Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > Hair Color: ನ್ಯೂ ಸ್ಟೈಲ್ ಅಂತ ಹೇರ್ ಕಲರಿಂಗ್ ಮಾಡಿಸ್ತೀರಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ!
ಲೈಫ್‌ಸ್ಟೈಲ್

Hair Color: ನ್ಯೂ ಸ್ಟೈಲ್ ಅಂತ ಹೇರ್ ಕಲರಿಂಗ್ ಮಾಡಿಸ್ತೀರಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ!

Share
2 Min Read
SHARE

newsics.com

ಇತ್ತೀಚಿನ ದಿನಗಳಲ್ಲಿ ಬಣ್ಣಗಳನ್ನು ಹಾಕುವುದು ಸಾಮಾನ್ಯ ಸಂಗತಿಯಾಗಿದೆ. ಯುವಕರಿಂದ ಹಿಡಿದು ವಯಸ್ಸಾದವರು ಕೂಡ ಈ ಬಣ್ಣ ಹಾಕುವುದನ್ನು ಇಷ್ಟ ಪಡುತ್ತಾರೆ. ಇದನ್ನು ಒಂದು ರೀತಿಯ ಟ್ರೆಂಡ್ ಆಗಿ ಬಳಕೆ ಮಾಡುತ್ತಾರೆ.

ಪ್ರಸ್ತುತ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಹಲವು ಬಗೆಯ ಬಣ್ಣದ ಆಯ್ಕೆಗಳು ಸುಲಭವಾಗಿ ಲಭ್ಯವಿದೆ. ಕೆಲವು ವರ್ಷಗಳ ಹಿಂದೆ, ಜನರು ತಮ್ಮ ಬಿಳಿ ಕೂದಲನ್ನು ಮರೆಮಾಡಲು ಮಾತ್ರ ಇದನ್ನು ಬಳಸುತ್ತಿದ್ದರು. ಆ ಸಮಯದಲ್ಲಿ ಜನರು ಕಪ್ಪು ಬಣ್ಣವನ್ನು ಮಾತ್ರ ಬಳಸುತ್ತಿದ್ದರು. ಆದರೆ ಈಗ ಜನರು ಅದನ್ನು ಬೇರೆಯದೇ ರೀತಿಯಲ್ಲಿ ಬಳಸುತ್ತಿದ್ದಾರೆ.

 

ಸದ್ಯ ಕೂದಲಿಗೆ ಕಲರ್ ಹಾಕುವುದು ಒಂದು ಫ್ಯಾಷನ್ ಆಗಿ ಮಾರ್ಪಟ್ಟಿದೆ. ಜನರು ತಮ್ಮ ವ್ಯಕ್ತಿತ್ವಕ್ಕೆ ಹೊಸ ನೋಟ ನೀಡಲು ಇದನ್ನು ಬಳಸುತ್ತಿದ್ದಾರೆ. ಇದು ನೋಡಲು ಚೆನ್ನಾಗಿ ಕಂಡರೂ ಇದು ಆರೋಗ್ಯಕ್ಕೆ ಹಾನಿಕಾರಕ. ಏನೆಲ್ಲಾ ಸಲಹೆಗಳನ್ನು ಪಾಲಿಸಬೇಖು ಎಂಬುದನ್ನು ಇಲ್ಲಿ ನೋಡೋಣ ಬನ್ನಿ.

ಕೆಮಿಕಲ್ ಟ್ರಿಟ್ಮೆಂಟ್ ನಂತರ ಕೂದಲಿನ ನೈಸರ್ಗಿಕ ಬಲ ಕಡಿಮೆಯಾಗುತ್ತದೆ. ಆದ್ದರಿಂದ, ಸಲ್ಫೇಟ್ ರಹಿತ, ಸೌಮ್ಯವಾದ ಶಾಂಪೂ ಬಳಸುವುದು ಮುಖ್ಯ. ಇದು ಕೂದಲಿನಲ್ಲಿ ತೇವಾಂಶವನ್ನು ಉಳಿಸಿಕೊಳ್ಳುತ್ತದೆ ಮತ್ತು ಬಣ್ಣ ಮಸುಕಾಗುವುದನ್ನು ತಡೆಯುತ್ತದೆ.

ಕೂದಲಿನ ಆರೋಗ್ಯವು ಬಾಹ್ಯ ಆರೈಕೆಯ ಮೇಲೆ ಮಾತ್ರವಲ್ಲದೆ ಆಹಾರದ ಮೇಲೂ ಅವಲಂಬಿತವಾಗಿರುತ್ತದೆ. ಪ್ರೋಟೀನ್, ವಿಟಮಿನ್‌ಗಳು, ಒಮೆಗಾ-3 ಕೊಬ್ಬಿನಾಮ್ಲಗಳು ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ ಮತ್ತು ಸಾಕಷ್ಟು ನೀರು ಕುಡಿಯಿರಿ.

ನಿಮ್ಮ ಕೂದಲನ್ನು ಅರ್ಗಾನ್ ಎಣ್ಣೆ, ತೆಂಗಿನ ಎಣ್ಣೆ ಅಥವಾ ಆಲಿವ್ ಎಣ್ಣೆಯಿಂದ ಲಘುವಾಗಿ ಮಸಾಜ್ ಮಾಡಿ. ಈ ನೈಸರ್ಗಿಕ ಎಣ್ಣೆಗಳು ನಿಮ್ಮ ಕೂದಲನ್ನು ಮೃದುವಾಗಿರಿಸುತ್ತವೆ ಮತ್ತು ಬೇರುಗಳನ್ನು ಬಲಪಡಿಸುತ್ತವೆ.

ಪ್ರತಿ ಬಾರಿ ಕೂದಲು ತೊಳೆದ ನಂತರ ಕಂಡೀಷನರ್ ಬಳಸಿ. ವಾರಕ್ಕೊಮ್ಮೆಯಾದರೂ ಡೀಪ್ ಕಂಡೀಷನಿಂಗ್ ಮಾಸ್ಕ್ ಅಥವಾ ಹೇರ್ ಸ್ಪಾ ಮಾಡಿ. ಇದು ಕೂದಲಿಗೆ ಪೋಷಣೆ ನೀಡುತ್ತದೆ ಮತ್ತು ಶುಷ್ಕತೆಯನ್ನು ಕಡಿಮೆ ಮಾಡುತ್ತದೆ.

ರಾಸಾಯನಿಕ ಚಿಕಿತ್ಸೆಗಳ ನಂತರ ಕೂದಲಿನ ತುದಿಗಳು ಸೀಳುವುದು ಮತ್ತು ಕೂದಲು ಒಡೆಯುವಿಕೆ ಹೆಚ್ಚಾಗಬಹುದು. ಆದ್ದರಿಂದ, ಪ್ರತಿ 6-8 ವಾರಗಳಿಗೊಮ್ಮೆ ನಿಮ್ಮ ಕೂದಲನ್ನು ಟ್ರಿಮ್ ಮಾಡುವುದು ಅವಶ್ಯಕ.

ನಿಮ್ಮ ಕೂದಲಿಗೆ ಬಣ್ಣ ಹಾಕುವ ಮೊದಲು ಅದರ ಆರೋಗ್ಯವನ್ನು ಪರೀಕ್ಷಿಸಲು ಮರೆಯದಿರಿ. ನಿಮ್ಮ ಕೂದಲು ತುಂಬಾ ಒಣಗಿದ್ದರೆ ಅಥವಾ ಹಾನಿಗೊಳಗಾಗಿದ್ದರೆ, ಮೊದಲು ಅದನ್ನು ಚಿಕಿತ್ಸೆ ಮಾಡಿಸಿ. ಹೀಗೆ ಡ್ರೈ ಹೇರ್‌ಗೆ ಬಣ್ಣ ಹಾಕುವುದರಿಂದ ಹೆಚ್ಚು ಬಾಳಿಕೆ ಬರುವುದಿಲ್ಲ ಮತ್ತು ಕೂದಲಿಗೆ ಹಾನಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇದಕ್ಕಾಗಿ, ನೀವು ವೃತ್ತಿಪರ ಕೇಶ ವಿನ್ಯಾಸಕರ ಸಹಾಯವನ್ನು ಪಡೆಯುವುದು ಉತ್ತಮ. ನಿಮ್ಮ ಕೂದಲಿನ ಸ್ಥಿತಿ ಮತ್ತು ವಿನ್ಯಾಸವನ್ನು ಗಣನೆಗೆ ತೆಗೆದುಕೊಂಡು ಅವರು ಅತ್ಯುತ್ತಮ ಬಣ್ಣ ಮತ್ತು ವಿಧಾನವನ್ನು ಶಿಫಾರಸು ಮಾಡುತ್ತಾರೆ

 

https://www.newsics.com/2025/08/06/sandalwood-queen-ramya-appears-in-a-new-avatar/

TAGGED:#Hair #color #tips #style #beauty
Share This Article
Facebook Twitter Copy Link Print
Previous Article Sandalwood Queen Ramya ಹೊಸ ಅವತಾರದಲ್ಲಿ ಕಾಣಿಸಿಕೊಂಡು ಕಾಣಿಸಿಕೊಂಡ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ
Next Article ಆಮ್ಲಜನಕ ಸ್ಥಾವರದಲ್ಲಿ ಸ್ಫೋಟ : ಇಬ್ಬರು ಸಾವು, ಹಲವರಿಗೆ ಗಾಯ

Popular Posts

Jammu Kashmir ಭೀಕರ ಉಗ್ರರ ದಾಳಿ; ಕರ್ತವ್ಯದಲ್ಲಿದ್ದ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಹುತಾತ್ಮ

1 Min Read

Jana Nayagan ‘ಜನ ನಾಯಗನ್’ ಪ್ರೀಮಿಯರ್ ಶೋಗೆ ಬೆಂಗಳೂರಲ್ಲಿ1000, ಹೊಸೂರಿನಲ್ಲಿ180

1 Min Read

Karnataka Drought Issue | ಎಲ್ ನಿನೋ ಎಚ್ಚರಿಕೆ: ಕರ್ನಾಟಕದಲ್ಲಿ ಮತ್ತೆ ಬರದ ಭೀತಿ? ರೈತರಿಗೆ ತಜ್ಞರ ಮಹತ್ವದ ಸಲಹೆ

2 Min Read

Shivajinagara Footpath Issue | ಶಿವಾಜಿನಗರ ಒತ್ತುವರಿ ತೆರವು ವೇಳೆ ಅಧಿಕಾರಿಗಳ ಮೇಲೆ ಹಲ್ಲೆ: ಬಂಧಿತರಿಂದ ಪೊಲೀಸರ ಮುಂದೆ ಕ್ಷಮೆಯಾಚನೆ

2 Min Read

You Might Also Like

ಪ್ರಮುಖಆರೋಗ್ಯಲೈಫ್‌ಸ್ಟೈಲ್

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read
ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read
ಆರೋಗ್ಯ

Are You Experiencing These Symptoms? ನಿಮಗೂ ಈ ಲಕ್ಷಣಗಳಿದೆಯಾ? ವಿಟಮಿನ್ D ಕೊರತೆಯಿರಬಹುದು!

2 Min Read
ಪ್ರಮುಖಆರೋಗ್ಯ

Health ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕರಗುತ್ತೆ ಅನ್ನೋದು ನಿಜನಾ? ವೈದ್ಯರು ಹೇಳುವ ಅಸಲಿ ಸತ್ಯ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?