Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Piles Treatment ಮೂಲವ್ಯಾಧಿ ಸಮಸ್ಯೆ ಕಾಡುತ್ತಿದೆಯೇ? ಹಾಗಾದರೆ ಮಜ್ಜಿಗೆ ಜತೆ ಇದನ್ನು ಸೇರಿಸಿ ಕುಡಿದ್ರೆ ಸಾಕು
ಆರೋಗ್ಯ

Piles Treatment ಮೂಲವ್ಯಾಧಿ ಸಮಸ್ಯೆ ಕಾಡುತ್ತಿದೆಯೇ? ಹಾಗಾದರೆ ಮಜ್ಜಿಗೆ ಜತೆ ಇದನ್ನು ಸೇರಿಸಿ ಕುಡಿದ್ರೆ ಸಾಕು

Share
2 Min Read
SHARE

newsics.com

ಆರೋಗ್ಯ ಸಮಸ್ಯೆಗಳಲ್ಲಿ ಮೂಲವ್ಯಾಧಿಯೂ (ಪೈಲ್ಸ್) ಒಂದು. ಇದಕ್ಕೆ ಹೆಮೆರಾಯ್ಡ್ ಅಥವಾ ಮೊಳೆರೋಗ ಎಂದೂ ಹೆಸರಿದೆ. ಯಾರೊಂದಿಗೂ ಹೇಳಿಕೊಳ್ಳಲು ಆಗದೆ ಮುಜುಗರಪಡುವ ಈ ಕಾಯಿಲೆಯ ಹಿಂಸೆ ಅನುಭವಿಸಿದವರಿಗೆ ಮಾತ್ರ ಗೊತ್ತು.

ಗುದನಾಳದ ಒಳಪದರದಲ್ಲಿ ಇರುವ ರಕ್ತನಾಳಗಳು ಸೋಂಕಿಗೊಳಗಾಗಿ ಉಬ್ಬಿಕೊಂಡು ಮಲವಿಸರ್ಜನೆಯ ಸಮಯದಲ್ಲಿ ಒತ್ತಲ್ಪಟ್ಟು ಬಿರಿದು ರಕ್ತ ಒಸರುತ್ತದೆ. ಜತೆಗೆ ಗುದದ್ವಾರದಲ್ಲಿ ಚರ್ಮದ ನೋವಿನ ಗುಳ್ಳೆ ಕಾಣಿಸಿಕೊಳ್ಳುತ್ತದೆ. ಇದು ಮಲವಿಸರ್ಜನೆ ಮಾಡುವಾಗ ನೋವನ್ನು ಉಂಟುಮಾಡುತ್ತದೆ.

ಮೂಲವ್ಯಾಧಿ ಬೇರೆ ಬೇರೆ ಬಗೆಯಲ್ಲಿ ಕಂಡು ಬರುತ್ತದೆ. ಕೆಲವರಿಗೆ ಗುದದ್ವಾರದಲ್ಲಿ ಸ್ವಲ್ಪ ಹೊರಗಡೆ ಭಾಗದಲ್ಲಿ ಪೈಲ್ಸ್ ಉಂಟಾದರೆ ಇತರರಿಗೆ ಗುದದ್ವಾರದ ಒಳಗೆ ಪೈಲ್ಸ್ ಸಮಸ್ಯೆ (ಫಿಸ್ಟುಲಾ, ಫಿಷರ್ಸ್) ಕಂಡು ಬರುತ್ತದೆ. ಆರೋಗ್ಯ ತಜ್ಞರ ಪ್ರಕಾರ ಮೂಲವ್ಯಾಧಿಗೆ ಬಹು ಮುಖ್ಯ ಕಾರಣವೆಂದರೆ ಮಲಬದ್ಧತೆ. ಸಾಮಾನ್ಯವಾಗಿ ಹೆಚ್ಚು ಕಾಲ ಕುಳಿತು ಕೆಲಸ ಮಾಡುವವರಿಗೆ ಈ ಮೂಲವ್ಯಾಧಿ ಕಂಡುಬರುತ್ತದೆ. ಜೊತೆಗೆ ವ್ಯಾಯಾಮ ಮತ್ತು ದೈಹಿಕ ಚಟುವಟಿಕೆಗಳಲ್ಲಿ ತೊಡಗದೇ ಇರುವವರಿಗೆ ಈ ಸಮಸ್ಯೆ ಕಾಡುತ್ತದೆ.

