newsics.com
ನಟ ದರ್ಶನ್ – ರೇಣುಕಾಸ್ವಾಮಿ ಕೊಲೆ ಪ್ರಕರಣವು ಇದೀಗ ಕರ್ನಾಟಕ ಮಾತ್ರವಲ್ಲ, ದೇಶದಾದ್ಯಂತ ಚರ್ಚೆಯಾಗುತ್ತಿದೆ.
ಇದೀಗ ಈ ಪ್ರಕರಣವು ದೇಶದ ಎರಡನೇ ಪ್ರಮುಖ ಕೇಸ್ ಎನ್ನುವ ಪಟ್ಟಿಯಲ್ಲಿ ಗುರುತಿಸಿಕೊಂಡಿದೆ. ಕಳೆದ ಒಂದು ವರ್ಷದಲ್ಲಿ ದೇಶದಲ್ಲಿ ಮೇಜರ್ ಕೇಸ್‌ಗಳ ಲಿಸ್ಟ್‌ನಲ್ಲಿ ನಟ ದರ್ಶನ್ ಅವರ ಪ್ರಕರಣ ಎರಡನೇ ಸ್ಥಾನದಲ್ಲಿದೆ.
ದೇಶದ ಪ್ರಮುಖ ಪ್ರಕರಣಗಳ / ಕೇಸ್‌ಗಳ ಲಿಸ್ಟ್ ರಿವೀಲ್ ಆಗಿದ್ದು, ಕೋಲ್ಕತ್ತಾದಲ್ಲಿ ಟ್ರೈನಿ ವೈದ್ಯೆ ಅತ್ಯಾಚಾರ ಹಾಗೂ ಕೊಲೆ ಮಾಡಿರುವ ಪ್ರಕರಣವು ಮೊದಲ ಸ್ಥಾನದಲ್ಲಿದ್ದರೆ, ರೇಣುಕಾಸ್ವಾಮಿ ಕೊಲೆ ಪ್ರಕರಣವು ಎರಡನೇ ಸ್ಥಾನದಲ್ಲಿದೆ.
ಕನ್ನಡ ಚಿತ್ರರಂಗದಲ್ಲಿ ಟಾಪ್ ಟ್ರೆಂಡಿಂಗ್‌ನಲ್ಲಿ ಇರುವಾಗಲೇ ನಟ ದರ್ಶನ್ ಅವರು ಈ ಪ್ರಕರಣದಲ್ಲಿ ಜೈಲು ಸೇರಿದ್ದಾರೆ.
ಈ ಘಟನೆ ನಡೆದು ವರ್ಷದ ಮೇಲಾದರೂ ಒಂದಿಲ್ಲೊಂದು ಕಾರಣಕ್ಕೆ ಚರ್ಚೆಯಲ್ಲಿದೆ. ಇದೀಗ ಈ ಪ್ರಕರಣ ದೇಶದಲ್ಲೇ ಚರ್ಚೆ ಆಗುತ್ತಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ದರ್ಶನ್ ಬಿಡುಗಡೆ ಆಗಿದ್ದರೂ, ರಾಜ್ಯ ಸರ್ಕಾರದಿಂದ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಸುಪ್ರೀಂನಿಂದ ಜಾಮೀನು ರದ್ದಾದ ಬಳಿಕ ನಟ ದರ್ಶನ್ ಮತ್ತೆ ಜೈಲು ಸೇರಿದ್ದಾರೆ.
ದೇಶದಾದ್ಯಂತ ಚರ್ಚೆ
ರೇಣುಕಾಸ್ವಾಮಿ ಕೊಲೆ ಪ್ರಕರಣವು ದೇಶದಾದ್ಯಂತ ಸುದ್ದಿಯಾಗಿತ್ತು. ಪ್ರಮುಖ ನಟರೊಬ್ಬರ ಹೆಸರು ಈ ಕೇಸ್‌ನಲ್ಲಿ ಕಾಣಿಸಿಕೊಂಡಿದ್ದೇ ಇದಕ್ಕೆ ಕಾರಣ. ಈ ಪ್ರಕರಣವು ಸೆಷನ್ ಕೋರ್ಟ್, ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಮುಟ್ಟಿತ್ತು. ನಟ ದರ್ಶನ್‌ಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್ ವಜಾ ಮಾಡಿತ್ತು. ಈ ಎಲ್ಲಾ ಕಾರಣಗಳಿಂದ ದರ್ಶನ ಪ್ರಕರಣ ದೇಶದಾದ್ಯಂತ ಚರ್ಚೆ ಆಗುತ್ತಿದೆ.
ದರ್ಶನ್‌ಗೆ ಮತ್ತೊಂದು ಸಂಕಷ್ಟ
ರೇಣುಕಾಸ್ವಾಮಿ ಪ್ರಕರಣದಲ್ಲಿ ಎರಡನೇ ಬಾರಿಗೆ ಜೈಲು ಸೇರಿರುವ ದರ್ಶನ್‌ಗೆ ಮತ್ತೊಂದು ಸಂಕಷ್ಟ ಎದುರಾಗುವ ಸಾಧ್ಯತೆ ದಟ್ಟವಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪ್ರಕರಣ ಸಂಬಂಧ ತನಿಖಾಧಿಕಾರಿಗಳು ಚಾರ್ಜ್‌ಶೀಟ್ ಸಲ್ಲಿಕೆಗೆ ಸಿದ್ಧತೆ ನಡೆಸಿದ್ದಾರೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್‌ಗೆ ರಾಜಾತಿಥ್ಯ ಸಿಕ್ಕ ಬೆನ್ನಲ್ಲೇ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಅಲ್ಲದೇ ಈ ರೇಣುಕಾಸ್ವಾಮಿ ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪವನ್ನೂ ಪಡೆದುಕೊಳ್ಳುವುದಕ್ಕೂ ಪರೋಕ್ಷವಾಗಿ ಕಾರಣವಾಗಿತ್ತು. ನಟ ದರ್ಶನ್, ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಭಾಗಿಯಾಗಿದ್ದ ರಾಜಾತಿಥ್ಯ ಪ್ರಕರಣ ಇದಾಗಿತ್ತು. ಇದೀಗ ಈ ಸಂಬಂಧ ದಾಖಲಾಗಿರುವ 3 ಪ್ರಕರಣಗಳಿಗೆ ಸಂಬಂಧಿಸಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆಗೆ ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಮುಂಬೈ ಪೊಲೀಸರಿಂದ ನಟಿ ಶಿಲ್ಪಾ ಶೆಟ್ಟಿ –ರಾಜ್ ಕುಂದ್ರಾ ದಂಪತಿ ವಿಚಾರಣೆ
Gold, silver prices rise again ಚಿನ್ನ, ಬೆಳ್ಳಿ ದರ ಮತ್ತೆ ಏರುಮುಖ, ಮತ್ತೊಂದು ಸಾರ್ವಕಾಲಿಕ ದಾಖಲೆ
ಮೊದಲ ಬಾರಿಗೆ ಲಾಟರಿ ಖರೀದಿಸಿದ್ದ ಕೇರಳದ ವ್ಯಕ್ತಿಗೆ 25 ಕೋಟಿ ರೂ. ಬಹುಮಾನ