Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಬೀದರ್ ಗುರುದ್ವಾರದಲ್ಲಿ ಬಾಂಬ್ ಸ್ಫೋಟ ಬೆದರಿಕೆ: ಆತಂಕ ಸೃಷ್ಟಿಸಿದ ಮೇಲ್
ಕರ್ನಾಟಕಪ್ರಮುಖ

ಬೀದರ್ ಗುರುದ್ವಾರದಲ್ಲಿ ಬಾಂಬ್ ಸ್ಫೋಟ ಬೆದರಿಕೆ: ಆತಂಕ ಸೃಷ್ಟಿಸಿದ ಮೇಲ್

Share
2 Min Read
SHARE

newsics.com

ಬೀದರ್: ಬೀದರ್ ನ ಗುರುದ್ವಾರ ನಾನಕ ಝರಾದಲ್ಲಿ ಸರಣಿ ಬಾಂಬ್ ಸ್ಫೋಟ ಮಾಡುವುದಾಗಿ ಇ-ಮೇಲ್ ಪತ್ರ ಬಂದಿದ್ದು, ಕೆಲಕಾಲ ಆತಂಕ ಸೃಷ್ಟಿಸಿತು.

ಇಲ್ಲಿನ ಗುರುದ್ವಾರ ಪ್ರಮುಖ ಮಂದಿರ, ಯಾತ್ರಿ‌ ನಿವಾಸ, ಅಮೃತ ಕುಂಡ ಇತರೆಡೆ ಐಇಡಿಯನ್ನು ಬಳಸಿ ಶುಕ್ರವಾರ ಸ್ಫೋಟ ಮಾಡುವುದಾಗಿ ಗುರುದ್ವಾರ ಮಂಡಳಿಗೆ ಗುರುವಾರ ರಾತ್ರಿ ಬೆದರಿಕೆ ಮೇಲ್ ಬಂದಿದೆ. ವಕೀಲ ಅಲೀಂ ಅಲ್ ಬುಹಾರಿ ಎಂಬ ವ್ಯಕ್ತಿ ಮೇಲ್ ರವಾನಿಸಿದ್ದಾನೆ. ಪಾಕಿಸ್ತಾನದ ಐಎಸ್ ಐ ನೆರವಿನಿಂದ ಸ್ಫೋಟದ ಸಂಚು ರೂಪಿಸಿರುವ ಬಗ್ಗೆಯೂ ತಿಳಿಸಿದ್ದಾನೆ. ಮೇಲ್ ಸ್ವೀಕರಿಸಿದ ಬಳಿಕ ಗುರುದ್ವಾರ ಆಡಳಿತ ಮಂಡಳಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದೆ. ತಕ್ಷಣ ಕಾರ್ಯಪ್ರವತ್ತ ಪೊಲೀಸ್ ತಂಡ ಗುರುದ್ವಾರಕ್ಕೆ ದೌಡಾಯಿಸಿ ತಪಾಸಣೆ ನಡೆಸಿದೆ.

ಗುರುದ್ವಾರ ಪರಿಸರದಲ್ಲಿ ಯಾವುದೇ ಸ್ಫೋಟಕವಿಲ್ಲ.‌ ಮೇಲ್‌ ಮುಖಾಂತರ ಹುಸಿ ಬೆದರಿಕೆ ಹಾಕಿ ಆತಂಕ ಸೃಷ್ಟಿಸುವ ಕೆಲಸ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿದೆ.

ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ
ಬಾಂಬ್ ನಿಷ್ಕ್ರಿಯ ದಳ, ಡಾಗ್ ಸ್ಕಾಡ್ ಸೇರಿ ವಿಶೇಷ ತಂಡದ ಐವತ್ತಕ್ಕೂ ಹೆಚ್ಚು ಸಿಬ್ಬಂದಿಗಳು
ಗುರುದ್ವಾರದಲ್ಲಿ ಸುದೀರ್ಘ ಕಾಲ ಪರಿಶೀಲನೆ ನಡೆಸಿದರು. ಪರಿಶೀಲನೆ ವೇಳೆ ಇಲ್ಲಿ ಯಾವುದೇ ತರಹದ ಸ್ಫೋಟಕ ವಸ್ತು ಪತ್ತೆಯಾಗಿಲ್ಲ. ಸಾದಿಕ್ ಕಳಿಸಿದ ಮೇಲ್ ನಲ್ಲಿ ತಮಿಳುನಾಡಿನಲ್ಲಿ‌ ಇತ್ತೀಚೆಗೆ ಬಂಧಿತನಾದ ಡ್ರಗ್ಸ್ ಸ್ಮಗ್ಲರ್ ಜಾಫರ್ ಸಾದಿಕ್, ಕೃತಿಗಾ ಉದಯನಿಧಿ ಹೆಸರು ಸಹ ಉಲ್ಲೇಖವಾಗಿದೆ. ಇವರ ಪ್ರಕರಣದ ಗಮನ ಬೇರೆಡೆ ಸೆಳೆಯಲು ಗುರುದ್ವಾರ ಬ್ಲಾಸ್ಟ್ ಸಂಚು ಹೆಣೆಯಲಾಗಿದೆ. ಭಕ್ತರ ಮೈಕ್ರೋ ಮೊಬೈಲ್ ಫೋನ್ ಸಿಗ್ನಲ್ ಬಳಸಿ ಶುಕ್ರವಾರ ಸ್ಫೋಟ ನಡೆಸಲು ಸಿದ್ಧತೆ ಮಾಡಲಾಗಿದೆ ಎಂದು ಬೆದರಿಕೆ ಹಾಕಲಾಗಿತ್ತು.

