Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Gadag Communal tension: ಬಾಕಿ ಹಣಕ್ಕಾಗಿ ಹಿಂದೂ-ಮುಸ್ಲಿಂ ನಡುವೆ ಸಂಘರ್ಷ!
ಕರ್ನಾಟಕಪ್ರಮುಖ

Gadag Communal tension: ಬಾಕಿ ಹಣಕ್ಕಾಗಿ ಹಿಂದೂ-ಮುಸ್ಲಿಂ ನಡುವೆ ಸಂಘರ್ಷ!

Share
2 Min Read
SHARE

Subscribe NewsicsKannada/YouTube

newsics.com

ಗದಗ: ಸಿಗರೇಟ್ ಬಾಕಿ ಹಣದ ಕ್ಷುಲ್ಲಕ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದ ಘಟನೆ ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣದ ತಳಗೇರಿ ಬಡಾವಣಗೆಯಲ್ಲಿ ನಡೆದಿದೆ.

ಘರ್ಷಣೆಯಲ್ಲಿ ಐವರು ಹಿಂದೂ, ಓರ್ವ ಮುಸ್ಲಿಂ ವ್ಯಕ್ತಿ ಸೇರಿ ಆರು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳಾದ ಅಬ್ದುಲ್ ಘನಿ ಮಕಾಂದಾರ್, ದೇವಪ್ಪ ಪೂಜಾರ್, ಪರಶುರಾಮ್ ಡೊಂಕಬಳ್ಳಿ, ಮೈಲಾರಪ್ಪ ಕಪ್ಪಣ್ಣವರ್, ರವಿ ಕಪ್ಪಣ್ಣವರ್ ಮತ್ತು ವಿರುಪಾಕ್ಷ ಹಿರೇಮಠ ಅವರಿಗೆ ಗದಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ತಳಗೇರಿಯಲ್ಲಿ ಬೀಡಾ ಅಂಗಡಿ ನಡೆಸುತ್ತಿರುವ ಅಬ್ದುಲ್ ಘನಿ ಅವರಿಗೆ ದೇವಪ್ಪ ಪೂಜಾರ್ ಸಿಗರೇಟ್ ಮತ್ತು ಟೀಗಾಗಿ ₹2,500 ಬಾಕಿ ಉಳಿಸಿಕೊಂಡಿದ್ದರು ಎನ್ನಲಾಗಿದೆ.

ಇಂದು ಅಬ್ದುಲ್ ಅಂಗಡಿಯ ಪಕ್ಕದ ಅಂಗಡಿಗೆ ಹೋಗಿದ್ದಾನೆ. ಅಂಗಡಿಯಲ್ಲಿ ಬಾಕಿ ಹಣ ಉಳಿಸಿಕೊಂಡು ಈಗ ಪಕ್ಕದ ಅಂಗಡಿಗೆ ಹೋಗಿದ್ದಾನೆಂದು ದೇವಪ್ಪ ಪೂಜಾರ್ ಬಳಿಗೆ ಹೋಗಿರುವ ಅಬ್ದುಲ್ಲ್, 2,500 ರೂಪಾಯಿ ಬಾಕಿ ಹಣ ಕೊಡುವಂತೆ ಕೇಳಿದ್ದಾನೆ. ಇದಕ್ಕೆ ದೇವಪ್ಪ 2,500 ರೂಪಾಯಿ ಅಲ್ಲ.. 800 ರೂಪಾಯಿಯಷ್ಟೆ ಬಾಕಿ ಇದೆ ಅಂತಾ ವಾದ ಮಾಡಿದ್ದಾನೆ. ಇದರಿಂದ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ಮಾಡಿಕೊಂಡಿದ್ದಾರೆ. ಜಗಳದಲ್ಲಿ ಏಟು ತಿಂದಿದ್ದ ದೇವಪ್ಪ ತನ್ನ ಸ್ನೇಹಿತರಿಗೆ ವಿಷಯ ತಿಳಿಸಿ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಸ್ಥಳಕ್ಕೆ ಬಂದ ಗೆಳೆಯರಿಂದ ಮತ್ತೆ ಶುರುವಾದ ಗಲಾಟೆ, ಪೆಟ್ಟಿಗೆ ಅಂಗಡಿ ದ್ವಂಸಗೊಳಿಸಿದ್ದಾರೆ.

ಇಬ್ಬರ ನಡುವಿನ ಜಗಳ ಗುಂಪು ಘರ್ಷಣೆಯಾಗಿ ಹಿಂದೂ-ಮುಸ್ಲಿಂ ಸಂಘರ್ಷಕ್ಕೆ ಕಾರಣವಾಗಿದೆ. ಹಿಂದೂಗಳ ಗುಂಪು ಅಬ್ದುಲ್ಲನ ಅಂಗಡಿ ಬಿಳಿಸಿದ್ದಾರೆಂದು ಕುಪಿತಗೊಂಡ ಮುಸ್ಲಿಂ ಯುವಕರು ದೇವಪ್ಪ ಸಹಚರರೊಂದಿಗೆ ಗಲಾಟೆ ನಡೆಸಿದೆ. ಈ ಘರ್ಷಣೆಯಲ್ಲಿ ದೇವಪ್ಪ ಗೆಳೆಯರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆಂದು ಆರೋಪಿಸಲಾಗಿದೆ. ಇದರಿಂದ ಕೆಲಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.

