newsics.com
ತಿರುವನಂತಪುರಂ: ಮಹಿಳಾ ಅರಣ್ಯಾಧಿಕಾರಿಯೊಬ್ಬರು 16 ಅಡಿ ಉದ್ದದ ಕಾಳಿಂಗ ಸರ್ಪವನ್ನು 6 ನಿಮಿಷದಲ್ಲಿ ಸೆರೆ ಹಿಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪರುತಿಪಲ್ಲಿ ಅರಣ್ಯ ಶ್ರೇಣಿಯ ಬೀಟ್ ಅರಣ್ಯ ಅಧಿಕಾರಿ ರೋಶ್ನಿ, ತಿರುವನಂತಪುರದ ಮೂಡಿಲ್ ಪ್ರದೇಶದಲ್ಲಿ ಕಾಳಿಂಗ ಸರ್ಪವನ್ನು ಸೆರೆಹಿಡಿದ್ದಾರೆ. ಈ ವೇಳೆ 20 ಕೆಜಿಯ ಕಾಳಿಂಗ ಸರ್ಪವು 3 ಬಾರಿ ಕಚ್ಚಲು ಪ್ರಯತ್ನಿಸಿರುವುದು ವೈರಲ್ ವಿಡಿಯೋದಲ್ಲಿ ಕಂಡಿದೆ.
ಮೊದಲಿಗೆ ಕಟ್ಟಿಗೆಗೆ ಒಂದು ಚೀಲ ಕಟ್ಟಿ ಅದರೊಳಗೆ ಹಾವು ಒಳನುಸುಳುವಂತೆ ಮಾಡುತ್ತಾರೆ. ಬಳಿಕ ಹಾವಿನ ಬಾಲ ಹಿಡಿದು ಅದನ್ನು ನಿಧಾನವಾಗಿ ಚೀಲಕ್ಕೆ ತುಂಬುತ್ತಾರೆ. ನಂತರ ಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ.