Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Inhumane treatment ನರ್ಸಿಂಗ್ ವಿದ್ಯಾರ್ಥಿನಿಗೆ ಟಿಸಿ ಕೊಡಲು ತಾಯಿಯ ತಾಳಿ ಕಿತ್ತುಕೊಂಡ ಕಾಲೇಜಿನ ಚೇರ್ಮನ್!
ಕರ್ನಾಟಕಪ್ರಮುಖ

Inhumane treatment ನರ್ಸಿಂಗ್ ವಿದ್ಯಾರ್ಥಿನಿಗೆ ಟಿಸಿ ಕೊಡಲು ತಾಯಿಯ ತಾಳಿ ಕಿತ್ತುಕೊಂಡ ಕಾಲೇಜಿನ ಚೇರ್ಮನ್!

Share
1 Min Read
SHARE

newsics.com

ಕೊಪ್ಪಳ: ಕಾಲೇಜು ಶುಲ್ಕದ ಬಾಕಿ ಪಾವತಿಗಾಗಿ ವಿದ್ಯಾರ್ಥಿನಿಯ ತಾಯಿಯ ತಾಳಿಯನ್ನೇ ಒತ್ತೆಯಾಗಿಟ್ಟುಕೊಂಡ ಆರೋಪ ಜಿಲ್ಲೆಯ ಗಂಗಾವತಿ ಬಿಬಿಸಿ ನರ್ಸಿಂಗ್ ಕಾಲೇಜಿನ ಚೇರಮನ್ ಡಾ ಸಿಬಿ ಚಿನಿವಾಲ ವಿರುದ್ಧ ಕೇಳಿಬಂದಿದೆ.
ಕನಕಗಿರಿ ತಾಲೂಕಿನ ಮುಸ್ಲಾಪೂರ ಗ್ರಾಮದ ಕಾವೇರಿ ವಾಲಿಕಾರ್ ಎಂಬ ವಿದ್ಯಾರ್ಥಿನಿ ಬಿಬಿಸಿ ನರ್ಸಿಂಗ್ ಕಾಲೇಜಿನಲ್ಲಿ ಬಿಎಸ್ಸಿ ನರ್ಸಿಂಗ್‌ಗೆ ಅಡ್ಮಿಷನ್ ಪಡೆದಿದ್ದಳು.

ಅಡ್ಮಿಷನ್ ಸಮಯದಲ್ಲಿ ಕಾವೇರಿಯ ಪಾಲಕರು 10,000 ರೂ. ಪಾವತಿಸಿದ್ದರು ಮತ್ತು ಉಳಿದ 90,000 ರೂ. ಬಾಕಿಯನ್ನು ನಂತರ ಪಾವತಿಸುವುದಾಗಿ ಭರವಸೆ ನೀಡಿದ್ದರು.

ಆದರೆ, ಇತ್ತೀಚೆಗೆ ಕಾವೇರಿಗೆ ಗದಗಿನ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಸೀಟು ದೊರೆತ ಕಾರಣ, ಅವರು ಬಿಬಿಸಿ ಕಾಲೇಜಿನಿಂದ ಟಿಸಿ (ಟ್ರಾನ್ಸ್‌ಫರ್ ಸರ್ಟಿಫಿಕೇಟ್) ಕೇಳಿದ್ದಾರೆ.

ಕಾವೇರಿಯ ಪಾಲಕರು ಟಿಸಿ ಕೇಳಿದಾಗ, ಕಾಲೇಜು ಚೇರಮನ್ ಡಾ. ಚಿನಿವಾಲ ಉಳಿದ 90,000 ರೂ. ಪಾವತಿಸಿದರೆ ಮಾತ್ರ ಟಿಸಿ ನೀಡುವುದಾಗಿ ಹೇಳಿದ್ದಾರೆ. ಆದರೆ ಸದ್ಯ ಕುಟುಂಬದ ಆರ್ಥಿಕ ಪರಿಸ್ಥಿತಿಯಿಂದ ಹಣ ಪಾವತಿಸಲು ಸಾಧ್ಯವಿಲ್ಲ ಎಂದು ಕಾವೇರಿಯ ಪಾಲಕರು ತಿಳಿಸಿದ್ದಾರೆ.