ಬಾಂಬ್ ಬ್ಲಾಸ್ಟ್ ಬೆದರಿಕೆ ಮೇಲ್ ಬಂದ ಸುದ್ದಿಯಿಂದಾಗಿ ಗುರುನಾನಕನಲ್ಲಿ ಒಂದಿಷ್ಟು ಆತಂಕ ಸೃಷ್ಟಿಯಾಗಿತ್ತು. ಭಕ್ತರು ಸಹ ಗೊಂದಲಕ್ಕೆ ಸಿಲುಕಿದ್ದರು. ಆದರೆ ಸಮಗ್ರ ತಪಾಸಣೆ ಬಳಿಕ ಇದೊಂದು ಪಕ್ಕಾ ಹುಸಿ ಕರೆ ಎಂಬುದು ಸ್ಪಷ್ಟವಾಗಿದೆ. ಆದಾಗ್ಯೂ ಪೊಲೀಸರು ಮೇಲ್ ಸಂಬಂಧ ತನಿಖೆ ಕೈಗೊಂಡಿದ್ದಾರೆ.

ಬಾಂಬ್ ಬೆದರಿಕೆ ಮೇಲ್ ಬಂದ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಯಿತು.‌ ಸಮಗ್ರ ಪರಿಶೀಲನೆ ಬಳಿಕ ಇದೊಂದು ಹುಸಿ ಮೇಲ್ ಎಂಬುದು ಖಚಿತವಾಗಿದೆ. ಭಕ್ತರು, ಪ್ರವಾಸಿಗರು ಆತಂಕಪಡುವ ಅಗತ್ಯವಿಲ್ಲ. ನಿರ್ಭಿತಿಯಿಂದ ಎಂದಿನಂತೆ ಗುರುದ್ವಾರಕ್ಕೆ ಆಗಮಿಸಬೇಕು. ಗುರುದ್ವಾರದಲ್ಲಿ ನಿತ್ಯದ ಚಟುವಟಿಕೆಗಳು ಯಥಾವತ್ತಾಗಿ ನಡೆದಿವೆ ಎಂದು ಗುರುದ್ವಾರ ನಾನಕ ಝರಾ ಸಮಿತಿ ಅಧ್ಯಕ್ಷ ಸರ್ದಾರ್ ಬಲಬೀರಸಿಂಗ್ ತಿಳಿಸಿದ್ದಾರೆ.

ಅತ್ಯಾಚಾರ ಕೇಸ್: ಜು.30ಕ್ಕೆ ಪ್ರಜ್ವಲ್ ರೇವಣ್ಣ ಭವಿಷ್ಯ ನಿರ್ಧಾರ

TAGGED:Bomb blast threat at Bidar Gurudwara: Mail creates panic
Share This Article
Facebook Twitter Copy Link Print
Previous Article ಅತ್ಯಾಚಾರ ಕೇಸ್: ಜು.30ಕ್ಕೆ ಪ್ರಜ್ವಲ್ ರೇವಣ್ಣ ಭವಿಷ್ಯ ನಿರ್ಧಾರ
Next Article Basavajaya Mrutyunjaya Swamiji: ಎದೆ ನೋವು; ಬಸವಜಯ ಮೃತ್ಯುಂಜಯ ಶ್ರೀಗಳ ಆರೋಗ್ಯದಲ್ಲಿ ಏರುಪೇರು

Popular Posts

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read

You Might Also Like

ಕರ್ನಾಟಕಜ್ಯೋತಿಷ್ಯದಿನ ಭವಿಷ್ಯ

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read
ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read
ಪ್ರಮುಖಕರ್ನಾಟಕ

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?