ಬೀದರ್ ಗುರುದ್ವಾರದಲ್ಲಿ ಬಾಂಬ್ ಸ್ಫೋಟ ಬೆದರಿಕೆ: ಆತಂಕ ಸೃಷ್ಟಿಸಿದ ಮೇಲ್

newsics.com ಬೀದರ್: ಬೀದರ್ ನ ಗುರುದ್ವಾರ ನಾನಕ ಝರಾದಲ್ಲಿ ಸರಣಿ ಬಾಂಬ್ ಸ್ಫೋಟ ಮಾಡುವುದಾಗಿ ಇ-ಮೇಲ್ ಪತ್ರ ಬಂದಿದ್ದು, ಕೆಲಕಾಲ ಆತಂಕ ಸೃಷ್ಟಿಸಿತು. ಇಲ್ಲಿನ ಗುರುದ್ವಾರ ಪ್ರಮುಖ ಮಂದಿರ, ಯಾತ್ರಿ‌ ನಿವಾಸ, ಅಮೃತ ಕುಂಡ ಇತರೆಡೆ ಐಇಡಿಯನ್ನು ಬಳಸಿ ಶುಕ್ರವಾರ ಸ್ಫೋಟ ಮಾಡುವುದಾಗಿ ಗುರುದ್ವಾರ ಮಂಡಳಿಗೆ ಗುರುವಾರ ರಾತ್ರಿ ಬೆದರಿಕೆ ಮೇಲ್ ಬಂದಿದೆ. ವಕೀಲ ಅಲೀಂ ಅಲ್ ಬುಹಾರಿ ಎಂಬ ವ್ಯಕ್ತಿ ಮೇಲ್ ರವಾನಿಸಿದ್ದಾನೆ. ಪಾಕಿಸ್ತಾನದ ಐಎಸ್ ಐ ನೆರವಿನಿಂದ ಸ್ಫೋಟದ ಸಂಚು ರೂಪಿಸಿರುವ ಬಗ್ಗೆಯೂ ತಿಳಿಸಿದ್ದಾನೆ. … Continue reading ಬೀದರ್ ಗುರುದ್ವಾರದಲ್ಲಿ ಬಾಂಬ್ ಸ್ಫೋಟ ಬೆದರಿಕೆ: ಆತಂಕ ಸೃಷ್ಟಿಸಿದ ಮೇಲ್