Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಚೀನದ ಅಧ್ಯಕ್ಷ ಕ್ಸಿ ಜಿನ್‌ ಪಿಂಗ್‌ ಆಧಿಪತ್ಯ ಅಂತ್ಯ?: ಇದರಿಂದ ಭಾರತಕ್ಕೇನು ಪರಿಣಾಮ?
ಪ್ರಮುಖವಿದೇಶ

ಚೀನದ ಅಧ್ಯಕ್ಷ ಕ್ಸಿ ಜಿನ್‌ ಪಿಂಗ್‌ ಆಧಿಪತ್ಯ ಅಂತ್ಯ?: ಇದರಿಂದ ಭಾರತಕ್ಕೇನು ಪರಿಣಾಮ?

Share
4 Min Read
SHARE

newsics.com

ಜಗತ್ತಿನಲ್ಲಿ ಅಮೆರಿಕಕ್ಕೆ ಪ್ರತಿಯಾಗಿ ಮತ್ತೊಂದು ಜಾಗತಿಕ ಶಕ್ತಿಯಾಗಿ ಬೆಳೆಯುವ ಘೋಷಣೆಗಳನ್ನು ಮಾಡಿದ್ದ ಚೀನದಲ್ಲಿ ಈಗ ರಾಜಕೀಯ ಅಸ್ಥಿರತೆ ಶುರುವಾದಂತಿದೆ. 13 ವರ್ಷಗಳಿಂದ ಏಕಚಕ್ರಾಧಿಪತ್ಯ ನಡೆಸಿದ್ದ ಚೀನದ ಅಧ್ಯಕ್ಷ ಕ್ಸಿ ಜಿನ್‌ ಪಿಂಗ್‌ ಅಧಿಕಾರದಿಂದ ಕೆಳಗಿಳಿಯಲಿದ್ದಾರೆ ಎನ್ನಲಾಗುತ್ತಿದೆ.

ಚೀನವೊಂದು ಕಮ್ಯುನಿಸ್ಟ್‌ ರಾಷ್ಟ್ರವಾಗಿದ್ದು, ಇಲ್ಲಿ ಕೇವಲ ಒಂದು ಪಕ್ಷ ಮಾತ್ರ ಅಸ್ತಿತ್ವದಲ್ಲಿರುತ್ತದೆ. ಇಡೀ ದೇಶದ ಎಲ್ಲ ಚಟುವಟಿಕೆಗಳನ್ನು ಇದೊಂದೇ ಪಕ್ಷ ನಿರ್ಧರಿಸುತ್ತದೆ. ಹೀಗಾಗಿ ಇಲ್ಲಿ ಸರಕಾರದ ನೀತಿಗಳು ತಪ್ಪಾದಾಗ ಅದನ್ನು ಪ್ರಶ್ನೆ ಮಾಡಲು ಯಾರಿಗೂ ಅವಕಾಶವಿರುವುದಿಲ್ಲ. 1921ರಲ್ಲಿ ಸ್ಥಾಪನೆಯಾದ ಚೀನ ಕಮ್ಯನಿಸ್ಟ್‌ ಪಕ್ಷ ಪ್ರಸ್ತುತ ಚೀನದಲ್ಲಿ ಆಡಳಿತ ನಡೆಸುತ್ತಿದೆ. 1927-49ರವರೆಗೆ ನಡೆದ ನಾಗರಿಕ ಯುದ್ಧದಲ್ಲಿ ಗೆದ್ದ ಈ ಪಕ್ಷ 1949ರಲ್ಲಿ ಚೀನವೊಂದು ಕಮ್ಯುನಿಸ್ಟ್‌ ರಾಷ್ಟ್ರ ಎಂದು ಘೋಷಣೆ ಮಾಡಿತು.
ಪ್ರತಿಯೊಂದರ ಮೇಲೂ ಹದ್ದಿನ ಕಣ್ಣು
ಚೀನದಲ್ಲಿ ಅಧಿಕಾರದಲ್ಲಿರುವ ಕಮ್ಯುನಿಸ್ಟ್‌ ಪಾರ್ಟಿ ಆಫ್ ಚೀನ (ಸಿಪಿಸಿ)ವು ಸರಕಾರ‌, ಮಿಲಿಟರಿ, ಮಾಧ್ಯಮ ಸೇರಿದಂತೆ ಪ್ರತಿಯೊಂದರ ಮೇಲೂ ನಿಯಂತ್ರಣ ಹೊಂದಿದೆ. ಅಧ್ಯಕ್ಷರಿಗೆ ಸಂಪೂರ್ಣ ಅಧಿಕಾರವಿದ್ದರೆ ಆಡಳಿತದಲ್ಲಿ ನೆರವಾಗಲು ಪ್ರಧಾನಿಯನ್ನು ನೇಮಕ ಮಾಡಲಾಗಿರುತ್ತದೆ.

