Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಜ್ಯೋತಿಷ್ಯ > ASTRO ಇಂದು ಮಾಲವ್ಯ ರಾಜಯೋಗ, ಹರ್ಷ ಯೋಗ: ಈ ರಾಶಿಗಳ ಜನರಿಗೆ ಆರ್ಥಿಕ ಸಮೃದ್ಧಿ
ಜ್ಯೋತಿಷ್ಯದಿನ ಭವಿಷ್ಯಪಂಚಾಂಗಪ್ರಮುಖ

ASTRO ಇಂದು ಮಾಲವ್ಯ ರಾಜಯೋಗ, ಹರ್ಷ ಯೋಗ: ಈ ರಾಶಿಗಳ ಜನರಿಗೆ ಆರ್ಥಿಕ ಸಮೃದ್ಧಿ

Share
4 Min Read
SHARE

newsics.com

ಇಂದು ಜುಲೈ 23, ಬುಧವಾರ. ಮಾಲವ್ಯ ರಾಜಯೋಗ, ಹರ್ಷ ಯೋಗದ ಜತೆ ಹಲವು ಶುಭ ಯೋಗಗಳು ರೂಪುಗೊಂಡಿದ್ದು, ಇದರಿಂದ ಈ ದಿನದ ಮಹತ್ವ ಇನ್ನಷ್ಟು ಹೆಚ್ಚಾಗಿದೆ. ಕೆಲವು ರಾಶಿಗಳ ಜನರು ಈ ಶುಭ ಯೋಗಗಳ ಲಾಭ ಪಡೆಯಲಿದ್ದಾರೆ. ಈ ರಾಶಿಯವರ ಕೆಲಸ ಮತ್ತು ವ್ಯಾಪಾರದಲ್ಲಿ ವೃದ್ಧಿಯೊಂದಿಗೆ ನಿಮ್ಮ ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ.

ಮೇಷ ರಾಶಿಗೆ ಸೇರಿದ ಜನರಿಗೆ ಈ ದಿನ ಉತ್ತಮವಾಗಿರುವುದು. ಶಿವ ಮತ್ತು ಗಣೇಶನ ಕೃಪೆಯಿಂದ ಮೇಷ ರಾಶಿಗೆ ಸೇರಿದ ಜನರು ತಾವಂದುಕೊಂಡ ಲಾಭ ಪಡೆಯುವ ಅವಕಾಶ ದೊರಕುವುದು. ವೃತ್ತಿಗೆ ಸಂಬಂಧಿಸಿದಂತೆ ನಿಮಗೆ ಸಾಹಸಮಯವಾದ ನಿರ್ಧಾರದಿಂದ ಹೆಚ್ಚಿನ ಪ್ರಯೋಜನವಾಗಲಿದೆ. ನೀವು ಧೈರ್ಯದಿಂದ ಉತ್ತಮ ನಿರ್ಧಾರ ತೆಗೆದುಕೊಳ್ಳುವಿರಿ. ಮುಂದಿನ ದಿನಗಳಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುವಿರಿ. ನಿಮ್ಮ ಸಹೋದ್ಯೋಗಿಗಳ ಸಂಪೂರ್ಣ ಬೆಂಬಲ ದೊರಕುವುದು. ಮಾಧ್ಯಮ, ಲೇಖನ, ಶೋಧ, ಓದು, ಬರಹ, ಕಮ್ಯುನಿಕೇಷನ್ ಇತ್ಯಾದಿಗೆ ಸಂಬಂಧಿಸಿದ ಕೆಲಸ ಮಾಡುವ ಜನರಿಗೆ ಹೆಚ್ಚಿನ ಲಾಭದಾಯಕವಾಗಿರುವುದು. ಕೆಲಸಕ್ಕೆ ಸಂಬಂಧಿಸಿದಂತೆ ನಿಮಗೆ ಅಲ್ಪ ದೂರ ಪ್ರಯಾಣಿಸುವ ಯೋಗವಿದೆ. ಈ ಪ್ರಯಾಣದಿಂದ ನಿಮಗೆ ಹೆಚ್ಚಿನ ಪ್ರಯೋಜನವಾಗುವುದರೊಂದಿಗೆ ನೀವಂದುಕೊಂಡ ಫಲಿತಾಂಶ ಪಡೆಯುವಿರಿ. ಮನೆಯಲ್ಲಿ ಸುಖ, ಶಾಂತಿ ನೆಲೆಸುವುದು. ನಿಮಗೆ ನಿಮ್ಮ ಕಿರಿಯ ಸಹೋದರ, ಸಹೋದರಿಯರ ಸಂಪೂರ್ಣ ಬೆಂಬಲ ದೊರಕಲಿದೆ. ಅಲ್ಲದೆ, ನಿಮ್ಮ ಸಂಗಾತಿಯ ಸಂಪೂರ್ಣ ಸ್ನೇಹ ಲಭಿಸುವುದು. ನಿಮ್ಮ ನಡುವಿನ ಸಂಬಂಧ ಸಂತೋಷದಿಂದ ಕೂಡಿರಲಿದೆ.