ಇದಕ್ಕೆ ಚೇರಮನ್ ಡಾ. ಚಿನಿವಾಲ, ‘ಹಣ ಇಲ್ಲದಿದ್ದರೆ ನಿಮ್ಮ ಮೈಮೇಲಿನ ಬಂಗಾರವನ್ನಾದರೂ ಕೊಡಿ ಎಂದು ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಈ ಒತ್ತಡದಿಂದಾಗಿ ಕಾವೇರಿಯ ತಾಯಿ ತಮ್ಮ ತಾಳಿಯನ್ನೇ ಬಿಚ್ಚಿಕೊಟ್ಟು ಟಿಸಿ ಪಡೆದಿದ್ದಾರೆ.

ಕಾವೇರಿಯ ತಾಯಿ ಘಟನೆ ಬಗ್ಗೆ ಮಾತನಾಡಿದ್ದು, ‘ಮಗಳ ಶುಲ್ಕಕ್ಕಾಗಿ ತಾಳಿ ಕೇಳಿದಾಗ, ಬೇರೆ ದಾರಿಯಿಲ್ಲದೆ ನನ್ನ ತಾಳಿಯನ್ನೇ ಕೊಟ್ಟೆ, ಕೊರಳಲ್ಲಿನ ತಾಳಿ ಕೇಳುವ ಅವರು… ಎನ್ನುತ್ತಾ ಕಣ್ಣೀರು ಹಾಕಿದ್ದಾರೆ.

ಈ ಘಟನೆಯಿಂದ ಕಾವೇರಿಯ ಕುಟುಂಬ ಮತ್ತು ಸ್ಥಳೀಯರು ಡಾ ಚಿನಿವಾಲ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಳಿಯಂತಹ ಪವಿತ್ರವಾದ ಆಭರಣವನ್ನು ಶುಲ್ಕಕ್ಕಾಗಿ ಒತ್ತೆಯಾಗಿ ಕೇಳುವ ಚೇರಮನ್‌ರ ನಡವಳಿಕೆ, ಮನಸ್ಥಿತಿ ಬಗ್ಗೆ ಸಾರ್ವಜನಿಕರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.

ಈ ಘಟನೆಯಿಂದ ಕಾಲೇಜಿನ ಆಡಳಿತದ ವಿರುದ್ಧ ಸ್ಥಳೀಯರಲ್ಲಿ ಆಕ್ರೋಶ ಹೆಚ್ಚಾಗಿದ್ದು, ಶಿಕ್ಷಣ ಸಂಸ್ಥೆಯೊಂದು ಇಂತಹ ಅಮಾನವೀಯ ಕೃತ್ಯದಲ್ಲಿ ತೊಡಗಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ಚರ್ಚೆ ಆರಂಭವಾಗಿದೆ.

Viral ನಿಂಬೆ ಹಣ್ಣಿನ ಮೇಲೆ ಹೊಸ ಥಾರ್ ಹತ್ತಿಸಲು ಹೋದ ಮಹಿಳೆ – ಮುಂದೇನಾಯ್ತು? ವೈರಲ್ ವಿಡಿಯೋ ನೋಡಿ

Todays Gold Price: ಬಂಗಾರ ಪ್ರಿಯರಿಗೆ ಬಿಗ್‌ ಶಾಕ್‌! ಚಿನ್ನ ಬೆಲೆಯಲ್ಲಿಂದು ಭಾರೀ ಏರಿಕೆ

Sleeping Position: ನೀವು ಮಲಗುವ ಭಂಗಿ ಹೇಳುತ್ತೆ ನಿಮ್ಮ ವ್ಯಕ್ತಿತ್ವ ಏನೆಂದು?

