Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಜ್ಯೋತಿಷ್ಯ > Navaratri special ನವರಾತ್ರಿಯ ಕೊನೆಯ ಮೂರು ದಿನ ಈ ಮಹಿಳೆಯರು ಪೂಜೆ, ಉಪವಾಸ ಮಾಡಬಾರದೇಕೆ?
ಕರ್ನಾಟಕಜ್ಯೋತಿಷ್ಯದೇಶಪ್ರಮುಖಲೈಫ್‌ಸ್ಟೈಲ್

Navaratri special ನವರಾತ್ರಿಯ ಕೊನೆಯ ಮೂರು ದಿನ ಈ ಮಹಿಳೆಯರು ಪೂಜೆ, ಉಪವಾಸ ಮಾಡಬಾರದೇಕೆ?

Share
2 Min Read
SHARE

Subscribe NewsicsKannada/YouTube

newsics.com

ನವರಾತ್ರಿಯ ಪ್ರತಿದಿನವೂ ತನ್ನದೇ ಆದ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಅದರಲ್ಲೂ ನವರಾತ್ರಿ ಹಬ್ಬದ 7, 8 ಹಾಗೂ 9 ನೇ ದಿನಕ್ಕೆ ಹೆಚ್ಚಿನ ಮಹತ್ವವಿದೆ.

ಈ ಮೂರು ದಿನಗಳನ್ನು ಕ್ರಮವಾಗಿ ಸಪ್ತಮಿ, ಅಷ್ಟಮಿ ಹಾಗೂ ಮಹಾನವಮಿ ಎಂದು ಕರೆಯಲಾಗುತ್ತದೆ.

ನವರಾತ್ರಿ ಹಬ್ಬದ ಕೊನೆಯ ಈ 3 ದಿನಗಳು ದುರ್ಗಾ ದೇವಿಯ ಆಶೀರ್ವಾದವನ್ನು ಭಕ್ತರ ಮೇಲೆ ಮಹಾಪೂರವಾಗಿ ಹರಿಯುವಂತೆ ಮಾಡುತ್ತವೆ. ನವರಾತ್ರಿ ಹಬ್ಬ ಬಂತೆಂದರೆ ಮಹಿಳೆಯರು 9 ದಿನಗಳ ಕಾಲ ಉಪವಾಸ ವ್ರತವನ್ನು ಮತ್ತು ಪೂಜೆಯನ್ನು ಮಾಡುತ್ತಾರೆ.

ಆದರೆ, ನಮ್ಮ ಧರ್ಮಗ್ರಂಥಗಳಲ್ಲಿ ಹಾಗೂ ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ, ನವರಾತ್ರಿಯ ಕೆಲವು ನಿರ್ದಿಷ್ಟವಾದ ದಿನಗಳಲ್ಲಿ ಈ ಮಹಿಳೆಯರು ಉಪವಾಸ ಮತ್ತು ಪೂಜೆ ಮಾಡುವುದನ್ನು ತಪ್ಪಿಸಬೇಕು.

ಮುಟ್ಟಿನ ವೇಳೆ ಪೂಜೆ ಬೇಡ

ಶಾಸ್ತ್ರದ ಹಾಗೂ ಧಾರ್ಮಿಕ ನಂಬಿಕೆ ಪ್ರಕಾರ ಮುಟ್ಟಿನ ಸಮಯದಲ್ಲಿ ಮಹಿಳೆಯರು ದೇವರ ಪೂಜೆಯನ್ನು ಮಾಡಬಾರದು. ನವರಾತ್ರಿಯ 9 ದಿನಗಳಲ್ಲಿ ಸಪ್ತಮಿ, ಅಷ್ಟಮಿ ಮತ್ತು ನವಮಿ ತಿಥಿಯು ಶ್ರೇಷ್ಠವಾದ ದಿನವಾಗಿದ್ದು, ಈ 3 ದಿನಗಳಲ್ಲಿ ಮುಟ್ಟಾದ ಮಹಿಳೆಯರು ಪೂಜೆ ಮಾಡುವುದು, ಉಪವಾಸ ವ್ರತ ಮಾಡುವುದು ನಿಷಿದ್ಧವಾಗಿರುತ್ತದೆ. ಇದರ ಬದಲಾಗಿ ನೀವು ಈ ಸಮಯದಲ್ಲಿ ಮನಸ್ಸಿನಲ್ಲೇ ದುರ್ಗಾ ದೇವಿಯನ್ನು ಸ್ಮರಿಸಿ.