ಪೈಲ್ಸ್ ಎಂಬುದು ಗುದದ್ವಾರದ ಸುತ್ತಲಿನ ರಕ್ತನಾಳಗಳ ಊತದಿಂದ ಉಂಟಾಗುವ ಸಮಸ್ಯೆಯಾಗಿದೆ. ಇವು ಕೆಲವೊಮ್ಮೆ ಹೊರಗೆ ಗೋಚರಿಸಿದರೆ ಬಾಹ್ಯ ಪೈಲ್ಸ್ ಮತ್ತು ಒಳಗೆ ಇದ್ದರೆ ಆಂತರಿಕ ಪೈಲ್ಸ್ ಎಂದು ಕರೆಯಲಾಗುತ್ತದೆ. ಎರಡೂ ನೋವು, ರಕ್ತಸ್ರಾವ ಮತ್ತು ಅಸ್ವಸ್ಥತೆಯನ್ನು ಉಂಟು ಮಾಡಬಹುದು.

ಆದರೆ ಸರಿಯಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದರಿಂದ ಶಸ್ತ್ರಚಿಕಿತ್ಸೆಗೆ ಒಳಗಾಗದೆಯೇ ಈ ಸಮಸ್ಯೆಯನ್ನು ತಡೆಗಟ್ಟಬಹುದು. ಹಾಗಾಗಿ ಮೊದಲೇ ಈ ಸಮಸ್ಯೆಯನ್ನು ಪತ್ತೆ ಹಚ್ಚಿದರೆ ಚಿಕಿತ್ಸೆಯ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವೇ ಬರುವುದಿಲ್ಲ.

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಸಮಸ್ಯೆ ನಿವಾರಿಸುವ ನ್ಯಾಚುರಲ್ ಡ್ರಿಂಕ್‌ವೊಂದರ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ. ಇದನ್ನು ಕುಡಿಯುವುದರಿಂದ ಪೈಲ್ಸ್ ಸಮಸ್ಯೆ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ. ಈ ಪಾನೀಯವನ್ನು ಗಟ್ಟಿ ಮಜ್ಜಿಗೆ, ಅರಿಶಿನ ಪುಡಿ ಮತ್ತು ಕಪ್ಪು ಉಪ್ಪಿನಿಂದ ತಯಾರಿಸಲಾಗುತ್ತದೆ. ಇದಕ್ಕಾಗಿ ಮೊದಲು ಒಂದು ಬಟ್ಟಲಿನಲ್ಲಿ ಮಜ್ಜಿಗೆ ತೆಗೆದುಕೊಂಡು, ಅದಕ್ಕೆ ಅರಿಶಿನ ಪುಡಿ ಮತ್ತು ಬ್ಲ್ಯಾಕ್ ಸಾಲ್ಟ್ ಅನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ದಿನಕ್ಕೊಮ್ಮೆ ಕುಡಿಯಿರಿ.

ಸೂಕ್ಷ್ಮಜೀವಿಗಳಿಂದ ಉಂಟಾಗುವ ಉರಿಯೂತವನ್ನು ಕಡಿಮೆ ಮಾಡುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ. ಮಲಬದ್ಧತೆಯನ್ನು ಕಡಿಮೆ ಮಾಡಲು ಮತ್ತು ಕರುಳಿನ ಚಲನೆಯನ್ನು ಸುಗಮಗೊಳಿಸಲು ಸಹಾಯ ಮಾಡುತ್ತದೆ. ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ರಕ್ತ ಪರಿಚಲನೆ ಸುಧಾರಿಸುತ್ತದೆ. ಉರಿಯೂತದಿಂದ ತಂಪಾಗಿಸುವ ಪರಿಹಾರವನ್ನು ನೀಡುತ್ತದೆ.

ಈ ಪಾನೀಯವನ್ನು ಕುಡಿಯುವುದೇನೋ ಸರಿ, ಆದರೆ ಇವುಗಳ ಜತೆಗೆ ಆಹಾರ ಪದ್ಧತಿಯಲ್ಲಿ ಕೆಲ ಬದಲಾವಣೆಗಳನ್ನು ಮಾಡಿಕೊಳ್ಳುವುದು ಸಹ ತುಂಬಾ ಮುಖ್ಯವಾಗಿದೆ. ಸಾಕಷ್ಟು ಫೈಬರ್ ಅಂಶವಿರುವ ಆಹಾರವನ್ನು ಸೇವಿಸಿ. ಹೆಚ್ಚು ಧಾನ್ಯದ ಬ್ರೆಡ್‌ಗಳು, ಓಟ್ಸ್, ಬೀನ್ಸ್, ದ್ವಿದಳ ಧಾನ್ಯಗಳು, ಹಸಿರು ತರಕಾರಿಗಳು ಮತ್ತು ಹಣ್ಣುಗಳನ್ನು ಸೇವಿಸಿ. ದಿನಕ್ಕೆ ಕನಿಷ್ಠ 8-10 ಗ್ಲಾಸ್ ನೀರು ಕುಡಿಯಿರಿ. ಅಲ್ಲದೇ, ಆಲ್ಕೋಹಾಲ್, ಚಹಾ ಮತ್ತು ಕಾಫಿಯನ್ನು ಕಡಿಮೆ ಮಾಡಿ. ಮಸಾಲೆಯುಕ್ತ ಆಹಾರ, ಫಾಸ್ಟ್ ಫುಡ್ ಮತ್ತು ಸಂಸ್ಕರಿಸಿದ ಆಹಾರ ಸೇವನೆಯನ್ನು ತಪ್ಪಿಸಿ.

