 Min Read

You Might Also Like

ಮನರಂಜನೆಪ್ರಮುಖ

ನನ್ನ ಪತ್ನಿ ನನ್ನ ಜೊತೆ ಮಲಗಲು ರೆಡಿಯಿರಲಿಲ್ಲ ಎಂದ ಖ್ಯಾತ ನಟ!

1 Min Read
ಕರ್ನಾಟಕಪ್ರಮುಖ

Alert from Police ಅನುಮತಿಯಿಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಿಯ ಖಾಸಗಿ ಚಿತ್ರ ಹಂಚಿದರೆ ಕಠಿಣ ಕ್ರಮ: ರಾಜ್ಯ ಪೊಲೀಸರಿಂದ ಮಾರ್ಗಸೂಚಿ

3 Min Read
ಕರ್ನಾಟಕಪ್ರಮುಖ

ಧರ್ಮಸ್ಥಳ ಕೇಸ್ ತನಿಖೆ ನಡೆಸುತ್ತಿದ್ದ ‘SIT’ ಎಸ್.ಪಿ ಪ್ರಯಾಣಿಸುತ್ತಿದ್ದ ಕಾರು ಪಲ್ಟಿ

2 Min Read
ಪ್ರಮುಖ

ರೈತರಿಗೆ ಬಿಗ್‌ ಗಿಫ್ಟ್‌ ಕೊಟ್ಟ ಸಿಎಂ ವಿಜಯ್‌; 75,000 ರೂ. ವರೆಗಿನ ಬೆಳೆ ಸಾಲ ಮನ್ನಾ 

1 Min Read

Social Networks

Facebook-f Instagram Twitter
Welcome Back!

Sign in to your account

Lost your password?