Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Baby sold ಸಾಲ ತೀರಿಸಲು 20 ದಿನದ ಹಸುಗೂಸನ್ನೇ ಮಾರಿದ ದಂಪತಿ! ಮಗು ಖರೀದಿಸಿದ್ದವರ ಸೆರೆ
ಕರ್ನಾಟಕಪ್ರಮುಖ

Baby sold ಸಾಲ ತೀರಿಸಲು 20 ದಿನದ ಹಸುಗೂಸನ್ನೇ ಮಾರಿದ ದಂಪತಿ! ಮಗು ಖರೀದಿಸಿದ್ದವರ ಸೆರೆ

Share
2 Min Read
SHARE

newsics.com

ದಾಂಡೇಲಿ(ಉತ್ತರ ಕನ್ನಡ): ಸಾಲ ತೀರಿಸಲು ಕರುಳ ಬಳ್ಳಿಯನ್ನೇ ಮಾರಾಟ ಮಾಡಿದ ಹೃದಯವಿದ್ರಾವಕ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಹಳೆ ದಾಂಡೇಲಿಯಲ್ಲಿ ನಡೆದಿದೆ.

ಹಳೇ ದಾಂಡೇಲಿ ದೇಶಪಾಂಡೆ ನಗರದ ನಿವಾಸಿ ಮಾಹೀನ್ ಜೂನ್ 17 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗುವಿನ ತಂದೆ ವಸೀಂ ನಜೀರ್ ತುಂಬಾ ಸಾಲ ಮಾಡಿಕೊಂಡಿದ್ದ ಕಾರಣ ಮಗುವನ್ನು 3 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾರೆ.

ಅಂಗನವಾಡಿ ಕಾರ್ಯಕರ್ತೆ ದೂರಿನಿಂದ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದಾರೆ.
ವಸೀಂ ಹಾಗೂ ಮಾಹೀನ್ ದಂಪತಿ ಸಾಲದ ಸುಳಿಯಲ್ಲಿ ಮುಳುಗಿತ್ತು.

ಸಂಘದ ಸಾಲಗಾರರು ಪದೇ ಪದೇ ಮನೆಗೆ ಆಗಮಿಸಿ ಸಾಲ ಮರುಪಾವತಿಸುವಂತೆ ತಾಕೀತು ಮಾಡಿದ್ದರು. ಪ್ರತಿದಿನ ಒಂದಲ್ಲಾ ಒಂದು ಸಾಲಗಾರರು ಮನೆಗೆ ಆಗಮಿಸಿ ಕಿರುಕುಳ ನೀಡಲು ಆರಂಭಿಸಿದ್ದರು. ವಸೀಂ ಹಾಗೂ ಮಾಹೀನ್ ದಂಪತಿ ಕೊನೆಗೆ ತಮ್ಮ ಮಗುವನ್ನೇ ಮಾರಾಟ ಮಾಡಲು ನಿರ್ಧರಿಸಿದ್ದಾರೆ. ಬೇರೆ ದಾರಿ ಕಾಣದೇ ಮಗು ಮಾರಾಟ ಮಾಡಿ ಕನಿಷ್ಠ ಒಂದಷ್ಟು ಸಾಲ ತೀರಿಸಲು ನಿರ್ಧರಿಸಿದ್ದಾರೆ.

ದಂಪತಿ ತಮ್ಮ 20 ದಿನದ ಮಗುವನ್ನು 3 ಲಕ್ಷ ರೂಪಾಯಿಗೆ ಮಾರಾಟ ಮಾಡಲು ನಿರ್ಧರಿಸಿದ್ದಾರೆ. ಜುಲೈ 8 ರಂದು ಧಾರವಾಡಕ್ಕೆ ತೆರಳಿದ ಈ ದಂಪತಿ ಬೆಳಗಾವಿ ಮೂಲದ ನೂರ್ ಅಹಮ್ಮದ್ ಎಂಬಾತನಿಗೆ ಮಾರಾಟ ಮಾಡಿದ್ದಾರೆ.

