ಮತಗಳವು ಆರೋಪ ಸಾಬೀತಿಗೆ ರಾಹುಲ್‌ಗೆ 7 ದಿನದ ಗಡುವು ನೀಡಿದ ಚುನಾವಣಾ ಆಯೋಗ

newsics.com ನವದೆಹಲಿ: ಎನ್‌ಡಿಎ ಸರ್ಕಾರ ಮತ್ತು ಚುನಾವಣೆ ಆಯೋಗವು ಶಾಮೀಲಾಗಿ ಮತಗಳ್ಳತನ ನಡೆಸಿದೆ ಎಂಬ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಆರೋಪವನ್ನು ಮತ್ತೆ ನಿರಾಕರಿಸಿರುವ ಚುನಾವಣೆ ಆಯೋಗ, ಅರೋಪ ಸಾಬೀತು ಮಾಡುವಂತೆ ರಾಹುಲ್‌ ಗಾಂಧಿಗೆ ಸವಾಲು ಹಾಕಿದೆ. ಇದಕ್ಕಾಗಿ 7 ದಿನಗಳ ಗಡುವು ನೀಡಿದ್ದು, ಇಲ್ಲದಿದ್ದರೆ ಕ್ಷಮೆಯಾಚಿಸುವಂತೆ ಆಯೋಗ ಸೂಚಿಸಿದೆ. ಮತಗಳವು ಆರೋಪವನ್ನು ಸಾಕ್ಷಿ ಸಮೇತ ಅಫಿಡವಿಟ್ ಮೂಲಕ 7 ದಿನಗಳೊಳಗೆ ಸಲ್ಲಿಸಬೇಕು. ಇಲ್ಲದಿದ್ದರೆ ಸಾರ್ವಜನಿಕವಾಗಿ ಕ್ಷಮೆ ಕೋರಬೇಕು ಎಂದು ಚುನಾವಣಾ ಆಯೋಗ ಮತ್ತೊಮ್ಮೆ ರಾಹುಲ್‌ ಗಾಂಧಿಗೆ … Continue reading ಮತಗಳವು ಆರೋಪ ಸಾಬೀತಿಗೆ ರಾಹುಲ್‌ಗೆ 7 ದಿನದ ಗಡುವು ನೀಡಿದ ಚುನಾವಣಾ ಆಯೋಗ