newsics.com
ಬೆಂಗಳೂರು: ಪ್ರೀತಿಸಿ ಮದುವೆಯಾಗಿದ್ದ 32 ವರ್ಷದ ಮೇಘಾ ಎಂಬಾಕೆ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಹೆಗ್ಗನಹಳ್ಳಿಯಲ್ಲಿ ನಡೆದಿದೆ. ಪತಿ ರಾಜೇಶ್ ಮತ್ತವರ ಕುಟುಂಬದ ವಿರುದ್ಧ ಮಹಿಳೆ ಕುಟುಂಬಸ್ಥರು ವರದಕ್ಷಿಣೆ ಕಿರುಕುಳದ ಆರೋಪ ಮಾಡಿದ್ದಾರೆ.
ಮೇಘಾ ಹಾಗೂ ರಾಜೇಶ್ ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾಗಿದ್ರು. 4 ವರ್ಷಗಳ ಹಿಂದೆ ಹಿರಿಯ ಸಮ್ಮುಖದಲ್ಲಿ ಸಪ್ತಪದಿ ತುಳಿದ ಈ ದಂಪತಿ ಕೆಲ ಕಾಲ ಖುಷಿಯಾಗಿಯೇ ಇದ್ರು ಎನ್ನಲಾಗ್ತಿದೆ. ಈ ದಂಪತಿ ಇತ್ತೀಚಗಷ್ಟೇ ಪೋಷಕರಾಗಿದ್ರು. ಅಮ್ಮನ ಮಡಿಲಲ್ಲಿ 11 ತಿಂಗಳ ಕಂದ ನಗು-ನಗುತ್ತಾ ಕಾಲ ಕಳೆಯುತ್ತಿತ್ತು.
ಆದ್ರೆ ತಾಯಿ ಮೇಘಾ ಪುಟ್ಟ ಮಗುವನ್ನ ಬಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.ಮನೆಯಲ್ಲೇ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು. ತಕ್ಷಣ ಆಕೆಯನ್ನ ಆಸ್ಪತ್ರೆಗೆ ದಾಖಲಿಸಿದ್ರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಮೇಘಾ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.