ಕಟಕ ರಾಶಿಗೆ ಸೇರಿದ ಜನರಿಗೆ ಬುಧವಾರ ವಿದೇಶದಿಂದ ಲಾಭ ದೊರಕುವುದು. ವಿಶೇಷವಾಗಿ ಹಣಕಾಸಿಗೆ ಸಂಬಂಧಿಸಿದ ಕೆಲಸ ಮಾಡುವ ಜನರಿಗೆ ಹೆಚ್ಚಿನ ಲಾಭ ದೊರಕುವ ಅವಕಾಶವಿದೆ. ಇದರಿಂದ ಮನಸ್ಸು ಸಂತೋಷದಿಂದಿರುವುದು ಮತ್ತು ವ್ಯಾಪಾರಕ್ಕೆ ಸಂಬಂಧಿಸಿದಂತೆ ವಿದೇಶಕ್ಕೆ ತೆರಳಬೇಕೆಂದು ಪ್ರಯತ್ನಪಡುತ್ತಿರುವವರಿಗೆ ಶುಭ ಸುದ್ದಿ ಲಭಿಸಲಿದೆ. ಆಸ್ಪತ್ರೆ, ಮೆಡಿಕಲ್ ಸ್ಟೋರ್, ಲ್ಯಾಬ್ ಇತ್ಯಾದಿಗಳಿಗೆ ಸಂಬಂಧಿಸಿದ ಕೆಲಸ ಮಾಡುವ ಜನರಿಗೆ ಹೆಚ್ಚಿನ ಲಾಭ ದೊರಕಲಿದೆ. ನ್ಯಾಯಾಲಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಹೊಂದುವಿರಿ. ಉದ್ಯೋಗ ಮಾಡುವ ಜನರಿಗೆ ನಿಮ್ಮ ಪ್ರಯತ್ನಕ್ಕೆ ತಕ್ಕಂತೆ ಪ್ರತಿಫಲ ದೊರಕುವುದರೊಂದಿಗೆ ಸಾಕಷ್ಟು ಲಾಭ ಗಳಿಸುವಿರಿ. ನಿಮ್ಮ ಸುಖ, ಸಮೃದ್ಧಿಗಾಗಿ ಹಣ ಖರ್ಚು ಮಾಡುವಿರಿ. ದಾನ ಧರ್ಮ ಕೆಲಸಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದುವಿರಿ. ಮನೆಯಲ್ಲಿ ಸಂತೋಷಮಯವಾದ ವಾತಾವರಣ ಇರುವುದು. ನಿಮ್ಮ ಸಂಗಾತಿ ನಿಮ್ಮ ಮಾತು ಅರ್ಥಮಾಡಿಕೊಳ್ಳುವರು.

