newsics.com
ಯಾದಗಿರಿ: ಮೊಹರಂ ದಿನದ ಅಂಗವಾಗಿ ಅಗ್ನಿಕುಂಡ ತುಳಿದ ಕೆಲವೇ ಗಂಟೆಗಳಲ್ಲಿ ಪೂಜಾರಿ ಹಠಾತ್ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟ ದಾರುಣ ಘಟನೆ ಯಾದಗಿರಿಯ ಶೆಟ್ಟಿಕೇರಾ ಗ್ರಾಮದಲ್ಲಿ ನಡೆದಿದೆ.
ಮೃತಪಟ್ಟ ವ್ಯಕ್ತಿ ಹಳ್ಳೆಪ್ಪ ಪೂಜಾರಿ (44) ಎಂದು ಗುರುತಿಸಲಾಗಿದೆ.
ಗ್ರಾಮದಲ್ಲಿ ನಡೆಯುತ್ತಿದ್ದ ಮೊಹರಂ ಆಚರಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಅಗ್ನಿಕುಂಡ ತುಳಿದ ನಂತರ ಸ್ವಲ್ಪ ಆಯಾಸ ಸ್ಥಿತಿಯಲ್ಲಿದ್ದ ಅವರು ಮನೆಯತ್ತ ಹೊರಟು ಮನೆ ತಲುಪುವಷ್ಟರಲ್ಲಿ ಕುಸಿದು ಬಿದ್ದಿದ್ದಾರೆ. ಗ್ರಾಮಸ್ಥರು ತಕ್ಷಣ ಸ್ಥಳೀಯ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ಯಲು ಯತ್ನಿಸಿದರೂ, ತುರ್ತು ಚಿಕಿತ್ಸೆಗೆ ಅವಕಾಶ ಸಿಗದೇ ಹೃದಯಾಘಾತದ ಪರಿಣಾಮದಿಂದ ಮಾರ್ಗಮಧ್ಯದಲ್ಲಿಯೇ ಹಳ್ಳೆಪ್ಪ ಪೂಜಾರಿ ಕೊನೆಯುಸಿರೆಳೆದಿದ್ದಾರೆ.
ಈ ಘಟನೆ ಇಡೀ ಗ್ರಾಮದಲ್ಲಿ ಭಾರೀ ಆತಂಕ ಉಂಟುಮಾಡಿದೆ.