newsics.com
ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲೂಕಿನಲ್ಲಿ ಈದ್ ಮಿಲಾದ್ ಮೆರವಣಿಗೆಯಲ್ಲಿ ಮಿಲಾದ್ ಮೆರವಣಿಗೆಯಲ್ಲಿ ಕೆಲವು ಕಿಡಿಗೇಡಿಗಳು ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದಾರೆ ಎಂದು ತಿಳಿದು ಬಂದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸೆಪ್ಟೆಂಬರ್ 8ರ ರಾತ್ರಿ 8:00 ಗಂಟೆಗೆ ಈದ್ ಮಿಲಾದ್ ಮೆರವಣಿಗೆ ನಡೆದಿದೆ. ಗಾಂಧಿ ವೃತದಲ್ಲಿ ಅಳವಡಿಸಲಾಗಿದ್ದ ಡಿಜೆ ಸೌಂಡಿಗೆ ಕುಣಿಯುವ ವೇಳೆ ಪಾಕಿಸ್ತಾನ ಪರ ಕೆಲ ಕಿಡಿಗೇಡಿಗಳು ಘೋಷಣೆ ಕೂಗಿದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ವಾಟ್ಸ್ ಆ್ಯಪ್ ಸ್ಟೇಟಸ್ ಗಳಲ್ಲೂ ಈ ವಿಡಿಯೋ ಹರಿದಾಡುತ್ತಿದೆ
ಪಾಕ್ ಪರ ಘೋಷಣೆ ವಿಡಿಯೋ ಹರಿದಾಡ್ತಿದ್ದಂತೆ ಶಿವಮೊಗ್ಗ ಪೊಲೀಸರು ಅಲರ್ಟ್ ಆಗಿದ್ದು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭದ್ರಾವತಿಯ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಡಿಯೋ ಸತ್ಯಾಸತ್ಯತೆ ಜೊತೆಗೆ ಘೋಷಣೆ ಕೂಗಿದವರ ಶೋಧಕ್ಕೆ ಪೊಲೀಸರು ಮುಂದಾಗಿದ್ದಾರೆ. ಈ ಸಂಬಂಧ ಮಾಹಿತಿ ಶಿವಮೊಗ್ಗ ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ನೀಡಿದ್ದಾರೆ.