ಇದಲ್ಲದೇ ಒಂದು ಸಂಸದೀಯ ಸಮಿತಿ ಸಹ ಇದ್ದು, ಸರಕಾರ‌ದ ಪ್ರಮುಖ ನಿರ್ಧಾರಗಳಲ್ಲಿ ಇದರ ಪಾತ್ರ ಪ್ರಮುಖವಾದುದಾಗಿದೆ. ದೇಶಕ್ಕೆ ಬೇಕಾದ ಎಲ್ಲ ನಿರ್ಧಾರಗಳನ್ನು ಸಿಪಿಸಿ ತೆಗೆದುಕೊಳ್ಳುತ್ತದೆ. ಚೀನದ ಮಿಲಿಟರಿ ಸಹ ಈ ಪಕ್ಷದ ಅಡಿಯಲ್ಲೇ ಕೆಲಸ ಮಾಡುತ್ತದೆ. ಜಿನ್‌ಪಿಂಗ್‌ ಪಕ್ಷದ ಮೇಲೆ ನಿಯಂತ್ರಣ ಹೊಂದಿದ್ದು, ಎಲ್ಲ ನಿರ್ಧಾರಗಳನ್ನು ಅವರೇ ತೆಗೆದುಕೊಳ್ಳುತ್ತಿದ್ದರು ಎನ್ನಲಾಗಿದೆ.
ಜಿನ್‌ಪಿಂಗ್‌ ಚಕ್ರಾಧಿಪತ್ಯ ಕುಸಿತ ಆರಂಭ?
13 ವರ್ಷಗಳಿಂದ ಚೀನದಲ್ಲಿ ಚಕ್ರವರ್ತಿಯಾಗಿ ಮೆರೆದ ಜಿನ್‌ಪಿಂಗ್‌ ಅಧಿಕಾರದ ಅಂತ್ಯಕಾಲ ಸನ್ನಿಹಿತವಾಗುತ್ತಿದೆ ಎಂಬುದಕ್ಕೆ ಹಲವು ನಿದರ್ಶನಗಳು ಪುಷ್ಟಿ ನೀಡಿವೆ. ಇತ್ತೀಚಿನ ಕೆಲವು ತಿಂಗಳಲ್ಲಿ ಜಿನ್‌ಪಿಂಗ್‌ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಇದಕ್ಕೆ ಆರೋಗ್ಯ ಸ್ಥಿತಿ ಕಾರಣ ಎಂದು ವರದಿಗಳು ತಿಳಿಸಿದರೂ, ಪಕ್ಷದಿಂದ ಜಿನ್‌ಪಿಂಗ್‌ ಮೇಲೆ ಒತ್ತಡ ಹೆಚ್ಚಾಗಿದೆ ಎಂಬ ಮಾತುಗಳೂ ಕೇಳಿಬಂದಿವೆ. ಅಲ್ಲದೇ ಬ್ರಿಕ್ಸ್‌ ಶೃಂಗಸಭೆಯಲ್ಲೂ ಕ್ಸಿ ಕಾಣಿಸಿಕೊಳ್ಳದಿರುವುದು ಈ ಊಹಾಪೋಹಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ.
ಪಕ್ಷದ ಮೇಲಿನ ಹಿಡಿತ ಸಡಿಲವಾಯಿತೇ?
ಆಡಳಿತದ ಮೇಲೆ ಜಿನ್‌ಪಿಂಗ್‌ ಹಿಡಿತ ಮತ್ತಷ್ಟು ದುರ್ಬಲಗೊಂಡಿದೆ ಎಂಬುದನ್ನು ತಿಳಿಸುವ ಮತ್ತಷ್ಟು ಬೆಳವಣಿಗೆಗಳು ಚೀನದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದಿವೆ. ಸೇನೆಯಲ್ಲಿ ಕೆಲಸ ಮಾಡುತ್ತಿದ್ದ ಜಿನ್‌ಪಿಂಗ್‌ ಆಪ್ತರನ್ನು ಇತ್ತೀಚೆಗೆ ಕೆಲಸದಿಂದ ತೆಗೆಯಲಾಗಿದೆ. ಹಲವು ಉನ್ನತ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಇದು ಸೇನೆಯ ಮೇಲೆ ಉಪಾಧ್ಯಕ್ಷ ಜಾಂಗ್‌ ಯೂಕ್ಸಿಯಾ ಹಿಡಿತ ಸಾಧಿಸಿದ್ದಾರೆ ಎಂಬುದನ್ನು ತೋರಿಸುತ್ತದೆ.

