newsics.com
ಬೆಂಗಳೂರು: ಸ್ಮೋಕಿಂಗ್ ಝೋನ್’ಇಲ್ಲದ ಹೋಟೆಲ್, ಬಾರ್ ಗಳಿಗೆ ಪರವಾನಗಿ ರದ್ದು ಮಾಡಲಾಗುವುದು ಎಂದು ಬಿಬಿಎಂಪಿ ಎಚ್ಚರಿಕೆ ನೀಡಿದೆ.
ಬೆಂಗಳೂರಿನಲ್ಲಿರುವ ಎಲ್ಲಾ ಹೋಟೆಲ್, ಪಬ್, ಬಾರ್, ರೆಸ್ಟೋರೆಂಟ್‌ಗಳು ನಿಯಮಾನುಸಾರ ಕ್ರಮವಹಿಸಬೇಕು. ಸ್ಮೋಕಿಂಗ್ ಝೋನ್ ಕಡ್ಡಾಯ ಇರಲೇಬೇಕು.
ಕಳೆದ 15 ದಿನಗಳ ಹಿಂದೆ BBMP ಸುಮಾರು 300ಕ್ಕೂ ಹೆಚ್ಚು ಪಬ್, ಬಾರ್, ರೆಸ್ಟೋರೆಂಟ್, ಹೋಟೆಲ್‌ಗಳಿಗೆ ನೋಟಿಸ್ ಜಾರಿ ಮಾಡಿತ್ತು. ಸ್ಮೋಕಿಂಗ್ ಝೋನ್ ನಿರ್ಮಾಣ ಮಾಡಿಲ್ಲ ಅಂತಾ ನೋಟಿಸ್ ನೀಡಿ ಎಚ್ಚರಿಸಿತ್ತು. ನೋಟಿಸ್ ಜಾರಿ ಮಾಡಿದರೂ ಹೋಟೆಲ್, ಪಬ್, ಬಾರ್, ರೆಸ್ಟೋರೆಂಟ್‌ಗಳು ಸರಿಪಡಿಸಿಕೊಂಡಿಲ್ಲ ಎಂಬ ಮಾಹಿತಿ ಬಿಬಿಎಂಪಿ ಪರಿಶೀಲನೆ ವೇಳೆ ಗೊತ್ತಾಗಿದೆ. ಇನ್ನೂ ಬಿಬಿಎಂಪಿ ಮುಂದಿನ ವಾರ ನೋಟಿಸ್ ನೀಡಿದ್ದ ಸ್ಥಳಗಳನ್ನು ಪರಿಶೀಲನೆ ನಡೆಸಲಿದೆ. ಪರಿಶೀಲನೆ ನಡೆಸಿ ನೋಟಿಸ್ ಕೊಟ್ಟ ಮೇಲೂ ಸ್ಮೋಕಿಂಗ್ ಝೋನ್ ಅಳವಡಿಸಿಕೊಂಡಿಲ್ಲ ಎಂಬುದು ಕಂಡು ಬಂದರೆ ಪರವಾನಗಿ ರದ್ದು ಮಾಡಲಿದ್ದಾರೆ.