newsics.com
ಉತ್ತರ ರೈಲ್ವೆಯಲ್ಲಿ ಪ್ರಯಾಣಿಕರ ಬೋಗಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಪ್ರಾಯೋಗಿಕ ಅಳವಡಿಕೆಯ ನಂತರ, ದೇಶಾದ್ಯಂತ ರೈಲು ಜಾಲದಾದ್ಯಂತ ತನ್ನ ಸುಮಾರು 74,000 ಬೋಗಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ ಎಂದು ಕೇಂದ್ರ ರೈಲ್ವೆ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ರೈಲ್ವೆ ಪ್ರಯಾಣಿಕರ ಗೋಪ್ಯತೆ ಕಾಪಾಡಿಕೊಳ್ಳುವ ಉದ್ದೇಶದಿಂದ ಬೋಗಿಗಳ ಬಾಗಿಲು ಬಳಿಯ ಸಾಮಾನ್ಯ ಸಂಚಾರ ಪ್ರದೇಶದಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.
ಪ್ರತಿ ರೈಲ್ವೆ ಕೋಚ್‌ನಲ್ಲಿ ನಾಲ್ಕು ಉತ್ತಮ ಗುಣಮಟ್ಟದ ಸಿ.ಸಿ.ಟಿ.ವಿ ಕ್ಯಾಮೆರಾಗಳು (ಪ್ರತಿ ಪ್ರವೇಶ ದ್ವಾರದ ಬಳಿ ಎರಡು) ಹಾಗೂ ಪ್ರತಿ ‘ಲೋಕೋಮೋಟಿವ್’ಗಳಲ್ಲಿ ಅದೇ ರೀತಿಯ ಆರು ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಇದು ‘ಲೋಕೋಮೋಟಿವ್’ನ ಮುಂಭಾಗ, ಹಿಂಭಾಗ ಮತ್ತು ಎರಡೂ ಬದಿಗಳ ದೃಶ್ಯಗಳನ್ನು ಸೆರೆಹಿಡಿಯುತ್ತದೆ ಎಂದು
ಪ್ರತಿಯೊಂದು ರೈಲ್ವೆ ಬೋಗಿಯು ನಾಲ್ಕು ಗುಮ್ಮಟ ಮಾದರಿಯ ಸಿಸಿಟಿವಿ ಕ್ಯಾಮೆರಾಗಳಿಂದ ಆವರಿಸಲ್ಪಡಲಿದ್ದು, ಅವುಗಳಲ್ಲಿ ಎರಡು ಪ್ರತಿ ಪ್ರವೇಶ ಮಾರ್ಗದಲ್ಲಿ ಇರಿಸಲ್ಪಟ್ಟಿರುತ್ತವೆ.
ಪ್ರತಿ ಲೋಕೋಮೋಟಿವ್‌ನಲ್ಲಿ ಆರು ಸಿಸಿಟಿವಿ ಕ್ಯಾಮೆರಾಗಳು ಇರುತ್ತವೆ. ಇದರಲ್ಲಿ ಮುಂಭಾಗ ಮತ್ತು ಹಿಂಭಾಗ ಮತ್ತು ಲೋಕೋಮೋಟಿವ್‌ನ ಎರಡೂ ಬದಿಗಳಲ್ಲಿ ತಲಾ ಒಂದು ಕ್ಯಾಮೆರಾ ಇರುತ್ತದೆ. ಲೋಕೋಮೋಟಿವ್‌ನ ಪ್ರತಿಯೊಂದು ಕ್ಯಾಬ್ (ಮುಂಭಾಗ ಮತ್ತು ಹಿಂಭಾಗ) ಒಂದು ಗುಮ್ಮಟ ಸಿಸಿಟಿವಿ ಕ್ಯಾಮೆರಾ ಮತ್ತು ಎರಡು ಡೆಸ್ಕ್-ಮೌಂಟೆಡ್ ಮೈಕ್ರೊಫೋನ್‌ಗಳನ್ನು ಅಳವಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
https://www.newsics.com/2025/07/14/rat-sits-on-snakes-head-to-save-its-life/