ಅಲ್ಲದೇ ಕಮ್ಯುನಿಸ್ಟ್‌ ಪಕ್ಷದಲ್ಲಿರುವ ಸುಧಾರಣವಾದಿಗಳು ಅಂದರೆ ಜಿನ್‌ಪಿಂಗ್‌ ವಿರೋಧಿಗಳು ಮೇಲುಗೈ ಸಾಧಿಸುತ್ತಿದ್ದಾರೆ. ರಾಷ್ಟ್ರೀಯ ಮಾಧ್ಯಮಗಳಲ್ಲಿ ಜಿನ್‌ಪಿಂಗ್‌ ಅವರ ಭಾಷಣಗಳ ಪ್ರಮಾಣ ಕುಸಿಯುವುದರಲ್ಲಿ ವಿರೋಧಿಗಳ ಕೈವಾಡ ಹೆಚ್ಚಾಗುತ್ತಿದೆ ಎನ್ನಲಾಗಿದೆ.
ಜಿನ್‌ಪಿಂಗ್‌ ಉತ್ತರಾಧಿಕಾರಿ ಯಾರು?
ಕ್ಸಿ ಜಿನ್‌ ಪಿಂಗ್‌ ಅವರಿಗೆ ಅಧಿಕಾರದ ಮೇಲಿನ ಹಿಡಿತ ಕಡಿಮೆಯಾಗುತ್ತಿರುವುದು ಚೀನದ ವಿದೇಶಾಂಗನೀತಿಯ ಮೇಲೆ ಭಾರೀ ಪರಿಣಾಮ ಬೀರುತ್ತಿದೆ. ಹೀಗಾಗಿ ಇದನ್ನು ಮೀರಿ ಚೀನದ ಸಾರ್ವಭೌಮತ್ವ ಉಳಿಸುವ ನಾಯಕನನ್ನು ಉತ್ತರಾಧಿಕಾರಿ ಮಾಡಲು ಚರ್ಚೆ ಆರಂಭವಾಗಿದೆ. ಇದಾದರೆ ಉಪಾಧ್ಯಕ್ಷ ಜನರಲ್‌ ಜಾಂಗ್‌ ಯೂಕ್ಸಿಯಾ, ಪ್ರಧಾನಿ ಲೀ ಕಿಯಾಂಗ್‌ ಅಥವಾ ವಾಂಗ್‌ ಯಾಂಗ್‌, ಲಿ ಝಾಂಶು, ಝಾವ್‌ ಲೆಜಿ ಅವರು ಮುಂದಿನ ಅಧ್ಯಕ್ಷರಾಗಬಹುದು ಎನ್ನಲಾಗುತ್ತಿದೆ. ಏಕಪಕ್ಷ ಆಡಳಿತದ ಚೀನದಲ್ಲಿ ಉತ್ತರಾಧಿಕಾರಿ ನೇಮಕವೂ ಸಹ ಗೊಂದಲದ ಗೂಡಾಗಿ ಪರಿಣಮಿಸಿದೆ.
ಜಿನ್‌ಪಿಂಗ್‌ ಅಧಿಕಾರ ಕಳೆದುಕೊಂಡರೆ ಏನಾಗುತ್ತದೆ?
– ಚೀನದಲ್ಲಿ ಅಧಿಕಾರಕ್ಕಾಗಿ ಗಲಾಟೆ ಆರಂಭವಾಗಬಹುದು
– ಟಿಬೆಟ್‌, ತೈವಾನ್‌ ಮೇಲಿರುವ ನೀತಿಗಳು ಬದಲಾಗಬಹುದು
– ಚೀನದಲ್ಲಿ ಸೆನ್ಸಾರ್‌ಶಿಪ್‌ ಮತ್ತಷ್ಟು ಹೆಚ್ಚಾಗಬಹದು
– ದಕ್ಷಿಣ ಚೀನ ಸಮುದ್ರದಲ್ಲಿನ ಮಿಲಿಟರಿ ಚಟುವಟಿಕೆಗೆ ಬ್ರೇಕ್‌
– ಜಾಗತಿಕ ಮಾರುಕಟ್ಟೆ, ವ್ಯಾಪಾರದಲ್ಲಿ ಭಾರೀ ತಲ್ಲಣ ಸಾಧ್ಯತೆ
ಜಿನ್‌ಪಿಂಗ್‌ ಅಧಿಕಾರ ಕಿತ್ತುಕೊಳ್ಳಲು ಕಸರತ್ತು
ಚೀನದಲ್ಲಿ ಏಕಚಕ್ರಾಧಿಪತಿಯಾಗಿ ಮೆರೆಯುತ್ತಿರುವ ಜಿನ್‌ಪಿಂಗ್‌ ಅಧಿಕಾರದಿಂದ ಇಳಿಸಲು ಭಾರೀ ಕಸರತ್ತುಗಳು ನಡೆಯುತ್ತಿವೆ ಎನ್ನಲಾಗಿದೆ.
ಪಕ್ಕಾ ಕಮ್ಯುನಿಸ್ಟ್‌ ನಾಯಕ ಜಿನ್‌ಪಿಂಗ್‌
ಚೀನದಲ್ಲಿ ಮಾ ಜೆಡಾಂಗ್‌ ಬಳಿಕ ಶಕ್ತಿಶಾಲಿ ನಾಯಕ ಎನಿಸಿಕೊಂಡಿದ್ದು ಕ್ಸಿ ಜಿನ್‌ ಪಿಂಗ್‌. 1953ರಲ್ಲಿ ಜನಿಸಿದ ಕ್ಸಿ, ಪಕ್ಷದಲ್ಲಿ ಒಂದೊಂದೇ ಮೆಟ್ಟಿಲೇರುತ್ತಾ ಅಧ್ಯಕ್ಷ ಗಾದಿಗೆ ತಲುಪಿದ ರಾಜತಾಂತ್ರಿಕ ನಿಪುಣ. ಪ್ರತೀ ಹಂತ ಮೇಲೇರಿದಾಗಲೂ ತನ್ನ ವಿರೋಧಿಗಳನ್ನು ಇಲ್ಲವಾಗಿಸುತ್ತಾ ತನ್ನ ಅಧಿಕಾರವನ್ನು ಗಟ್ಟಿಗೊಳಿಸಿಕೊಂಡ ಚಾಣಾಕ್ಷ. ಇದಕ್ಕಾಗಿ ಆತ ನಡೆಸಿದ ಭ್ರಷ್ಟಾಚಾರ ವಿರೋಧಿ ಮಾರಣಹೋಮ, ಅಧಿಕಾರದ ನಿಯಮಗಳಲ್ಲಿನ ಬದಲಾವಣೆಯೇ ಸಾಕ್ಷಿ. ಮಾಧ್ಯಮಗಳ ಮೇಲೆ ಅತೀ ಹೆಚ್ಚು ನಿರ್ಬಂಧ ವಿಧಿಸಿದ ಅಧ್ಯಕ್ಷ ಕ್ಸಿ, ಚೀನದ ವಿಚಾರಗಳನ್ನು ಹೊರ ಜಗತ್ತಿನಿಂದ ಮುಚ್ಚಿಟ್ಟರು. ಅಲ್ಲದೇ ಒನ್‌ಬೆಲ್ಟ್ ಒನ್‌ ರೋಡ್‌, ಹಿಂದೂ ಮಹಾಸಾಗರದಲ್ಲಿ ಸೇನಾ ಬಲ ಹೆಚ್ಚಳ, ಅಮೆರಿಕದ ನೀತಿಗಳನ್ನು ವಿರೋಧಿಸುವ ಧೈರ್ಯ ತೋರಿದ ಏಕೈಕ ನಾಯಕ ಜಿನ್‌ಪಿಂಗ್‌.

ಜಿನ್‌ಪಿಂಗ್‌ ಇಳಿದರೆ ಭಾರತಕ್ಕೇನು ಪರಿಣಾಮ?
ಭಾರತಕ್ಕೆ ಮಗ್ಗುಲ ಮುಳ್ಳಾಗಿ ಕಾಡುತ್ತಿರುವ ಚೀನದ ಅಧ್ಯಕ್ಷ ಜಿನ್‌ಪಿಂಗ್‌ ಅಧಿಕಾರದಿಂದ ಕೆಳಗಿಳಿದರೆ ಭಾರತಕ್ಕೆ ಹೆಚ್ಚಿನ ಲಾಭವಾಗುತ್ತದೆ ಎಂದು ಅಂದಾಜಿಸಲಾಗುತ್ತಿದೆ. ಪ್ರಸ್ತುತ ಬ್ರಿಕ್ಸ್‌ ಶಂಗದಲ್ಲಿ ಜಿನ್‌ಪಿಂಗ್‌ ಭಾಗಿಯಾಗದ್ದು ಭಾರತದ ಪ್ರಭಾವವನ್ನು ಹೆಚ್ಚು ಮಾಡಿದೆ. ಚೀನದ ವ್ಯಾಪಾರ ಜಾಗತಿಕವಾಗಿ ಕುಸಿದರೆ ಅದು ಭಾರತಕ್ಕೆ ಲಾಭ ತಂದುಕೊಡಲಿದೆ ಎನ್ನಲಾಗಿದೆ. ಹಿಂದೂ ಮಹಾಸಾಗರವನ್ನು ವಶಪಡಿಸಿಕೊಳ್ಳುವ ಕನಸನ್ನು ಹೊತ್ತಿರುವ ಜಿನ್‌ಪಿಂಗ್‌, ಅಧಿಕಾರದಿಂದ ಕೆಳಗಿಳಿದರೆ ಭಾರತಕ್ಕೆ ಎದುರಾಗಿರುವ ಒಂದಷ್ಟು ಭದ್ರತೆಯ ಸಮಸ್ಯೆಗಳು ಇಲ್ಲವಾಗಲಿವೆ ಎನ್ನಲಾಗಿದೆ.

