newsics.com
ಕಲಿಯುಗದಲ್ಲಿ ನಡೆಯುತ್ತಿರುವ ಕೆಲವು ಘಟನೆಗಳು ಅಚ್ಚರಿ ಮೂಡಿಸುತ್ತಿವೆ. ಇದನ್ನು ಕಂಡು ಜನರು ಬೆರಗಾಗುತ್ತಿದ್ದಾರೆ. ಇದೀಗ ಸಾಕ್ಷಿ ಎಂಬಂತೆ ಇಲ್ಲೊಬ್ಬ ಪ್ರೇಯಸಿ ಫೋನ್ ರಿಸೀವ್ ಮಾಡಿಲ್ಲ ಎಂದು ಹಳ್ಳಿಯ ಕರೆಂಟ್ ಕಟ್ ಮಾಡಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಪ್ರೇಯಸಿ ಫೋನ್ ಎತ್ತಿಲ್ಲ ಅಂತ, ಆಕೆ ಮೊಬೈಲ್ ನಲ್ಲಿ ಬ್ಯುಸಿ ಆಗಿದ್ದಾಳೆ ಎಂದು ಸಿಟ್ಟಿಗೆದ್ದ ಯುವಕ ಇಡೀ ಹಳ್ಳಿಯ ಕರೆಂಟ್ ಕಟ್ ಮಾಡಿದ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆದರೆ ಈ ಘಟನೆ ಎಲ್ಲಿ ನಡೆದಿದೆ ಎಂಬುದು ಸ್ಪಷ್ಟವಾಗಿಲ್ಲ.
ಮೊಬೈಲ್ ಬ್ಯುಸಿ ಬಂದಿದ್ದಕ್ಕೆ ಕೋಪಗೊಂಡು ಲೈಟ್ ಕಂಬ ಹತ್ತಿದ ಯುವಕ ವಿದ್ಯುತ್ ತಂತಿಗಳನ್ನು ಕತ್ತರಿಸಿದ್ದಾನೆ.ಕಳವಳಕಾರಿ ಘಟನೆ ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಿದೆ ಮತ್ತು ಎಲ್ಲರ ಗಮನ ಸೆಳೆಯುತ್ತಿದೆ.
https://www.instagram.com/reel/DOGC2N3EaTq/?igsh=MXR1d3Z0bjlqODRzag==