newsics.com
ಹೈದರಾಬಾದ್: ಕುಟುಂಬವೊಂದು ನ್ಯಾಯಾಲಯದ ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದು, ಮಹಿಳೆ ಸಾವನ್ನಪ್ಪಿದ್ದು,ಪತಿ ಹಾಗೂ ಆಕೆಯ ಇಬ್ಬರು ಮಕ್ಕಳ ಸ್ಥಿತಿ ಗಂಭೀರವಾಗಿದೆ. ತೆಲಂಗಾಣದಲ್ಲ ಈ ಘಟನೆ ನಡೆದಿದೆ.
ರಮ್ಯಾ ಮೃತ ಮಹಿಳೆ ಎಂದು ತಿಳಿದುಬಂದಿದೆ.ಕೋರ್ಟ್ ಕಟ್ಟಡದಿಂದ ಜಿಗಿದು ಮಹಿಳೆ, ಆಕೆಯ ಪತಿ ಹಾಗೂ ಇಬ್ಬರು ಮಕ್ಕಳು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ರಾಯಂಪೇಟೆ ಮಂಡಲದ ಲಕ್ಷ್ಮಾಪುರ ನಿವಾಸಿಯಾದ ರಮ್ಯಾ, ದೌಲತಾಬಾದ್ ನ ನವೀನ್ ಅನ್ನು ಪ್ರೇಮ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳು. ಕೌಟುಂಬಿಕ ಕಲಹದಿಂದಾಗಿ ಪತಿ-ಪತ್ನಿ ನಡುವೆ ಗಲಾಟೆಯಾಗಿದೆ. ನವೀನ್ ತನ್ನ ಪತ್ನಿ ಮನೆಯ ಮೇಲೆಯೇ ಕಳೆದ ವರ್ಷ ಬಾಂಬ್ ಎಸೆದು ಜೈಲಿಗೆ ಸೇರಿದ್ದ. ಬಿಡುಗಡೆಯಾಗಿ ಬಂದ ಬಳಿಕವೂ ಪತ್ನ ಜೊತೆ ಗಲಾಟೆ ಮಾಡಿಕೊಂಡಿದ್ದ. ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ.
ಇದೀಗ ಕುಟುಂಬ ನ್ಯಾಯಾಲಯದ ಕಟ್ಟಡದ ಮೇಲಿಂದ ಜಿಗಿದಿದ್ದು, ಆತ್ಮಹತ್ಯೆಗೆ ಯತ್ನಿಸಿ ರಮ್ಯಾ ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ದಾಖಲಾಗಿರುವ ಮೂವರ ಸ್ಥಿತಿ ಗಂಭೀರವಾಗಿದೆ.