Newsics_Kannada
Subscribe and watch video
ನ್ಯೂಸಿಕ್ಸ್ ಕನ್ನಡ
ಬನ್ನಿ ನಮ್ ಸಂಗಡ
newsics.com
ಹಿರಿಯ ನಟಿ ಶ್ರುತಿ ಅವರ ಮಗಳು ಗೌರಿ, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಆಗಾಗ ಹೊಸ ಫೋಟೋಶೂಟ್‌ಗಳ ಮೂಲಕ ಗಮನ ಸೆಳೆಯುತ್ತಾರೆ.ಸ್ಯಾಂಡಲ್‌ವುಡ್ ಹಿರಿಯ ನಟಿ ಶ್ರುತಿ ಕೃಷ್ಣ ದಸರಾ ಹಬ್ಬ ಜೋರಾಗಿಯೇ ಆಚರಣೆ ಮಾಡಲಾಗಿದೆ. ಮಗಳು ಗೌರಿ ಶ್ರುತಿ ಸಹ ಈ ವರ್ಷ ದಸರಾ ಹಬ್ಬದ ಒಂದು ಫೋಟೋ ಹಂಚಿಕೊಂಡಿದ್ದಾರೆ. ಇದು ಇಂಟ್ರಸ್ಟಿಂಗ್ ಆಗಿಯೇ ಇದೆ.
ಆಯುಧ ಪೂಜೆಯ ಒಂದು ಫೋಟೋವನ್ನೆ ಗೌರಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಮೇಕ್ಅಪ್ ಕಿಟ್‌ನಲ್ಲಿರೋ ಅಷ್ಟು ವಸ್ತುಗಳು ಇವೆ. ಪ್ರತಿ ವಸ್ತುವನ್ನು ಪೂಜೆ ಮಾಡಿದ್ದಾರೆ. ಪೂಜೆ ಮಾಡಿ ಸೇವಂತಿಗೆ ಹೂವು ಕೂಡ ಇಟ್ಟಿದ್ದಾರೆ.
ಮೇಕ್‌ಅಪ್ ಕಿಟ್‌ನಲ್ಲಿರೋ ವಸ್ತುಗಳನ್ನ ಯಾರು ಪೂಜೆ ಮಾಡ್ತಾರೆ. ಇದು ಫನ್ನಿ ಅಲ್ವೇ ? ಅಂತಲೂ ಕೆಲವ್ರಿಗೆ ಅನಿಸಬಹುದು. ಆದರೆ, ಕಲಾವಿದರಿಗೆ ಇದೇ ದೇವರು. ಇದೇ ಆಯುಧ ಅಲ್ವೆ? ಕಲಾವಿದರು ಇದನ್ನ ನಂಬಿಯೇ ಜೀವನ ನಡೆಸುತ್ತಾರೆ. ಬಣ್ಣ ಇಲ್ಲದೆ ಏನೂ ಇಲ್ಲ ಅನ್ನೋ ಸತ್ಯ ಕಲಾವಿದರಿಗೆ ತಿಳಿದಿರುತ್ತದೆ.
https://www.instagram.com/gowri_shruthi__?igsh=NXpldTZjMWh6Z3Nl