ಸಿಂಹ ರಾಶಿಗೆ ಸೇರಿದ ಜನರಿಗೆ ಈ ದಿನ ಮಂಗಳದಾಯಕವಾಗಿರುವುದು. ಧನ ಪ್ರಾಪ್ತಿಗಾಗಿ ಹೊಸ ಅವಕಾಶಗಳನ್ನು ಪಡೆಯುವುದರೊಂದಿಗೆ ನಿಮ್ಮ ಆದಾಯದಲ್ಲಿ ಸಾಕಷ್ಟು ಹೆಚ್ಚಳವಾಗುವ ಯೋಗವಿದೆ. ನಿಮಗೆ ಹಿರಿಯ ಸಹೋದರ, ಸಹೋದರಿಯರ ಸಂಪೂರ್ಣ ಬೆಂಬಲ ದೊರಕುವುದು. ಹಳೆಯ ಆಸೆಗಳು ಈಡೇರುವ ಯೋಗವಿದೆ. ಇದರಿಂದಾಗಿ ಮನಸ್ಸು ಸಂತೋಷದಿಂದಿರುವುದು. ನಿಮ್ಮ ಸುಖ, ಸಮೃದ್ಧಿಗಾಗಿ ಹಣ ಖರ್ಚು ಮಾಡುವಿರಿ. ನಿಮ್ಮ ಸಾಮಾಜಿಕ ಸಂಪರ್ಕಗಳನ್ನು ವಿಸ್ತರಿಸುವಿರಿ. ರಾಜಕೀಯ ಮತ್ತು ಸಮಾಜ ಸೇವೆಗೆ ಸಂಬಂಧಿಸಿದ ಜನರಿಗೆ ಬುಧವಾರ ಉತ್ತಮ ದಿನವಾಗಿರುವುದು. ನಿಮ್ಮ ಗೌರವ, ಖ್ಯಾತಿ ಹೆಚ್ಚಾಗಲಿದೆ. ಉದ್ಯೋಗ ಮಾಡುವ ಜನರು ಫ್ರೀಲ್ಯಾನ್ಸಿಂಗ್ ಅಥವಾ ಇನ್ನಿತರೆ ಅವಕಾಶ ಪಡೆಯುವ ಸಾಧ್ಯತೆಯಿದೆ. ಇದರಿಂದ ನಿಮ್ಮ ಆದಾಯದಲ್ಲಿ ಹೆಚ್ಚಳವಾಗಲಿದೆ. ಮನೆಯಲ್ಲಿ ಸುಖ, ಸಮೃದ್ಧಿ ನೆಲೆಸುವುದು. ನಿಮ್ಮ ಸಂಗಾತಿ ನಿಮಗೆ ಭಾವನಾತ್ಮಕವಾಗಿ ಮತ್ತು ಆರ್ಥಿಕವಾಗಿ ಹೆಚ್ಚಿನ ಸಹಾಯ ಮಾಡುವುದರಿಂದ ಲಾಭ ಗಳಿಸುವಿರಿ. ಮಕ್ಕಳಿಂದ ನಿಮಗೆ ಶುಭ ಸುದ್ದಿ ಲಭಿಸುವುದು.

ಇಂದಿನ ದಿನ ಬುಧವಾರ ಧನುಸ್ಸು ರಾಶಿಗೆ ಸೇರಿದ ಜನರಿಗೆ ಶುಭ ದಿನವಾಗಿರಲಿದೆ. ವ್ಯಾಪಾರ ಮಾಡುವ ಜನರಿಗೆ ಸಹೋದ್ಯೋಗಿಗಳ ಸಂಪೂರ್ಣ ಬೆಂಬಲದೊಂದಿಗೆ ನೀವು ನಿಮ್ಮ ನಿರ್ಧಾರಗಳಿಗೆ ಬದ್ಧರಾಗಿರುವಿರಿ ಹೊಸ ಕೆಲಸ ಶುರು ಮಾಡಬೇಕೆಂದು ಯೋಚಿಸುವವರಿಗೆ ಉತ್ತಮ ದಿನವಾಗಿರುವುದು. ನೀವು ಹೂಡಿಕೆ ಮಾಡಬೇಕೆಂದು ಮನಸ್ಸು ಮಾಡುವಿರಿ. ಹಾಗೆ ಪಾಲುದಾರಿಕೆಯಲ್ಲಿ ಹೂಡಿಕೆ ಮಾಡುವುದರಿಂದ ಹೆಚ್ಚಿನ ಪ್ರಯೋಜನವಾಗಲಿದೆ. ಕೆಲಸ ಮಾಡುವುದರಿಂದ ಸಾಕಷ್ಟು ಲಾಭ ದೊರಕುವುದು. ವ್ಯಾಪಾರ ಮಾಡುವ ಜನರಿಗೆ ಉತ್ತಮ ಅವಕಾಶ ದೊರಕುವುದು. ಪಾಲುದಾರಿಕೆಯಲ್ಲಿ ಕೆಲಸ ಮಾಡುವುದರಿಂದ ನಿಮ್ಮ ಸಂಬಂಧ ಬಲಗೊಳ್ಳುವುದು. ನಿಮ್ಮ ಸಂಗಾತಿಯ ಅದೃಷ್ಟದಿಂದಾಗಿ ನೀವು ಹೆಚ್ಚಿನ ಲಾಭ ಪಡೆಯುವಿರಿ. ಮನೆಯವರ ಸಂಪೂರ್ಣ ಬೆಂಬಲ ಮತ್ತು ಸ್ನೇಹ ದೊರಕುವುದು. ವಿಶೇಷವಾಗಿ ನಿಮ್ಮ ಸಂಗಾತಿಯೊಂದಿಗಿನ ಮನಸ್ತಾಪಗಳೆಲ್ಲಾ ದೂರವಾಗಲಿದೆ. ನಿಮ್ಮ ಸಂಬಂಧ ಮೊದಲಿಗಿಂತ ಉತ್ತಮವಾಗಿರುವುದು. ಪ್ರೇಮ ಸಂಬಂಧಕ್ಕೆ ಸಂಬಂಧಿಸಿದಂತೆ ಬುಧವಾರ(ಜು.23) ಅನುಕೂಲಕರ ದಿನವಾಗಿರಲಿದೆ. ನಿಮ್ಮ ಸಂಗಾತಿಯೊಂದಿಗೆ ಹೊರಗೆ ಸುತ್ತಾಡಲು ತೆರಳುವ ಬಗ್ಗೆ ಯೋಜನೆ ರೂಪಿಸುವಿರಿ.

