Subscribe NewsicsKannada/YouTube
newsics.com
ಹೈದರಾಬಾದ್(ತೆಲಂಗಾಣ): ರಾಜ್ಯದಲ್ಲಿ ಹಲವು ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ತೆಲಂಗಾಣ ರಸ್ತೆ ಸಾರಿಗೆ ನಿಗಮದ ನಿರ್ದೇಶಕರಾಗಿದ್ದ ಕರ್ನಾಟಕದ ಹುಬ್ಬಳ್ಳಿ ಮೂಲದ ವಿ. ಸಿ. ಸಜ್ಜನರ್ ಅವರನ್ನು ಹೈದರಾಬಾದ್ ನಗರ ಪೊಲೀಸ್ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ.
ಹೈದರಾಬಾದ್ ನಗರ ಆಯುಕ್ತರಾಗಿದ್ದ ಸಿ.ವಿ. ಆನಂದ್ ಅವರನ್ನು ಗೃಹ ಇಲಾಖೆಯ ವಿಶೇಷ ಮುಖ್ಯ ಕಾರ್ಯದರ್ಶಿಯಾಗಿ ವರ್ಗಾಯಿಸಲಾಗಿದೆ. ಇದರಿಂದ ತೆರವಾಗಿದ್ದ ಸ್ಥಾನಕ್ಕೆ ‘ಸೂಪರ್ ಕಾಪ್’ ಎಂದೇ ಹೆಸರುವಾಸಿಯಾಗಿರುವ ಸಜ್ಜನರ್ ಅವರನ್ನು ನಿಯುಕ್ತಿ ಮಾಡಲಾಗಿದೆ.
ವಿಶೇಷ ಗುಪ್ತಚರ ಶಾಖೆಯ ಡಿಐಜಿ ಮತ್ತು ಇನ್ಸ್‌ಪೆಕ್ಟರ್ ಜನರಲ್ ಆಗಿ ಮಾವೋವಾದಿ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸಜ್ಜನರ್ ಅವರು ‘ಎನ್‌ಕೌಂಟರ್ ಸ್ಪೆಷಲಿಸ್ಟ್’ ಎಂದೇ ಖ್ಯಾತರಾಗಿದ್ದಾರೆ.
ನರ್ಸಿಂಗ್ ವಿದ್ಯಾರ್ಥಿನಿಯನ್ನು ಅಪಹರಿಸಿ, ಅತ್ಯಾ*ಚಾರ – ವಿಡಿಯೋ ಮಾಡಿ ಬೆದರಿಕೆ
ಬೆಡ್‌ರೂಮ್‌ನಲ್ಲಿ ಅಶ್ಲೀಲ ವಿಡಿಯೋ ಭಂಗಿ ಅನುಕರಿಸುವಂತೆ ಪೀಡಿಸುತ್ತಿದ್ದ ಗಂಡನನ್ನು ಕೊಂದ ಹೆಂಡತಿ