newsics.com
ಇಂದಿನವರೆಗೂ ಯಾಕೆ ಸಂಜೆಯ ವೇಳೆ ಮಲಗಬಾರದು ಎಂದು ಯಾರಿಗೂ ಸರಿಯಾಗಿ ಗೊತ್ತಿಲ್ಲ. ಕೇಳಿದರೂ ಹಿರಿಯರು ಸಂಜೆ ಲಕ್ಷ್ಮೀ ಬರುವ ಹೊತ್ತು ಹಾಗಾಗಿ ಮಲಗಬಾರದು ಎಂದು ಹೇಳಿ ಸುಮ್ಮನಾಗಿ ಬಿಟ್ಟಿದ್ದರು. ಹಾಗಾದರೆ ಸಂಜೆಯ ಹೊತ್ತು ಯಾಕೆ ಮಲಗಬಾರದು ಎಂಬುದಕ್ಕೆ ಕಾರಣ ಇಲ್ಲಿದೆ..
ಹಿಂದೂ ಸಂಪ್ರದಾಯದ ಪ್ರಕಾರ ಮುಂಜಾನೆ ಮತ್ತು ಮುಸ್ಸಂಜೆ ಬಹಳ ಪ್ರಾಶಸ್ತ್ಯವಾದ ಸಮಯ. ಈ ಸಮಯದಲ್ಲಿ ದೇವತೆಗಳು ಪರಸ್ಪರ ಭೇಟಿಯಾಗಿ ಮನೆಯ ಸದಸ್ಯರಿಗೆ ಆಶೀರ್ವದಿಸಲು ಬರುತ್ತಾರೆ. ಅಂತಹ ಸಮಯದಲ್ಲಿ ನಾವು ದೇವಾನುದೇವತೆಗಳ ಆಶೀರ್ವಾದ ಪಡೆಯಲು ಸಿದ್ಧರಾಗಿರಬೇಕು. ಹಾಗಾಗಿ ಮಲಗುವುದು ಬೇಡ ಎಂದು ಹೇಳ ಲಾಗುತ್ತದೆ.
ಸಾಮಾನ್ಯವಾಗಿ ಸಂಜೆಯ ವೇಳೆ ಎಲ್ಲರ ಮನೆಯಲ್ಲಿ ದೀಪಗಳನ್ನು ಹಚ್ಚುತ್ತಾರೆ. ಇದನ್ನು ಕೆಲವರು ನಿರಂತರವಾಗಿ ಅನುಸರಿಸಿಕೊಂಡು ಬಂದಿದ್ದಾರೆ. ಇನ್ನು ಕೆಲವರು ಮನೆಯಲ್ಲಿನ ಎಲ್ಲ ದೀಪಗಳನ್ನು ಹಚ್ಚಿ, ದೇವರ ಮನೆಯಲ್ಲಿ ಪೂಜೆ, ಜಪ, ಧ್ಯಾನ ಕೂಡ ಮಾಡುತ್ತಾರೆ. ಇದರಿಂದ ದುಷ್ಟ ಶಕ್ತಿಗಳು ಮನೆಯಿಂದ ಹೊರ ಹೋಗುತ್ತವೆ. ದೇವರು ಮನೆಯೊಳಗೆ ಪ್ರವೇಶಿಸಲು ಅನುಕೂಲ ಮಾಡಿಕೊಡಲಾಗುತ್ತದೆ ಎಂದು ಹೇಳಲಾಗುತ್ತದೆ.
ಸಂಜೆ 5.30ರಿಂದ 7 ಗಂಟೆಯವರೆಗೆ ಸಂಧ್ಯಾ ಕಾಲವಾಗಿದ್ದು, ಇದು ದಿನ ಮತ್ತು ರಾತ್ರಿ ನಡುವೆ ಶಕ್ತಿಯ ಬದಲಾವಣೆಯ ಕಾಲವಾಗಿದೆ.
ಸಂಜೆ ದೀಪ ಹಚ್ಚುವುದು ಅಂಧಕಾರದ ವಿರುದ್ಧ ಬೆಳಕನ್ನು ಪ್ರತಿನಿಧಿಸುತ್ತದೆ, ಇದು ಮನೆಯೊಳಗಿನ ನಕಾರಾತ್ಮಕ ಶಕ್ತಿಗಳನ್ನು ದೂರ ಮಾಡಿ, ಕುಟುಂಬದ ನೆಮ್ಮದಿಯನ್ನು ಹೆಚ್ಚಿಸುತ್ತದೆ. ಈ ಸಮಯದಲ್ಲಿ ನಿದ್ದೆ ಮಾಡುವುದು ಅಲಸ್ಯ, ಅಜ್ಞಾನ ಮತ್ತು ಧರ್ಮದಿಂದ ದೂರ ಇರುವ ಸಂಕೇತವಾಗಿದೆ
ದೇವತೆಗಳು ಪ್ರವೇಶಿಸುತ್ತಾರೆ: ಸಂಜೆಯ ಸಮಯದಲ್ಲಿ ದುರ್ಗಾ, ಲಕ್ಷ್ಮಿ, ಸರಸ್ವತಿ ದೇವತೆಗಳು ಮನೆಯೊಳಗೆ ಪ್ರವೇಶಿಸಿ ಆಶೀರ್ವಾದ ಮಾಡುತ್ತಾರೆ ಎಂಬ ನಂಬಿಕೆ ಇದೆ. ಹಾಗಾಗಿ ಇಂತಹ ಸಮಯದಲ್ಲಿ ಮಕ್ಕಳು ಓದಿನತ್ತ ಚಿತ್ತ ಹರಿಸಬೇಕು. ಹಿರಿಯರು ಮಂತ್ರ ಪಠಿಸುವುದು, ಭಕ್ತಿ ಗೀತೆಗಳನ್ನು ಕೇಳುವುದು, ದೇವರ ಪೂಜೆ ಮಾಡಬೇಕು. ಈ ರೀತಿ ಇದ್ದರೆ ದೇವತೆಗಳು ಆಶೀರ್ವದಿಸುವುದಲ್ಲದೇ ಸಕಲ ಸಮೃದ್ಧಿ ದಯಪಾಲಿಸುತ್ತಾರೆ ಎಂದು ಹೇಳಲಾಗುತ್ತದೆ.
ಸಾಮಾನ್ಯವಾಗಿ ಸಂಜೆಯ ಹೊತ್ತು ಮಲಗಿದರೆ ನಿದ್ದೆ ಸಂಪೂರ್ಣವಾಗುವುದಿಲ್ಲ. ಇದರಿಂದ ಸಂಜೆಯಿಂದ ರಾತ್ರಿಯವರೆಗೆ ಯಾವುದೇ ಕೆಲಸ ಮಾಡಲು ಮನಸ್ಸು ಬರುವುದಿಲ್ಲ. ಸುಸ್ತಾದಂತೆ ಆಗುವುದು, ಇನ್ನು ರಾತ್ರಿ ಕೂಡ ಉತ್ತಮವಾಗಿ ನಿದ್ರೆ ಬರುವುದಿಲ್ಲ.
ದೀಪ ಹಚ್ಚಿ ಪ್ರಾರ್ಥನೆ ಮಾಡುವುದು, ಶ್ಲೋಕ ಪಠಣ ಅಥವಾ ಮಂತ್ರೋಚ್ಚಾರ ಮಾಡುವುದು, ಶಾಂತವಾಗಿ ಧ್ಯಾನದಲ್ಲಿ ಕುಳಿತುಕೊಳ್ಳುವುದು ಮಾಡಬೇಕು.