ಮೀನ ರಾಶಿಗೆ ಸೇರಿದ ಜನರಿಗೆ ಇಂದು ಬುಧವಾರ ಉತ್ತಮ ದಿನವಾಗಿರುವುದು. ನಿಮ್ಮ ಮನೆಯವರು ನಿಮ್ಮೊಂದಿಗೆ ಪ್ರತಿ ಹೆಜ್ಜೆಯಲ್ಲೂ ಒಟ್ಟಾಗಿ ನಿಲ್ಲುವರು. ಕುಟುಂಬ ವ್ಯವಹಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಲಾಭ ಪಡೆಯುವ ಅವಕಾಶವಿದೆ. ನಿಮ್ಮ ಹತ್ತಿರದ ಸಂಬಂಧಿಕರೊಂದಿಗೆ ವಿಶೇಷವಾಗಿ ತಾಯಿಗೆ ಸಂಬಂಧಿಸಿದವರಿಂದ ಹೆಚ್ಚಿನ ಲಾಭ ದೊರಕುವುದು. ರಿಯಲ್ ಎಸ್ಟೇಟ್, ಆಸ್ತಿ, ಟ್ರಾನ್ಸ್ಪೋರ್ಟ್ ಇತ್ಯಾದಿ ವ್ಯಾಪಾರಿಗಳಿಗೆ ಲಾಭದಾಯಕವಾದ ದಿನವಾಗಿರುವುದು. ನಿಮ್ಮ ಯೋಜನೆಗಳಿಗೆ ಉತ್ತಮ ಫಲ ಪಡೆಯುವಿರಿ. ಇದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವುದು. ಮಾನಸಿಕವಾಗಿ ನೀವು ಬಲವಾದ ಸಂಬಂಧ ಹೊಂದುವಿರಿ. ಕೆಲಸ ಹುಡುಕುತ್ತಿರುವ ಈ ರಾಶಿಯವರಿಗೆ ಉತ್ತಮ ಅವಕಾಶಗಳು ದೊರಕುವವು. ಮನೆಯಲ್ಲಿ ತಾಯಿಯ ಸಂಪೂರ್ಣ ಬೆಂಬಲ ದೊರಕುವುದು. ನಿಮಗೆ ನಿಮ್ಮ ತಂದೆ ತಾಯಿಯೊಂದಿಗೆ ತೀರ್ಥಯಾತ್ರೆಗೆ ತೆರಳುವ ಬಗ್ಗೆ ಯೋಜನೆ ರೂಪಿಸುವ ಅವಕಾಶ ದೊರಕುವುದು. ನಿಮ್ಮ ವೈವಾಹಿಕ ಜೀವನ ಸಂತೋಷದಿಂದ ಕೂಡಿರಲಿದೆ.