ಮಗುವಿನ ಆರೈಕೆ, ಸರ್ಕಾರದ ಸವಲತ್ತಿಗಾಗಿ ದಂಪತಿಗಳು ತಾಯಿಕಾರ್ಡ್ ಸೇರಿದಂತೆ ಇತರ ದಾಖಲೆ ಪತ್ರಗಳನ್ನು ಅಂಗನವಾಡಿ ಕಾರ್ಯಕರ್ತೆ ರೇಷ್ಮಾ ಮಹಾದೇವ ಪಾವಸ್ಥರ ಮಾಡಿಕೊಟ್ಟಿದ್ದರು. ಮಗು ಜನಸಿದ ಬಳಿಕ ಮನೆಗೆ ತೆರಳಿದಾಗ ಮಗು ಇಲ್ಲದಿರುವುದು ಅನುಮಾನ ಹೆಚ್ಚಿಸಿದೆ. ವಿಚಾರಿಸಿದರೆ ಹಾರಿಕೆ ಉತ್ತರ ನೀಡಿದ್ದಾರೆ. ಹೀಗಾಗಿ ಕಾರ್ಯಕರ್ತೆ ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ದಾಂಡೇಲಿ ನಗರ ಠಾಣೆಯ ಪೊಲೀಸರು, ಪಿಎಸ್ಐಗಳಾದ ಅಮೀನ್ ಅತ್ತಾರ ಮತ್ತು ಕಿರಣ್ ಪಾಟೀಲ್ ನೇತೃತ್ವದಲ್ಲಿ ಎಎಸ್ಐ ಬಸವರಾಜ ಒಕ್ಕುಂದ, ಪೊಲೀಸ್ ಸಿಬ್ಬಂದಿಗಳಾದ ಸಿದ್ರಾಮ್ ರಾಮರಥ, ಚಂದ್ರಶೇಖರ ಪಾಟೀಲ್, ಜ್ಯೋತಿ ಬಾಳೇಕರ, ಮಹಾಂತೇಶ ಜಾಮಗೌಡ ಜತೆ ಬೆಳಗಾವಿಗೆ ಹೋಗಿ ಆರೋಪಿಗಳನ್ನು ಬಂಧಿಸಿ, ಮಾರಾಟ ಮಾಡಿದ್ದ ಮಗುವನ್ನು ರಕ್ಷಿಸಿದ್ದರು.

ರಕ್ಷಿಸಿದ ಮಗುವಿನ ಸುರಕ್ಷತೆಯ ಬಗ್ಗೆ ಶಿರಸಿಯಲ್ಲಿರುವ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಲಾಗಿದೆ. ಪ್ರಕರಣದಲ್ಲಿ ಮಗುವನ್ನು ಖರೀದಿಸಿದ ಆರೋಪಿಗಳಾದ ಬೆಳಗಾವಿ ಜಿಲ್ಲೆಯ ಆನಗೋಳದ ನಿವಾಸಿಗಳಾದ ನೂರ್ ಮಹಮ್ಮದ್ ಅಬ್ದುಲ್ ಮಜೀದ್ ಮತ್ತು ಕಿಶನ್ ಶ್ರೀಕಾಂತ ಐರೇಕರ ಎಂಬಿಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ಉಳಿದ ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ.

Viral News ಈ ಗ್ರಾಮದ ಮಹಿಳೆಯರು ವರ್ಷಕ್ಕೊಮ್ಮೆ ಗಂಡನನ್ನು ಬದಲಿಸ್ತಾರೆ! ಏನು ಕಾರಣ?

ಮದ್ಯ ಕುಡಿಸಿ ಪ್ರಿಯಕರನ ಜತೆ ಸೇರಿ ಪತಿಯ ತಲೆ ಕತ್ತರಿಸಿ ಕೊಲೆ ಮಾಡಿದ ಪತ್ನಿ.!

Darshan Visa Issue: ನಟ ದರ್ಶನ್‌ಗೆ ‘ನೋ ಎಂಟ್ರಿ’ ಎಂದ ಯುರೋಪ್; ವೀಸಾ ರದ್ದು‌ ಮಾಡಲು ಕಾರಣವೇನು?