ಅಬ್ದುಲ್ ಅವರ ಪತ್ನಿ ಮುಮ್ತಾಜ್ ಹೇಳುವ ಪ್ರಕಾರ ಹಿಂದೂ ಯುವಕರೇ ಮೊದಲು ಹಲ್ಲೆ ಮಾಡಿ, ಅಂಗಡಿಯನ್ನ ಧ್ವಂಸ ಮಾಡಿದ್ದಾರೆ. ಇದರ ಜೊತೆಗೆ ‘ಪಾಕಿಸ್ತಾನಕ್ಕೆ ಕಳಿಸುತ್ತೇವೆ’ ಎಂದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಆದರೆ ಹಿಂದೂ ಯುವಕರು ಆರೋಪವನ್ನು ನಿರಾಕರಿಸಿದ್ದಾರೆ ಅಲ್ಲದೇ ನಾವು ಹಿಂದೂಗಳೆಂಬ ಕಾರಣಕ್ಕೆ ಮುಸ್ಲಿಂ ಯುವಕರ ಗುಂಪು ನಮ್ಮ ಮೇಲೆ ಹಲ್ಲೆ ನಡೆಸಿದೆ ಎಂದು ಆರೋಪಿಸಿದ್ದಾರೆ. ಗಾಯಾಳು ವಿರುಪಾಕ್ಷಪ್ಪ ಹೇಳುವಂತೆ, ಗಲಾಟೆ ವೇಳೆ ಹಿಂದೂ ಜನರನ್ನು ಹೊಡೆಯಿರಿ ಎಂದು ಪ್ರಚೋದನೆ ನೀಡಿ ಬೆನ್ನಹತ್ತಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಶಿರಹಟ್ಟಿ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆಯಿಂದ ತಳಗೇರಿ ಬಡಾವಣೆಯಲ್ಲಿ ತಾತ್ಕಾಲಿಕವಾಗಿ ಉಂಟಾದ ಉದ್ವಿಗ್ನತೆ ಈಗ ಶಾಂತವಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

ಕಾಂತಾರ: ಚಾಪ್ಟರ್ 1′ ಸಿನಿಮಾ ನೋಡಿದ ಬಳಿಕ ದೈವ ಬಂದಂತೆ ಆಡಿದ ಪ್ರೇಕ್ಷಕ

TAGGED:Gadag Communal tension: Conflict between Hindus and Muslims over outstanding money!
Share This Article
Facebook Twitter Copy Link Print
Previous Article ಕಾಂತಾರ: ಚಾಪ್ಟರ್ 1′ ಸಿನಿಮಾ ನೋಡಿದ ಬಳಿಕ ದೈವ ಬಂದಂತೆ ಆಡಿದ ಪ್ರೇಕ್ಷಕ
Next Article ದುರ್ಗಾದೇವಿ ವಿಸರ್ಜನೆ ವೇಳೆ ಭಾರೀ ದುರಂತ: ಮಕ್ಕಳು ಸೇರಿ 14 ಮಂದಿ ಸಾ*ವು, ವೀಡಿಯೊ ನೋಡಿ

Popular Posts

Clash for misbehave ಬಸ್‌ನಲ್ಲಿ ವಿದ್ಯಾರ್ಥಿನಿಯರಿಗೆ ಚುಡಾವಣೆ: ಎರಡು ಗ್ರಾಮಗಳ ವಿದ್ಯಾರ್ಥಿಗಳ ನಡುವೆ ಘರ್ಷಣೆ!

1 Min Read

PM Narendra Modi ಪರೀಕ್ಷಾ ಅಕ್ರಮ ತಡೆಗೆ ಕೇಂದ್ರ ಮಾಸ್ಟರ್ ಪ್ಲಾನ್ ; 10 ವರ್ಷ ಜೈಲು, ₹10 ಕೋಟಿ ದಂಡಕ್ಕೆ ಕೇಂದ್ರ ಸಂಪುಟ ಸಮ್ಮತಿ

1 Min Read

Humen bomber attack ಭೀಕರ ಆತ್ಮಾ*ಹುತಿ ದಾಳಿ: 12 ಸೈನಿಕರು ಸೇರಿ 15 ಮಂದಿ ದಾರುಣ ಸಾವು

1 Min Read

Shocking ಹೃದಯಾಘಾತ ಎಂದಿದ್ದ ಪತ್ನಿಯೇ ಹಂತಕಿ? ಮೊಬೈಲ್ ಚಾಟಿಂಗ್‌ನಿಂದ ಬಯಲಾಯ್ತು ಕೊ*ಲೆ ರಹಸ್ಯ

1 Min Read

You Might Also Like

ಪ್ರಮುಖಕರ್ನಾಟಕ

Landslide ವರುಣನ ಆರ್ಭಟ; ಗದ್ದೆ-ತೋಟಗಳು ಜಲಾವೃತ, ಹೆದ್ದಾರಿಯಲ್ಲಿ ಭೂಕುಸಿತ

1 Min Read
ಪ್ರಮುಖಕರ್ನಾಟಕ

Rain Alert ಭಾರಿ ಮಳೆ ಎಚ್ಚರಿಕೆ; 4 ದಿನ 17 ಜಿಲ್ಲೆಗಳಲ್ಲಿ ಸುರಿಯಲಿದೆ ಧಾರಾಕಾರ ಮಳೆ

1 Min Read
ಪ್ರಮುಖCrimeಕರ್ನಾಟಕ

Crime Case ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ಶ*ವ ಪತ್ತೆ; ಕೊಲೆ ಶಂಕೆ ವ್ಯಕ್ತಪಡಿಸಿದ ಪೋಷಕರು

0 Min Read
ದೇಶಪ್ರಮುಖ

Strange marriage ಒಬ್ಬನನ್ನೇ ಮದುವೆಯಾದ ಮೂವರು ಸಹೋದರಿಯರು! ಯಾಕೆ ಹೀಗೆ? ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?