newsics.com
ತೆಲಂಗಾಣ ಮಂತ್ರಿ ಕೊಂಡ ಸುರೇಖಾ ಮಾಡಿದ್ದ ವಿವಾದಾತ್ಮಕ ಹೇಳಿಕೆ ನೀಡಿದ್ದು, ಅಕ್ಕಿನೇನಿ ಕುಟುಂಬ ಮಾನನಷ್ಟ ಮೊಕದ್ದಮೆ ಹೂಡಿತ್ತು.ಈ ಪ್ರಕರಣದ ವಿಚಾರಣೆಗೆ ಬುಧವಾರ ನಟ ನಾಗಾರ್ಜುನ ಮತ್ತು ಅವರ ಮಗ ನಾಗ ಚೈತನ್ಯ ನಾಂಪಲ್ಲಿಯ ಮನೋರಂಜನ್ ಕೋರ್ಟ್‌ಗೆ ಹಾಜರಾಗಿದ್ದಾರೆ.
ಸುರೇಖಾ ಹೇಳಿಕೆಗಳ ಬಗ್ಗೆ ನಾಗಾರ್ಜುನ ಪ್ರತಿಕ್ರಿಯಿಸಿದ್ರು. ಜವಾಬ್ದಾರಿಯುತ ಸ್ಥಾನದಲ್ಲಿರೋರು ಎಚ್ಚರಿಕೆಯಿಂದ ಮಾತಾಡ್ಬೇಕು. ಸಿನಿಮಾ ನಟರ ವೈಯಕ್ತಿಕ ಜೀವನವನ್ನ ರಾಜಕೀಯಕ್ಕೆ ಬಳಸಬಾರದು. ನಮ್ಮ ಕುಟುಂಬದ ಬಗ್ಗೆ ಮಾಡಿರೋ ಆರೋಪಗಳು ಸುಳ್ಳು, ಅರ್ಥವಿಲ್ಲದ್ದು. ತಕ್ಷಣ ಹಿಂಪಡೆಯಬೇಕು ಅಂತ ಸ್ಪಷ್ಟಪಡಿಸಿದ್ದಾರೆ.
ಸುರೇಖಾ ಮಾಡಿದ ಹೇಳಿಕೆಗಳ ವಿಡಿಯೋ ಕ್ಲಿಪ್ಪಿಂಗ್ಸ್, ಸೋಶಿಯಲ್ ಮೀಡಿಯಾ ಲಿಂಕ್‌ಗಳನ್ನ ದಾಖಲೆಗಳಾಗಿ ಸಲ್ಲಿಸಲಾಗಿದೆ. ನಮ್ಮ ಮಾನಕ್ಕೆ, ಪ್ರತಿಷ್ಠೆಗೆ ಧಕ್ಕೆ ತರೋ ಹೇಳಿಕೆಗಳನ್ನ ನೀಡಿದ್ದಾರೆ, ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸಿದ್ದಾರೆ, ನಮ್ಮ ಕುಟುಂಬಕ್ಕೆ ತೀವ್ರವಾಗಿ ನೋವುಂಟು ಮಾಡಿದ್ದಾರೆ ಅಂತ ನಾಗಾರ್ಜುನ ವಾದ ಮಂಡಿಸಿದ್ದಾರೆ. ಈಗ ನಾಗಾರ್ಜುನ, ನಾಗ ಚೈತನ್ಯ ಮತ್ತೊಮ್ಮೆ ಕೋರ್ಟ್‌ಗೆ ಹಾಜರಾಗಿ ಹೇಳಿಕೆ ನೀಡಿದ್ದಾರೆ. ಕೋರ್ಟ್ ಅವರ ಹೇಳಿಕೆಗಳನ್ನ ದಾಖಲಿಸಿಕೊಂಡು ವಿಚಾರಣೆಯನ್ನ ಮುಂದೂಡಿದೆ.