newsics.com
ಪಶ್ಚಿಮ ಬಂಗಾಳದ ಮುರ್ಷಿದಾಬಾದ್ನಲ್ಲಿ ಸೋಮವಾರ ಇಡಿ ಅಧಿಕಾರಿಗಳ ದಾಳಿ ವೇಳೆ ಗೋಡೆ ಹಾರಿ ತಪ್ಪಿಸಿಕೊಳ್ಳಲು ಟಿಎಂಸಿ ಶಾಸಕ ಯತ್ನಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಜಾರಿ ನಿರ್ದೇಶನಾಲಯದ (ED) ತಂಡವು ಶಾಲಾ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಶಾಸಕ ಜಿಬನ್ ಕೃಷ್ಣ ಸಹಾ ಅವರ ನಿವಾಸದ ಮೇಲೆ ದಾಳಿ ನಡೆಸಲು ತಲುಪಿದಾಗ ಭಾರಿ ಹೈಡ್ರಾಮಾ ನಡೆದಿದೆ.
ದಾಳಿಯ ಬಗ್ಗೆ ತಿಳಿದ ಶಾಸಕ ತನ್ನ ಮನೆಯ ಆವರಣ ಗೋಡೆಯನ್ನು ಹತ್ತಿ ಪರಾರಿಯಾಗಲು ಯತ್ನಿಸಿದರು. ಕೂಡಲೇ ಅಧಿಕಾರಿಗಳು ಅವರನ್ನು ಬೆನ್ನಟ್ಟಿ ಬಂಧಿಸಿದರು . ನಮ್ಮ ಅಧಿಕಾರಿಗಳು ಶಾಸಕರನ್ನು ಹತ್ತಿರದ ಪ್ರದೇಶದಲ್ಲಿ ಬೆನ್ನಟ್ಟಿ ಹಿಡಿದರು. ಈಗ, ನಮ್ಮ ಅಧಿಕಾರಿಗಳು ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ಇಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.