ಗರ್ಭಿಣಿಯರು ವ್ರತ ಮಾಡಬಾರದು

ಗರ್ಭಾವಸ್ಥೆಯಲ್ಲಿರುವ ಮಹಿಳೆಯರು ನವರಾತ್ರಿ ಹಬ್ಬದ ಸಪ್ತಮಿ, ಅಷ್ಟಮಿ ಹಾಗೂ ನವಮಿಯ ದಿನದಂದು ಪೂಜೆಯನ್ನು, ಉಪವಾಸವನ್ನು ಮಾಡಬಾರದು ಎಂದು ಧಾರ್ಮಿಕ ಗ್ರಂಥಗಳಲ್ಲಿ ಹೇಳಲಾಗಿದೆ.

ನವರಾತ್ರಿ ಹಬ್ಬದ ಈ ದಿನಗಳಲ್ಲಿ ಮಾಡುವ ದೀರ್ಘಕಾಲದ ಉಪವಾಸವು ಗರ್ಭದಲ್ಲಿರುವ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

ಗರ್ಭಿಣಿಯರು ನವರಾತ್ರಿ ಹಬ್ಬದ ಸಪ್ತಮಿ, ಅಷ್ಟಮಿ ಹಾಗೂ ನವಮಿಯ ದಿನದಂದು ದುರ್ಗಾ ದೇವಿಯನ್ನು ಪೂಜಿಸಬಹುದು. ಆದರೆ, ಉಪವಾಸ ವ್ರತವನ್ನು ಮಾಡಬಾರದು.

ಅನಾರೋಗ್ಯಪೀಡಿತ ಮಹಿಳೆಯೂ ಪೂಜೆ ಮಾಡಬಾರದೇಕೆ?

ಯಾವುದೇ ಮಹಿಳೆ ಆರೋಗ್ಯದ ಸಮಸ್ಯೆಗಳಿಗೆ ಒಳಗಾಗಿದ್ದರೆ ಅಥವಾ ಆಕೆ ದೈಹಿಕವಾಗಿ ತುಂಬಾ ದುರ್ಬಲಳಾಗಿದ್ದರೆ ಅಂತಹ ಸಂದರ್ಭದಲ್ಲಿ ಅವರು ನವರಾತ್ರಿಯ 7, 8 ಮತ್ತು 9 ನೇ ದಿನದಂದು ಪೂಜೆ ಮಾಡುವುದಾಗಲಿ, ಉಪವಾಸ ಮಾಡುವುದಾಗಲಿ ಮಾಡಬಾರದು.

ಇದು ದೇಹದ ಮೇಲೆ ಹೆಚ್ಚುವರಿ ಒತ್ತಡವನ್ನುಂಟುಮಾಡಬಹುದು ಮತ್ತು ಆರೋಗ್ಯವು ಹದಗೆಡುವ ಅಪಾಯವನ್ನುಂಟುಮಾಡಬಹುದು. ಮಾನಸಿಕ ಪೂಜೆ ದೈಹಿಕ ಪೂಜೆಗಿಂತ ದೊಡ್ಡದು ಎಂದು ಶಾಸ್ತ್ರಗಳು ಹೇಳುತ್ತವೆ. ಮಹಿಳೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ, ಅವಳು ಮಹಾಸಪ್ತಮಿ, ಮಹಾಷ್ಟಮಿ ಮತ್ತು ಮಹಾನವಮಿಯಂದು ಉಪವಾಸ ಮತ್ತು ಪೂಜೆಯನ್ನು ತಪ್ಪಿಸಬೇಕು.