Today’s prediction ಇಂದಿನ ರಾಶಿ ಭವಿಷ್ಯ, 23-07-2025, ಬುಧವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

TAGGED:Harsha Yoga: Financial prosperity for people of these zodiac signsToday is Malavya Raja Yoga
Share This Article
Facebook Twitter Copy Link Print
Previous Article ಆರೇ ತಿಂಗಳಲ್ಲಿ ರಾಜ್ಯದ 2.3 ಲಕ್ಷ ಜನರಿಗೆ ನಾಯಿ ಕಡಿತ!; 54 ಜನ ರೇಬಿಸ್‌ಗೆ ಬಲಿ : ಕೇಂದ್ರದಿಂದ ಮಾಹಿತಿ
Next Article Lokayukta Raid ಬೆಂಗಳೂರು ಸೇರಿ ರಾಜ್ಯದ ಹಲವು ಕಡೆ ಲೋಕಾಯುಕ್ತ ದಾಳಿ

Popular Posts

Fast Track Court For Exam Paper Leak | ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳಿಗೆ ಫಾಸ್ಟ್ ಟ್ರ್ಯಾಕ್ ಕೋರ್ಟ್: ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ

1 Min Read

Gokarn Temple New Rules | ಗೋಕರ್ಣ ಮಹಾಗಣಪತಿ ದೇವಸ್ಥಾನದಲ್ಲಿ ಇನ್ಮುಂದೆ ಸ್ಪರ್ಶ ದರ್ಶನ ಇಲ್ಲ; ಭಕ್ತರಿಗೆ ಹೊಸ ನಿಯಮ

1 Min Read

Daily Horoscope ಇಂದಿನ ದಿನ ಭವಿಷ್ಯ – 23 ಜುಲೈ 2026

2 Min Read

Commonwealth Bharatanatyam ಕಾಮನ್‌ವೆಲ್ತ್ ಉದ್ಘಾಟನಾ ಸಮಾರಂಭದಲ್ಲಿಂದು ಕಲಬುರಗಿ ಯುವತಿಯ ಭರತನಾಟ್ಯ!

1 Min Read

You Might Also Like

ಮನರಂಜನೆಕರ್ನಾಟಕದೇಶಪ್ರಮುಖ

CM Vijay’s Last Film ಬೆಂಗಳೂರಿನಲ್ಲೂ ‘ಜನ ನಾಯಗನ್’ ಜ್ವರ: ವಿಜಯ್ ಕೊನೆಯ ಸಿನಿಮಾಗೆ ಅಭಿಮಾನಿಗಳ ಅದ್ಧೂರಿ ಸ್ವಾಗತ

2 Min Read
ಕರ್ನಾಟಕದೇಶಪ್ರಮುಖ

Channamma samadhi ರಾಜಘಾಟ್ ಮಾದರಿಯಲ್ಲಿ ಚನ್ನಮ್ಮ ಸಮಾಧಿ: 300 ಕೋಟಿ‌ ವೆಚ್ಚದ ಯೋಜನೆ

3 Min Read
ಕರ್ನಾಟಕದೇಶಪ್ರಮುಖ

Price hike shock ಜನರಿಗೆ ಮತ್ತೆ ಬೆಲೆ ಏರಿಕೆಯ ಶಾಕ್: ಮತ್ತೆ ದುಬಾರಿಯಾಯ್ತು ಅಡುಗೆ ಎಣ್ಣೆ, ಕಂಗಾಲಾದ ಮಧ್ಯಮ ವರ್ಗ

1 Min Read
ಕರ್ನಾಟಕಪ್ರಮುಖ

Fake PhD Certificates ಸರ್ಕಾರಿ ಪದವಿ ಕಾಲೇಜುಗಳಲ್ಲಿ 249 ಅತಿಥಿ ಉಪನ್ಯಾಸಕರಿಂದ ನಕಲಿ ಪಿಎಚ್‌.ಡಿ ಪ್ರಮಾಣಪತ್ರ ಸಲ್ಲಿಕೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?