Health tips ಸಾವಿರಾರು ಸಾವಿಗೆ ಕಾರಣವಾಗ್ತಿದೆ ಈ ಎಣ್ಣೆ; ಅತಿಯಾಗಿ ಬಳಸ್ಲೇಬೇಡಿ

TAGGED:#helath #care #tips #files #treament
Share This Article
Facebook Twitter Copy Link Print
Previous Article 4 ವರ್ಷದ ಮಗಳನ್ನು ಕೊಂದು ಸಮುದ್ರಕ್ಕೆ ಎಸೆದ ಮಲತಂದೆ
Next Article Shakti Scheme Effect ಶಕ್ತಿ ಯೋಜನೆ ಎಫೆಕ್ಟ್‌ – ಬಸ್‌ನಲ್ಲಿ ಉಸಿರುಗಟ್ಟಿ ಕಿರುಚಾಡಿದ ಮಹಿಳೆ

Popular Posts

‘ನನಗೂ ಬೇಕಾದ ಖಾತೆ ಸಿಗಲಿಲ್ಲ, ಆದ್ರೆ ನನಗೆ ದುಃಖನೂ ಇಲ್ಲ, ಸಂತೋಷನೂ ಇಲ್ಲ; ಸತೀಶ್ ಜಾರಕಿಹೊಳಿ ಹೊಸ ಬಾಂಬ್

2 Min Read

ಫೋನ್​ ಸ್ವಿಚ್​ ಆಫ್​; ರಾಜೀನಾಮೆ ಬಳಿಕ ರಾಮಲಿಂಗಾರೆಡ್ಡಿ ಹೋಗಿದ್ದು ಎಲ್ಲಿಗೆ?

1 Min Read

ರಾಮಲಿಂಗಾರೆಡ್ಡಿ ರಿಸೈನ್​ ಬೆನ್ನಲ್ಲೇ ಕಾಂಗ್ರೆಸ್​​ ನಲ್ಲಿ ಖರ್ಗೆಗೆ ಸಾಮೂಹಿಕ ರಾಜೀನಾಮೆ!

2 Min Read

ರಾಮಲಿಂಗಾರೆಡ್ಡಿ ರಾಜೀನಾಮೆ ಪ್ರಹಸನ; ಮುಲಾಜಿಲ್ಲದೆ ರಾಜೀನಾಮೆ ಅಂಗೀಕರಿಸಿ ಎಂದು ರಾಹುಲ್​ ಗಾಂಧಿ ಖಡಕ್ ಸೂಚನೆ

1 Min Read

You Might Also Like

ಪ್ರಮುಖಆರೋಗ್ಯ

Onion Secret ದಿನಾಲೂ ಹಸಿ ಈರುಳ್ಳಿ ತಿನ್ನೋದು ಎಷ್ಟು ಸೇಫ್?

2 Min Read
ಪ್ರಮುಖಆರೋಗ್ಯ

ಮೊಬೈಲ್‌ನಲ್ಲಿ ಸದಾ ಸ್ಕ್ರೋಲಿಂಗ್ ಮಾಡುವುದರಿಂದ ಯುವಜನರಲ್ಲಿ ಟೆಕ್ಸ್ಟ್ ನೆಕ್ ಕಾಯಿಲೆ : ವೈದ್ಯರ ಎಚ್ಚರಿಕೆ

1 Min Read
ಪ್ರಮುಖಆರೋಗ್ಯ

ತಂಬಾಕು ಸೇವನೆ ಮಾಡುವ ಯುವ ಜನರಲ್ಲಿ ಹೆಚ್ಚುತ್ತಿದೆ ಕ್ಯಾನ್ಸರ್ ಅಪಾಯ!

1 Min Read
ಪ್ರಮುಖಆರೋಗ್ಯರಿಲೇಷನ್‌ಶಿಪ್

Relationship ಅತಿಯಾದ ಲೈಂಗಿಕತೆಯಿಂದ ವೀರ್ಯಾಣು ಸಂಖ್ಯೆ ಕ್ಷೀಣಿಸುತ್ತಾ? ತಜ್ಞರು ಏನಂತಾರೆ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?