ನವರಾತ್ರಿ ಹಬ್ಬದ ಕೊನೆಯ ಮೂರು ದಿನಗಳಲ್ಲಿ ಈ ಮೂರು ವರ್ಗಕ್ಕೆ ಸೇರಿರುವ ಜನರು ದುರ್ಗಾ ದೇವಿಯನ್ನು ಪೂಜಿಸಬಾರದು. ಇವರು ದುರ್ಗಾ ದೇವಿಯನ್ನು ಪೂಜಿಸಲು ಇಚ್ಛಿಸಿದರೆ ಮನಸ್ಸಿನಲ್ಲೇ ದೇವಿಯನ್ನು ಪೂಜಿಸುವುದು ತುಂಬಾ ಉತ್ತಮ.

https://sharechat.com/post/XWbQExJ?d=n&ui=7mKNyPk

ಇನ್ಮುಂದೆ ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ – ಗೀತಾ ಶಿವರಾಜ್ ಕುಮಾರ್

TAGGED:Why shouldn't these women worship and fast during the last three days of Navratri?
Share This Article
Facebook Twitter Copy Link Print
Previous Article ರಸ್ತೆಗುಂಡಿ ಮುಚ್ಚಿಲ್ಲವೆಂದರೆ ಕಮಿಷನರ್, ಅಧಿಕಾರಿಗಳೇ ನೇರ ಹೊಣೆ – ಸಿಎಂ ಎಚ್ಚರಿಕೆ
Next Article Warm Water: ಬಿಸಿ ನೀರು ಅಥವಾ ತಣ್ಣೀರು, ಖಾಲಿ ಹೊಟ್ಟೆಯಲ್ಲಿ ಯಾವ ನೀರು ಕುಡಿದರೆ ಉತ್ತಮ?

Popular Posts

Clean Bangalore Drive | ಸ್ವಚ್ಛ ಬೆಂಗಳೂರು’ ಅಭಿಯಾನ: ಕಸ ಮುಕ್ತ, ಸುಂದರ ರಾಜಧಾನಿ ನಿರ್ಮಾಣಕ್ಕೆ ಸರ್ಕಾರದ ಮಹತ್ವದ ಹೆಜ್ಜೆ

3 Min Read

Anurag Kashyap Controversy| ನಗ್ನ ದೃಶ್ಯಕ್ಕೆ ನಿರಾಕರಣೆ; ಅನುರಾಗ್ ಕಶ್ಯಪ್ ಸಿನಿಮಾ ಕೈತಪ್ಪಿತು ಎಂದ ನಟಿಯ ಬಹಿರಂಗ

2 Min Read

Fast Track Court For Exam Paper Leak | ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳಿಗೆ ಫಾಸ್ಟ್ ಟ್ರ್ಯಾಕ್ ಕೋರ್ಟ್: ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ

1 Min Read

Gokarn Temple New Rules | ಗೋಕರ್ಣ ಮಹಾಗಣಪತಿ ದೇವಸ್ಥಾನದಲ್ಲಿ ಇನ್ಮುಂದೆ ಸ್ಪರ್ಶ ದರ್ಶನ ಇಲ್ಲ; ಭಕ್ತರಿಗೆ ಹೊಸ ನಿಯಮ

1 Min Read

You Might Also Like

ಜ್ಯೋತಿಷ್ಯದಿನ ಭವಿಷ್ಯ

Daily Horoscope ಇಂದಿನ ದಿನ ಭವಿಷ್ಯ – 23 ಜುಲೈ 2026

2 Min Read
ಕರ್ನಾಟಕದೇಶಪ್ರಮುಖಮನರಂಜನೆವಿದೇಶ

Commonwealth Bharatanatyam ಕಾಮನ್‌ವೆಲ್ತ್ ಉದ್ಘಾಟನಾ ಸಮಾರಂಭದಲ್ಲಿಂದು ಕಲಬುರಗಿ ಯುವತಿಯ ಭರತನಾಟ್ಯ!

1 Min Read
ಮನರಂಜನೆಕರ್ನಾಟಕದೇಶಪ್ರಮುಖ

CM Vijay’s Last Film ಬೆಂಗಳೂರಿನಲ್ಲೂ ‘ಜನ ನಾಯಗನ್’ ಜ್ವರ: ವಿಜಯ್ ಕೊನೆಯ ಸಿನಿಮಾಗೆ ಅಭಿಮಾನಿಗಳ ಅದ್ಧೂರಿ ಸ್ವಾಗತ

2 Min Read
ಕರ್ನಾಟಕದೇಶಪ್ರಮುಖ

Channamma samadhi ರಾಜಘಾಟ್ ಮಾದರಿಯಲ್ಲಿ ಚನ್ನಮ್ಮ ಸಮಾಧಿ: 300 ಕೋಟಿ‌ ವೆಚ್ಚದ ಯೋಜನೆ

3 Min Read

Social Networks

Facebook-f Instagram Twitter
Welcome Back!

Sign in to your account

Lost your password?