TAGGED:Couple sells 20-day-old baby to pay off debt! Those who bought the baby arrested
Share This Article
Facebook Twitter Copy Link Print
Previous Article Bomb Threat ಭಟ್ಕಳ ಪೊಲೀಸ್ ಠಾಣೆಗೆ ಬಾಂಬ್ ಬೆದರಿಕೆ – ಪೊಲೀಸರು ಹೈ ಅಲರ್ಟ್
Next Article Today’s prediction ಇಂದಿನ ರಾಶಿ ಭವಿಷ್ಯ, 12-07-2025, ಶನಿವಾರ, ಇಂದಿನ ನಿಮ್ಮ ಗ್ರಹಗತಿ ಹೇಗಿದೆ?

Popular Posts

India – Zimbabwe Cricket Match ಇಂದಿನಿಂದ ಭಾರತ-ಜಿಂಬಾಬ್ವೆ ಟಿ20 ಸರಣಿ ಆರಂಭ

2 Min Read

Commonwealth Games 2026 | ಕಾಮನ್‌ವೆಲ್ತ್ ಗೇಮ್ಸ್ 2026: ಭಾರತದ ಪದಕಗಳ ಭರವಸೆ ಯಾವ ಕ್ರೀಡೆಗಳಲ್ಲಿ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

Devegowda grand daughter video viral |ಮರಿ ಮೊಮ್ಮಗಳೊಂದಿಗೆ ಆಟವಾಡಿದ ದೇವೇಗೌಡ-ಚೆನ್ನಮ್ಮ ದಂಪತಿಯ ಭಾವನಾತ್ಮಕ ವಿಡಿಯೋ ವೈರಲ್

2 Min Read

Clean Bangalore Drive | ಸ್ವಚ್ಛ ಬೆಂಗಳೂರು’ ಅಭಿಯಾನ: ಕಸ ಮುಕ್ತ, ಸುಂದರ ರಾಜಧಾನಿ ನಿರ್ಮಾಣಕ್ಕೆ ಸರ್ಕಾರದ ಮಹತ್ವದ ಹೆಜ್ಜೆ

3 Min Read

You Might Also Like

ಮನರಂಜನೆದೇಶಪ್ರಮುಖವೈರಲ್

Anurag Kashyap Controversy ನಗ್ನ ದೃಶ್ಯಕ್ಕೆ ನಿರಾಕರಣೆಯಿಂದ ಅನುರಾಗ್ ಕಶ್ಯಪ್ ಸಿನಿಮಾ ಕೈತಪ್ಪಿತು… ನಟಿಯ ಬಹಿರಂಗ ಮಾತು

2 Min Read
ಕರ್ನಾಟಕ

Gokarn Temple New Rules | ಗೋಕರ್ಣ ಮಹಾಗಣಪತಿ ದೇವಸ್ಥಾನದಲ್ಲಿ ಇನ್ಮುಂದೆ ಸ್ಪರ್ಶ ದರ್ಶನ ಇಲ್ಲ; ಭಕ್ತರಿಗೆ ಹೊಸ ನಿಯಮ

1 Min Read
ಕರ್ನಾಟಕದೇಶಪ್ರಮುಖಮನರಂಜನೆವಿದೇಶ

Commonwealth Bharatanatyam ಕಾಮನ್‌ವೆಲ್ತ್ ಉದ್ಘಾಟನಾ ಸಮಾರಂಭದಲ್ಲಿಂದು ಕಲಬುರಗಿ ಯುವತಿಯ ಭರತನಾಟ್ಯ!

1 Min Read
ಮನರಂಜನೆಕರ್ನಾಟಕದೇಶಪ್ರಮುಖ

CM Vijay’s Last Film ಬೆಂಗಳೂರಿನಲ್ಲೂ ‘ಜನ ನಾಯಗನ್’ ಜ್ವರ: ವಿಜಯ್ ಕೊನೆಯ ಸಿನಿಮಾಗೆ ಅಭಿಮಾನಿಗಳ ಅದ್ಧೂರಿ ಸ್ವಾಗತ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?