newsics.com
ಬೆಂಗಳೂರು: ಮೆಟ್ರೋ ಹಳದಿ ಮಾರ್ಗ ಲೋಕಾರ್ಪಣೆಯಾಗಿ ಎರಡು ದಿನ ಕಳೆದಿದೆ. ಜನ ಸಂಚಾರ ಪ್ರಮಾಣ ಹೆಚ್ಚಾಗುತ್ತಿದೆ. ಈ ಮಧ್ಯೆ ಇಂಟರ್‌ಚೇಂಜ್ ನಿಲ್ದಾಣದವಾದ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಹಳಿಗೆ ಜಿಗಿದು ಆತ್ಮಹತ್ಯೆ ಯತ್ನಿಸಿದ ಘಟನೆ ನಡೆದಿದೆ.
ಘಟನೆ ವೇಳೆ ಕೂಡಲೇ ಮೆಟ್ರೋ ಸಿಬ್ಬಂದಿ ರೆಡ್ ಅಲರ್ಟ್ ನೀಡಿತು.
ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದುಬಿಎಂಆರ್‌ಸಿಎಲ್ ಅಧಿಕೃತ ಮಾಹಿತಿ ನೀಡಿದೆ. ಈ ವೇಳೆ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. ರಾತ್ರಿ 10:15 ರ ಸುಮಾರಿಗೆ ಯುವಕನೊಬ್ಬ ಏಕಾಏಕಿ ಮೆಟ್ರೋ ಹಳಿಗೆ ಹಾರಿದ್ದಾನೆ. ತಕ್ಷಣವೇ ಭದ್ರತಾ ಸಿಬ್ಬಂದಿ ತುರ್ತು ಪರಿಸ್ಥಿತಿಯ ಇಟಿಎಸ್ ಬಟನ್ ಒತ್ತಿ ರೈಲು ನಿಲ್ಲಿಸಿದ್ದಾರೆ. ಗಾಯಗೊಂಡಿದ್ದ ಯುವಕನನ್ನು ಹೊರಗೆ ತೆಗೆದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ಭದ್ರತಾ ಮುಖ್ಯಸ್ಥ ಸೆಲ್ವಂ ಮಾಹಿತಿ ನೀಡಿದ್ದಾರೆ.
ರೈಲಿನ ಕೆಳಗೆ ಬಿದ್ದಿದ್ದ ವ್ಯಕ್ತಿಯನ್ನು ಮೆಟ್ರೋ ಸಿಬ್ಬಂದಿ ಹೊರ ತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಯಾಣಿಕರಿಗೆ ತೊಂದರೆಯಾಗದಂತೆ ನಾಲ್ಕು ಟ್ರಿಪ್ ಗಳ ಶಾರ್ಟ್ ಲೂಪ್ ರೈಲುಗಳನ್ನು ಓಡಿಸಲಾಗಿದೆ ಎಂದು ಹೇಳಲಾಗಿದೆ.
ಸಚಿವ ಸ್ಥಾನದಿಂದ ಕೆ.ಎನ್. ರಾಜಣ್ಣ ವಜಾ ಖಂಡಿಸಿ ಪ್ರತಿಭಟನೆ; ಪೆಟ್ರೋಲ್ ಸುರಿದುಕೊಂಡ ಅಭಿಮಾನಿಗಳು