TAGGED:College chairman snatches mother's mangalya to give TC to nursing student!
Share This Article
Facebook Twitter Copy Link Print
Previous Article ಗದಗನಲ್ಲಿ ಕಾರಿನ ಮೇಲೆ ಪಾಕಿಸ್ತಾನದ ಧ್ವಜ ಹಾಕಿ ಇನ್ಸ್ಟಾಗ್ರಾಂ ಪೋಸ್ಟ್ : FIR ದಾಖಲು.!
Next Article 3 ಕೋಟಿ ವಂಚನೆ ಪ್ರಕರಣ: ಧ್ರುವ ಸರ್ಜಾಗೆ ತಾತ್ಕಾಲಿಕ ರಿಲೀಫ್ ನೀಡಿದ ಕೋರ್ಟ್

Popular Posts

ಮಧ್ಯರಾತ್ರಿಲೀ ಯುವತಿಯನ್ನ ರೈಲಿನಿಂದ ಕೆಳಗಿಳಿಸಿದ TTE; ವೈರಲ್ ವಿಡಿಯೋ ನೋಡಿ

2 Min Read

ಭೀಕರ ರಸ್ತೆ ಅಪಘಾತ: ಚಾಲಕರಿಬ್ಬರು ಸೇರಿ ಮೂವರ ಸಾವು

1 Min Read

ಇನ್ಮುಂದೆ ವೈದ್ಯರ ಚೀಟಿ ಇಲ್ಲದೆ ಮೆಡಿಕಲ್ ಶಾಪ್ ಗಳಲ್ಲಿ ಯಾವುದೇ `ಸಿರಪ್’ ನೀಡುವಂತಿಲ್ಲ ಎಂದ ಕೇಂದ್ರ ಸರ್ಕಾರ

1 Min Read

Drugged and raped ಐಎಎಫ್ ಅಧಿಕಾರಿ ಪತ್ನಿಗೆ ಡ್ರಗ್ಸ್ ನೀಡಿ ಅತ್ಯಾ*ಚಾರ, ಇಸ್ಲಾಂ ಧರ್ಮಕ್ಕೆ ಮತಾಂತರ ಯತ್ನ

2 Min Read

You Might Also Like

ಪ್ರಮುಖಮನರಂಜನೆ

ದಳಪತಿ ವಿಜಯ್ ಡಿವೋರ್ಸ್​ ಕೇಸ್: ಆಗಸ್ಟ್​​ 7ಕ್ಕೆ ಖುದ್ದು ಹಾಜರಾಗಲು ದಂಪತಿಗೆ ಕೋರ್ಟ್ ಸೂಚನೆ

2 Min Read
ದೇಶಪ್ರಮುಖ

NEET ಪರೀಕ್ಷೆ ಹಿನ್ನೆಲೆ: ಟೆಲಿಗ್ರಾಂ ಆ್ಯಪ್‌ಗೆ ತಾತ್ಕಾಲಿಕ ನಿರ್ಬಂಧ ಹೇರಿದ ಕೇಂದ್ರ ಸರ್ಕಾರ

2 Min Read
ಪ್ರಮುಖಮನರಂಜನೆ

ಸ್ಕಾಲರ್​​ಶಿಪ್​ ಕೊಡೋಕೆ ರಶ್ಮಿಕಾ ಪ್ರಯಣಿಸಿದ ಕಾರು ಯಾವುದು?;! 5 ಸ್ಟಾರ್ ಹೋಟೆಲ್​​ ರೂಮ್​ನಂತಿರುವ ಇದರ ಬೆಲೆ ಎಷ್ಟು?

2 Min Read
ಪ್ರಮುಖವಿದೇಶ

300 ವರ್ಷದ ಹಿಂದಿನ ಆತ್ಮದ ಜೊತೆ ಮದುವೆ!; ವಿವಾಹ ನಡೆದಿದ್ದು ಹೇಗೆ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?