newsics.com
ಗೌರಿಬಿದನೂರು: ಚಿಕ್ಕಬಳ್ಳಾಪುರ ಜಿಲ್ಲೆಯ ಮದ್ದೂರು ಗಣೇಶ ವಿಸರ್ಜನೆಯಲ್ಲಿ ನಡೆದ ಗಲಭೆಯ ಪರಿಣಾಮದಿಂದಾಗಿ, ನಾಳೆ ನಡೆಯುವ ಗೌರಿಬಿದನೂರು ಬೈಪಾಸ್ ಗಣೇಶ ವಿಸರ್ಜನೆಗೆ ಪೊಲೀಸ್ ಇಲಾಖೆಯಿಂದ ಹೈ ಅಲರ್ಟ್ ಘೋಷಿಸಲಾಗಿದೆ.
ಗೌರಿಬಿದನೂರು ನಗರ ಸುತ್ತಮುತ್ತಲಿನ ಬಾರ್‌ಗಳಿಗೆ ಬ್ಯಾನ್ ಹೇರಲಾಗಿದ್ದು, ಇಂದು ರಾತ್ರಿ 10 ಗಂಟೆಯಿಂದ ಸೆಪ್ಟೆಂಬರ್ 15ರವರೆಗೆ ಮದ್ಯದಂಗಡಿ ಸಂಪೂರ್ಣ ಬಂದ್ ಆಗಿರಲಿದೆ.
ರಾಜ್ಯದಲ್ಲಿ ಉಂಟಾದ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಇಲಾಖೆ ಎಲ್ಲಾ ಗಣೇಶ ವಿಸರ್ಜನೆ ಉತ್ಸವಗಳ ಮೇಲೆ ಗಮನ ಹರಿಸುತ್ತಿದೆ. ಗೌರಿಬಿದನೂರು ಬೈಪಾಸ್‌ನಲ್ಲಿ ನೆಲೆಸಿರುವ ಗಣಪತಿ ಮೂರ್ತಿಯ ವಿಸರ್ಜನೆಯು ನಗರದ ಪ್ರಮುಖ ಆಕರ್ಷಣೆಯಾಗಿದ್ದು, ಇದರಲ್ಲಿ ಸ್ಥಳೀಯರು ಹಾಗೂ ಹೊರಗಿನ ಭಕ್ತರು ಭಾಗವಹಿಸುತ್ತಾರೆ. ಈ ಹಿನ್ನೆಲೆ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದೆ.