newsics.com
ಇತ್ತೀಚಿಗೆ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಿತ್ಯಾ ಮೆನನ್, ನಾನು ಹೆಚ್ಚಾಗಿ ಒಂಟಿಯಾಗಿರುತ್ತೇನೆ. ಪ್ರತಿ ಬಾರಿ ಪ್ರೀತಿಯಲ್ಲಿ ಬಿದ್ದಾಗಲೂ ಹಾರ್ಟ್ ಬ್ರೇಕ್ ಆಗುತ್ತಿದೆ. ನನ್ನ ಸಂಗಾತಿಯೊಂದಿಗೆ ಸುಂದರವಾದ ಜೀವನವನ್ನು ನಡೆಸುವ ಕನಸು ನನಗಿತ್ತು.
ಆದರೆ ಅಂತಹ ವ್ಯಕ್ತಿಯನ್ನು ನಾನು ಎಂದಿಗೂ ಕಂಡುಕೊಳ್ಳಲು ಸಾಧ್ಯವಾಗಿಲ್ಲ.. ಒಳ್ಳೆಯ ಸಂಗಾತಿ ಸಿಕ್ಕರೆ ನಾಳೆಯೇ ಮದುವೆಯಾಗುತ್ತೇನೆ ಎಂದು ನಿತ್ಯಾ ಮೆನನ್ ಹೇಳಿದರು. ಜೋಶ್, ಮೈನಾ ಸೇರಿದಂತೆ ಹಲವಾರು ಹಿಟ್ ಸಿನಿಮಾಗಳಲ್ಲಿ ನಿತ್ಯಾ ಮೆನನ್ ನಟಿಸಿದ್ದಾರೆ.
ಪ್ರಸ್ತುತ ನಿತ್ಯಾ ಮೆನನ್ ವಿಜಯ್ ಸೇತುಪತಿ ಜೊತೆ ತಲೈವನ್ ತಲೈವಿ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರ ನಿನ್ನೆ ಬಿಡುಗಡೆಯಾಯಿತು. ಈ ಚಿತ್ರದ ಪ್ರಚಾರದಲ್ಲಿ ನಿತ್ಯಾ ಮೆನನ್ ಬ್ಯುಸಿಯಾಗಿದ್ದರು. ವಿವಿಧ ಯೂಟ್ಯೂಬ್ ಚಾನೆಲ್‌ಗಳಿಗೆ ಸಂದರ್ಶನಗಳನ್ನು ಸಹ ನೀಡಿದ್ದಾರೆ
ಅಷ್ಟೇ ಅಲ್ಲದೆ, ಕಳೆದ ಬಾರಿ ನಟಿ ಸುಹಾಸಿನಿ ಅವರು ನಡೆಸಿಕೊಡುವ ಸಂದರ್ಶನದಲ್ಲಿ.. ಯಾರಾದರೂ ಪಾತ್ರಕ್ಕಾಗಿ ನನ್ನ ದೇಹ ಮತ್ತು ಕೂದಲನ್ನು ಬದಲಾಯಿಸಲು ಕೇಳಿದರೆ, ನಾನು ಅಂತಹ ಸಿನಿಮಾದಲ್ಲಿ ನಟಿಸಲ್ಲ ಅಂತ ನೇರವಾಗಿ ಹೇಳುತ್ತೇನೆ ಎಂದು ತಿಳಿಸುವ ಮೂಲಕ ಅಚ್ಚರಿ ಮೂಡಿಸಿದ್ದರು.
ಅಲ್ಲದೆ, ನಾನು ಏನನ್ನೂ ಬದಲಾಯಿಸಲು ಬಯಸುವುದಿಲ್ಲ. ನೀವು ನನ್ನನ್ನು ನಾನು ಇದ್ದಂತೆ ಒಪ್ಪಿದರೆ, ನಾನು ನಟಿಸುತ್ತೇನೆ ಎಂದು ಹೇಳುತ್ತೇನೆ. ಮೊದಲು ತೆಲುಗು ಚಿತ್ರದಲ್ಲಿ ನಟಿಸಲು ಬಂದಾಗ, ಇತರ ಎಲ್ಲಾ ನಟಿಯರು ಎತ್ತರ ಮತ್ತು ಸುಂದರವಾಗಿದ್ದರು ಆದರೆ ನಾನು ಕುಳ್ಳಗಿದ್ದೆ..
ನಾನು ಆ ಚಿತ್ರದಲ್ಲಿ ನಟಿಸಿದ ನಂತರ, ಎಲ್ಲರೂ ಆತ್ಮವಿಶ್ವಾಸದಿಂದ ಕರ್ಲಿ ಹೇರ್ ಬಿಡಲು ಶುರುಮಾಡಿದರು. ಇಂದಿಗೂ, ಎಲ್ಲರೂ ಇದನ್ನು ಬಯಸುತ್ತಾರೆ. ನನ್ನ ಬಳಿಗೆ ಕಥೆ ಹೇಳಲು ಬರುವವರು, ಒಂದು ವೇಳೆ ನಾನು ಅದನ್ನು ಇಷ್ಟಪಡದಿದ್ದರೆ ತಕ್ಷಣ, ಅವರು ನನ್ನನ್ನು ಕುಳ್ಳಿ ಮತ್ತು ಈ ಕಥೆಗಳಿಗೆ ಸೂಕ್ತವಲ್ಲ ಎಂದು ಟೀಕಿಸುತ್ತಾರೆ ಎಂದು ಅಸಮಾಧಾನ ತೋಡಿಕೊಂಡರು.
ಇನ್ನು ವೈಯಕ್ತಿ ಜೀವನದ ವಿಚಾರವಾಗಿ ಮಾತನಾಡುತ್ತ, ಒಂಟಿಯಾಗಿ ಪ್ರಯಾಣಿಸುವುದು ನಿಜವಾದ ಸ್ವಾತಂತ್ರ್ಯವನ್ನು ನೀಡುತ್ತದೆ. ಅಂತಹ ಆತ್ಮ ಸಂಗಾತಿಯನ್ನು ಕಂಡುಕೊಂಡರೆ, ನಾನು ನಾಳೆಯೇ ಮದುವೆಯಾಗುತ್ತೇನೆ. ಮದುವೆ ನಡೆದರೆ, ನಾನು ಸಂತೋಷವಾಗಿರುತ್ತೇನೆ! ಇಲ್ಲದಿದ್ದರೆ, ನಾನು ಇನ್ನೂ ಸಂತೋಷವಾಗಿರುತ್ತೇನೆ! ರತನ್ ಟಾಟಾ ಕೂಡ ಮದುವೆಯಾಗಿಲ್ಲ,” ಎಂದು ನಿತ್ಯಾ ಹೇಳಿದರು