newsics.com
ರಿಷಬ್ ಶೆಟ್ಟಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಕಾಂತಾರ ಚಾಪ್ಟರ್ 1ರ ಟ್ರೈಲರ್ ಸೋಮವಾರ ( ಸೆಪ್ಟೆಂಬರ್ 22) ಬಿಡುಗಡೆಯಾಗಿದೆ.
ಚಿತ್ರ ಇದೇ ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಚಿತ್ರ ಬಿಡುಗಡೆಯಾಗಲಿದೆ. 2022ರ ಸೆಪ್ಟೆಂಬರ್ 30ರಂದು ತೆರೆಗೆ ಬಂದಿದ್ದ ಕಾಂತಾರ ಚಿತ್ರದ ಪ್ರೀಕ್ವೆಲ್ ಆಗಿರುವ ಕಾಂತಾರ ಚಾಪ್ಟರ್ 1 ಸ್ವತಂತ್ರಪೂರ್ವ ಕಾಲಘಟ್ಟದ ಕಥೆಯನ್ನು ಹೇಳಲಿದೆ.
ಕಾಂತಾರ ಯಶಸ್ಸು ಚಾಪ್ಟರ್ 1 ಮೇಲೆ ಬೆಟ್ಟದಷ್ಟು ನಿರೀಕ್ಷೆ ಹುಟ್ಟಿಕೊಳ್ಳುವಂತೆ ಮಾಡಿದ್ದು ಸಿನಿ ರಸಿಕರು ಕಾಂತಾರ ಹಿಂದಿನ ಕಥೆ ಏನಿರಬಹುದು ಎಂದು ಕಾಯತೊಡಗಿದ್ದಾರೆ.
ಹೀಗೆ ಎಲ್ಲ ವರ್ಗದವರೂ, ಎಲ್ಲ ಧರ್ಮದವರೂ ಕಾಯುತ್ತಿರುವ ಕಾಂತಾರ ಚಿತ್ರದ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದು ವೈರಲ್ ಆಗಿದ್ದು, ಇದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.
ಕಾಂತಾರ ವೀಕ್ಷಿಸಲು ಬರುವವರು ಮೂರು ನಿಯಮಗಳನ್ನು ಅನುಸರಿಸುತ್ತೇವೆ ಎಂದು ನಿರ್ಧಾರ ಮಾಡಿಕೊಳ್ಳಿ ಎಂದು ಈ ಪೋಸ್ಟ್‌ನಲ್ಲಿ ಬರೆಯಲಾಗಿದೆ. ಅದೇನೆಂದರೆ ಮದ್ಯಪಾನ ಮಾಡುವುದಿಲ್ಲ, ಧೂಮಪಾನ ಮಾಡುವುದಿಲ್ಲ ಹಾಗೂ ಮಾಂಸಾಹಾರ ಸೇವಿಸುವುದಿಲ್ಲ ಎಂದು ಸಂಕಲ್ಪ ಮಾಡಿ ಎಂದು ಈ ಪೋಸ್ಟ್‌ನಲ್ಲಿ ಬರೆಯಲಾಗಿದೆ.
ಸದ್ಯ ಈ ರೀತಿಯ ಪ್ರಕಟಣೆ ಇರುವ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ ಹಾಗೂ ನಗೆಪಾಟಲಿಗೆ ಎಡೆಮಾಡಿಕೊಟ್ಟಿದೆ.
ಚಿತ್ರತಂಡಕ್ಕೂ ಈ ಪೋಸ್ಟ್‌ಗೂ ಯಾವುದೇ ಸಂಬಂಧವಿಲ್ಲದೇ ಇದ್ದು, ಇಂತಹ ಪೋಸ್ಟ್ ಮಾಡಿ ಸಸ್ಯಾಹಾರ ಹಾಗೂ ಮಾಂಸಾಹಾರ ಸೇವಿಸುವವರ ನಡುವೆ ಕಿಡಿ ಹೊತ್ತಿಸುವ ಯತ್ನ ನಡೆದಿರುವ ಅನುಮಾನಗಳಿಗೂ ಈ ಪೋಸ್ಟ್ ಎಡೆಮಾಡಿಕೊಟ್ಟಿದೆ.
https://x.com/KranthiBalaga88/status/1969794854545752242?t=gST8hlcMD4_iDsU3H-7CTA&s=19