newsics.com
ಆನೆಯ ಒಂದೇ ಒಂದು ಕಿಕ್‌ಗೆ ಮೊಸಳೆ ಕೆಸರು ನೀರಿನಿಂದ ಓಡಿ ಹೋಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಕಾಡಿನ ಮಧ್ಯೆ ಮಳೆ ನೀರು ನಿಂತ ಸಣ್ಣ ಕೃತಕ ಕೆರೆಯಂತಹ ಜಾಗಕ್ಕೆ ಆನೆಯೊಂದು ತನ್ನ ಮರಿಯ ಜತೆ ಬಂದಿದೆ. ತಾಯಿಯ ಜತೆ ಬಂದ ಮರಿ ಆನೆ ನೀರು ಕಂಡಂತೆ ಪುಟ್ಟ ಮಕ್ಕಳಂತೆ ನೀರಿನ ಮೇಲೆ ಬಿದ್ದುಕೊಂಡಿದೆ.
ಅಷ್ಟರಲ್ಲಿ ತಾಯಿ ಆನೆಗೆ ಕೆಸರಿನ ನೀರಿನೊಳಗೆ ದೊಡ್ಡ ಗಾತ್ರದ ಮೊಸಳೆ ಇರುವುದು ಗಮನಕ್ಕೆ ಬಂದಿದ್ದು, ಮರಿಯೂ ಜತೆಗಿರುವುದರಿಂದ ಅಪಾಯವರಿತ ಆನೆ ಕೂಡಲೇ ಆ ಹೊಂಡದಲ್ಲಿದ್ದ ಮೊಸಳೆಯನ್ನು ಕಾಲಿನಿಂದ ಒದ್ದಿದೆ. ಆನೆಯ ಒಂದೇ ಒಂದು ಕಿಕ್‌ಗೆ ಮೊಸಳೆ ಕೆಸರು ನೀರಿನಿಂದ ಎದ್ದು, ಮೆಲ್ಲನೆ ಮೇಲೆ ಹತ್ತಿ ದಡಕ್ಕೆ ಓಡುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
The Wild Savior ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಮಾಡಿದ್ದಾರೆ. ದಕ್ಷಿಣ ಆಫ್ರಿಕಾದ ಕ್ರುಗರ್ ರಾಷ್ಟ್ರೀಯ ಉದ್ಯಾನವನದಲ್ಲಿ ಸೆರೆ ಆದ ದೃಶ್ಯ ಇದಾಗಿದೆ.