Tips and Tricks: ಬಾಗಿಲು-ಕಿಟಕಿಗಳೆಲ್ಲವೂ ತುಕ್ಕು ಹಿಡಿದು ಜಾಮ್ ಆಗಿದ್ಯಾ? ಈ ರೀತಿ ಮಾಡಿ ತಕ್ಷಣ ಓಪನ್‌ ಆಗುತ್ತೆ

TAGGED:Is the reign of Chinese President Xi Jinping coming to an end?
Share This Article
Facebook Twitter Copy Link Print
Previous Article Tips and Tricks: ಬಾಗಿಲು-ಕಿಟಕಿಗಳೆಲ್ಲವೂ ತುಕ್ಕು ಹಿಡಿದು ಜಾಮ್ ಆಗಿದ್ಯಾ? ಈ ರೀತಿ ಮಾಡಿ ತಕ್ಷಣ ಓಪನ್‌ ಆಗುತ್ತೆ
Next Article Rain Alert : ಜುಲೈ 15ರ ಬಳಿಕ `ಮುಂಗಾರು ಮಳೆ’ ಚುರುಕು : ಹವಾಮಾನ ಇಲಾಖೆ ಮುನ್ಸೂಚನೆ

Popular Posts

The Odyssey Records | ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’ಗೆ ಜಾಗತಿಕ ಕ್ರೇಜ್

3 Min Read

US Iran War Updates | ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ತೀವ್ರ: 11ನೇ ರಾತ್ರಿ ಕೂಡ ವಾಯುದಾಳಿ, ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆ

2 Min Read

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read

You Might Also Like

ಕರ್ನಾಟಕದೇಶಪ್ರಮುಖ

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read
ದೇಶಪ್ರಮುಖ

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read
ಕರ್ನಾಟಕಪ್ರಮುಖ

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read
ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?