newsics.com
ದೇಹದ ತೂಕವನ್ನು ಇಳಿಸಿಕೊಳ್ಳಬೇಕು ಅಂತ ಅನೇಕ ಜನರು ತುಂಬಾನೇ ಕಟ್ಟುನಿಟ್ಟಿನ ಆಹಾರಕ್ರಮವನ್ನು ಮತ್ತು ಜೀವನಶೈಲಿಯನ್ನು ರೂಢಿಸಿಕೊಂಡಿರುತ್ತಾರೆ. ಅಷ್ಟೇ ಅಲ್ಲದೆ, ಇದೆಲ್ಲದರ ಜೊತೆಗೆ ಪ್ರತಿ ದಿನ ವ್ಯಾಯಾಮ, ಯೋಗ ಮತ್ತು ಧ್ಯಾನದಂತಹ ದೈಹಿಕ ಚಟುವಟಿಕೆಗಳನ್ನು ಸಹ ಅಭ್ಯಾಸ ಮಾಡಿಕೊಂಡಿರುತ್ತಾರೆ.
ಆದರೆ ಇಲೊಬ್ಬ ವ್ಯಕ್ತಿ ದಕ್ಷಿಣ ಭಾರತದ ಆಹಾರ ಮತ್ತು ಶಿಸ್ತುಬದ್ಧ ವ್ಯಾಯಾಮದ ಮೂಲಕ 7 ತಿಂಗಳಲ್ಲಿ 35 ಕಿಲೋಗ್ರಾಂ ತೂಕ ಇಳಿಸಿದ್ದಾರೆ. ಜಿಥಿನ್ ಸುರೇಶ್ ತಮ್ಮ ತೂಕ ಇಳಿಸುವ ಪಯಣವನ್ನು 105 ಕೆಜಿಯಿಂದ ಪ್ರಾರಂಭಿಸಿದರು. ನಿರಂತರ ವ್ಯಾಯಾಮ ಮತ್ತು ಪೌಷ್ಟಿಕಾಂಶಯುಕ್ತ ಆಹಾರ ಪದ್ಧತಿಯಿಂದ, ಅವರು ಕೇವಲ ಏಳು ತಿಂಗಳಲ್ಲಿ 70 ಕೆಜಿಗೆ ತಲುಪಿದರು.
ಬೆಳಗ್ಗೆ 6:30ಕ್ಕೆ ದಿನದ ಆರಂಭದಲ್ಲಿ ಒಂದು ಲೋಟ ಬಿಸಿ ನೀರಿಗೆ ನಿಂಬೆರಸ ಹಿಂಡಿ ಕುಡಿಯುವುದು. ನಂತರ, ಬ್ಲ್ಯಾಕ್ ಕಾಫಿ ಅಥವಾ ಗ್ರೀನ್ ಟೀ ಕುಡಿಯುವುದು.
ಬೆಳಗಿನ ಉಪಾಹಾರ 8:00 ಗಂಟೆಗೆ ಎರಡು ಬೇಯಿಸಿದ ಮೊಟ್ಟೆಗಳ ಜೊತೆ ಎರಡು ಸಣ್ಣ ಇಡ್ಲಿ ಮತ್ತು ಸಾಂಬಾರ್, ಅಥವಾ ಒಂದು ದೋಸೆ ಮತ್ತು ತೆಂಗಿನಕಾಯಿ ಚಟ್ನಿ. ಮೊಳಕೆ ಕಟ್ಟಿದ ಹೆಸರುಬೇಳೆ ಸಲಾಡ್ ಕೂಡ ಉತ್ತಮ ಆಯ್ಕೆ.
ಮಧ್ಯಂತರ ಲಘು ಆಹಾರ 11:00 ಗಂಟೆಗೆ ಒಂದು ಕಪ್ ಮಜ್ಜಿಗೆಯೊಂದಿಗೆ ಹಿಡಿಯಷ್ಟು ಹುರಿದ ಕಡಲೆಕಾಯಿ.
ಮಧ್ಯಾಹ್ನದ ಊಟ 1:00 ಗಂಟೆಗೆ ಕಂದು ಅಕ್ಕಿ (ಬ್ರೌನ್ ರೈಸ್) ಅಥವಾ ನವಣೆ ಅನ್ನದ ಜೊತೆ ಬೇಳೆ ಸಾರು ಅಥವಾ ಸಾಂಬಾರ್, ತೆಂಗಿನಕಾಯಿ ತುರಿ ಹಾಕಿದ ಪಲ್ಯ ಮತ್ತು ಗ್ರಿಲ್ ಮಾಡಿದ ಚಿಕನ್ ಅಥವಾ ಮೀನು. ಸಸ್ಯಾಹಾರಿಗಳು ಪನೀರ್ ಅಥವಾ ಟೋಫು ಬಳಸಬಹುದು.
ಸಂಜೆಯ ತಿಂಡಿ 4:00 ಗಂಟೆಗೆ ಮಸಾಲಾ ಚಹಾ ಅಥವಾ ಗ್ರೀನ್ ಟೀ ಜೊತೆಗೆ ಎರಡು ಬೇಯಿಸಿದ ಮೊಟ್ಟೆಯ ಬಿಳಿಭಾಗ ಅಥವಾ ಹುರಿದ ಕಡಲೆ.
ರಾತ್ರಿಯ ಊಟ 7:00 ಗಂಟೆಗೆ ನವಣೆ ದೋಸೆ ಜೊತೆಗೆ ಸೂಪ್, ಅಥವಾ ಮಲ್ಟಿಗ್ರೇನ್ ರೊಟ್ಟಿ ಜೊತೆ ದಾಲ್ ಅಥವಾ ರಾಜ್ಮಾ ಕರಿ.
ಊಟದ ನಂತರ 9:00 ಗಂಟೆಗೆ ಮಲಗುವ ಮುನ್ನ, ಬಿಸಿ ಅರಿಶಿನದ ಹಾಲಿಗೆ ಪ್ರೋಟೀನ್ ಪೌಡರ್ ಬೆರೆಸಿ ಕುಡಿಯುವುದು.ಜಿಥಿನ್ ಅವರ ಈ ಆಹಾರ ಪದ್ಧತಿಯಿಂದ ತಮ್ಮ ತೂಕವನ್ನು ಇಳಿಸಿಕೊಂಡಿದ್ದಾರೆ.